ಕೂಲಿಗಳು ನಾವು

ಹಿಂದು, ಮುಸ್ಲಿಂ, ಕ್ರಿಶ್ಚಿಯನ್
ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ.
ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ
ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ.

ದೇಶದ ಯಾವ ಮೂಲೆಯಲ್ಲಾದರೂ
ಯಾರೋ ಬಾಂಬು ಸಿಡಿದರೂ ಸಾಕು,
ಅಲ್ಲಿ ನನ್ನದೇ ಹೆಸರು ಮೊದಲು
ಏನು ಮಾಡಲಿ ಬಾಳು ಹಸನಾಗಲು
ರಿಕ್ಷಾ ಹೊಡೆದು ಹೊಟ್ಟೆ ಹೊರೆಯುತ್ತಿರುವೆ.

ವಿಶ್ವದ ಯಾವ ಮುಲೆಯಲ್ಲಾದರೂ
ಯಾರೋ ಕೋಮು ದಂಗೆ ಮಾಡಿದರೂ ಸರಿಯೇ
ಅಲ್ಲಿ ನನ್ನ ಹೆಸರೇ ಮೊದಲು
ಏನು ಮಾಡಲಿ ಹೊಟ್ಟೆಯ ಹಸಿವು ಹಿಂಗಿಸಲು
ದಣಿಯ ಹೊಲದಲ್ಲಿ ನೇಗಿಲು ಹೂಡಿರುವೆ.

ಲೋಕದ ಯಾವ ಮೂಲೆಯಲ್ಲಾದರೂ
ಯಾರೋ ಜನಾಂಗೀಯ ದ್ವೇಷದ ಬೆಂಕಿ ಹಚ್ಚಿದರೂ
ಅಲ್ಲಿ ನನ್ನ ಹೆಸರೇ ಮೊದಲು ಬರುವುದು
ಬೆಂಕಿಯಲಿ ಮೊದಲು ಬೇಯುವವರು ನಾವು.
ಏನು ಮಾಡುವುದು ಬಡತನದಲ್ಲಿ ಬೆಂದವರು
ಹೋಟೆಲ್, ಗ್ಯಾರೇಜ್ ಕೂಲಿಗಳು ನಾವು.

ನಾಡಿನ ಯಾವ ಮುಲೆಯಲ್ಲಾದರೂ
ದೊಂಬಿ, ಗಲಭೆಯಾದರೂ ಸಾಕು
ರಸ್ತೆಯಂಚಿನ ನನ್ನ ಗೂಡಂಗಡಿ
ತಳ್ಳುಬಂಡಿಗಳೇ ಮೊದಲು ಬಲಿಯಾಗುವವು.
ಏನು ಮಾಡಲಿ ಮಡದಿ ಮಕ್ಕಳ ಸಾಕಲು
ಗಂಜಿಗಾಧಾರ ತಳ್ಳುಬಂಡಿಯನೇ ನಂಬಿರುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲ ಬಡಿದವರಾರೋ
Next post ಬಯಕೆ

ಸಣ್ಣ ಕತೆ

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…