ಅಯ್ದಯ್ದರನಿತಯ್ದು ತಯ್ದಿತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಲಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ! ೪ ನಿನಗಾದುದಿಲ್ಲ ನಾ, ನೀನೆ ನನಗಾದೆ- ನನ್ನ ಕೆಯ್ವಿಡಿದೆ ನೀನಳಲನನುಭವಿಸೆ! ನಿನ್ನ ಚೆಲು...
ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ ರಥವೇರಿ ಬರುತ್ತಿದ್ದ ನೇಸರಗೆ ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ ಹಾರಾಡಿ ನೀಲಿ ಆಗಸದಾಗೆ ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು ಚೆಲ್ಲುತ್ತ ಕನ್ನಡದ ಕಸ್ತೂರಿಯ ಉಣಿಸುತ್ತ ಕಂಪನ್ನು ಬಗೆಬಗೆಯ ಜೀ...
ಹಿರಿಯರು-ಹೊನ್ನೂರುಗಳ ನಡುವೆ ಐದಾರು ಮೈಲು ಅ೦ತರ. ಒ೦ದು ಊರಿಂದ ಮತ್ತೊಂದು ಊರಿಗೆ ಹೋಗಬೇಕಾದರೆ ಚೆನ್ನಾಗಿ ನಡೆಯುವವನಿಗೂ ಎರಡು ತಾಸು ಹಿಡಿಯುತ್ತಿತ್ತು. ಯಾಕಂದರೆ ದಾರಿಯು ಎರಡು ಮೂರು ಮೊರಡಿಗಳನ್ನು ಸುತ್ತುವರಿದು ಏರಿ ಇಳಿದು ಹೋಗು ವಂತಹದು, ಕಲ...
ಒಬ್ಬನೆ ನಿಂತ ದಾರಿ ಬದಿಯಲ್ಲಿ ಕೈ ಬೀಸಿ ಕರೆಯುತ್ತಿರುವ ಅವಳು… ಹೆಪ್ಪುಗಟ್ಟಿದ ನೋವು ಈಗೀಗ ಕರಗುವಂತೆ ನಟಿಸುತ್ತಿದೆ *****...
ನನ್ನ ಹರೆಯದ ಆ ದಿನಗಳಲ್ಲಿ ಅವಳತ್ತ ಗಂಡೊಂದು ಸುಳಿದರೆ, ಪ್ರೀತಿಸುತ್ತಿದ್ದಾನೆ ಅನ್ನಿಸಿ ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ. ನೋಡಿಯೂ ಅವಳತ್ತ ತಿರುಗದೆ ದಾಟಿ ಹೋದರೆ ಅವನು ‘ಅಯ್ಯೋ ಘೋರ ಅಪರಾಧ’ ಎಂದೆನ್ನಿಸಿ ಒಳಗೊಳಗೆ ಒದ್ದಾಡುತ್ತಿದ್ದೆ. ಆ...
‘ಕಾವ್ಯ ಅಂದ್ರ ಕವಿಯ ಮನಿ- -ಯ ಮೇಜವಾನೀ’ – ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟಿಸಿರುವ ಆನಂದ ಝಂಜರವಾಡರ ‘ಶಬ್ದ ಪ್ರಸಂಗ’ ಸಂಕಲನ ಓದುಗನಿಗೆ ಮುಖಾಮುಖಿಯಾಗುವುದೇ ಮೇಲಿನ ಸಾಲುಗಳ ಮೂಲಕ. ಈ ಕವಿಯ ಮನೆಯ ಮೇಜವಾನಿ ಅಂತಿಂಥದಲ್ಲ...
ಹಣೆಯಲ್ಲಿ ಕುಂಕುಮದ ಬೊಟ್ಟು, ಮೈಯ್ಯಲ್ಲಿ ಬಹು ಬೆಲೆಬಾಳ್ವ ಕೇಸರಿಯ ಬಟ್ಟೆ, ಕೈಯಲ್ಲಿ ಮನ- ದನ್ನ ಗೆನೆ ಹಿಡಿದ ಹೂಮಾಲೆ, ಮುಡಿಯಲ್ಲಿ ಬನ- ಮಲ್ಲಿಗೆಯ ಹೆಣಿಕೆ, ಮನದಲ್ಲೆಣಿಕೆ ಈ ನೋವು ಈಗ ಕಳೆಯುವುದೆಂದು ಬಂದಳಾ ಮಾಸತಿಯು ಬಾಳುವೆಯ ಬನ್ನವನು ನುಂಗಿ...
(ಶೋಕಗೀತ) ೧ ಶಕ್ತಿದೈವತದ ಬಲಗೈಯ ಕರವಾಲವೇ, ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ, ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ, ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ! ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ- ನಿನ್ನನೂ ಕಬಳಿಸಿದಳೇ ಮೃತ್ಯು...
‘ಫ್ರಾನ್ಸ್ ಗದ್ಯದ ದೇಶ. ಬೊಸ್ವೆ, ಪಾಸ್ಕಲ್, ಮೊಂತೆಸ್ಕ್ಯೂಗೆ ಹೋಲಿಸಿದರೆ ಜಗತ್ತಿನ ಗದ್ಯ ಲೇಖಕರು ಏನೂ ಅಲ್ಲ. ಬರಹದ ಎಲ್ಲಾ ಪ್ರಕಾರಗಳಲ್ಲಿಯೂ ಗದ್ಯವೆನ್ನುವುದು ಅತ್ಯಂತ ಕಡಿಮೆ ಚಿತ್ರಕವೂ ಮೂರ್ತವೂ ಆದುದು. ಅದೇ ರೀತಿ ಅತ್ಯ೦ತ ಹೆಚ್ಚು ಅ...
ಕೈ ಮುಗದು ಕರ್ಪೂರ ಅಚ್ಚಿ ಕಾಸ್ಕೊಟ್ಟು ತಂಗನಕಾಯ್ ಚಚ್ಚಿ ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ! ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧ ‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ ಝಲ್ ಝಲ್ನೆ ರೂಪಾಯ್ಗೋಳ್ ತಂದಿ ಸುರಿತಿದ್ರೆ ಕೊಡತೌನೆ ಯೆಂಡ! ಇಲ್ದಿದ್ರೆ ತರತೌನೆ ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...








