ಪರಿವರ್ತನೆ

ಸಿದ್ಧನ ಅಪ್ಪ
ಅವನು ಬೆಪ್ಪ
ಹಗಲಿಡೀ ಮೈಮುರಿ ದುಡಿಯುವನು
ಹಗಲು ಮಲಗಲು
ಚಂದ್ರನು ನಗಲು
ಗಪ್ಪನೆ ಗಡಂಗಿಗೆ ಹೊರಡುವನು

ಕಂಠ ಪೂರ್ತಿ
ಕುಡಿದು ಭರ್ತಿ
ಓಲಾಡುತ ಮನೆಗೆ ಬರುವನು
ಹೆಂಡತಿ ಮಕ್ಕಳ
ಬಡಿದು ಗೋಳು
ಹೊಯ್ದುಕೊಳುತ ಕೂಗಾಡುವನು

ಗಲಾಟೆ ಗದ್ದಲ
ರಸ್ತೆ ಉದ್ದಗಲ
ಕೇಳುವ ಜನರಿಗೆ ಮೋಜಾಗುವುದು
ಅಕ್ಕ ಪಕ್ಕದ
ಮನ ಮಠದ
ಜನರಿಗದು ಕಿರಿ ಕಿರಿ ಮಾಡುವುದು

ಸಿದ್ಧನು ಶಾಲೆಗೆ
ಹೋಗಲು ಅಲ್ಲಿಗೆ
ಮಕ್ಕಳು ಅವಪ್ಪನ ಛೇಡಿಸಿ ನಗುವರು
ಅವಮಾನಿತ ಸಿದ್ಧ
ಮನೆಗೆ ಬಂದ
ನೊಂದು ತಾಯಿಗೆ ಕೊಡುವನು ದೂರು

ಅಮ್ಮಾ ಅಪ್ಪನು
ಏಕ ಕುಡಿವನು?
ಅದರಿಂದ ಆರೋಗ್ಯ ಕೆಡುವದಂತಲ್ಲ
ಕರುಳಲಿ ತೂತು
ಕಿಡ್ನಿಯು ಕೊಳೆತು
ಬಳಲಿ ಬಳಲಿ ಬೇಗ ಸಾಯುವರಂತಲ್ಲ

ಕುಡಿತದ ಚಟವ
ಬಿಡಿಸೋ ಭಾರವು
ನಿನ್ನದು ಅಪ್ಪನ ಪತ್ನಿಯೇ ನೀ ಕೇಳು
ಅಪ್ಪನು ಸತ್ತರೆ
ದಿಕ್ಕಾರು ಆಸರೆ
ಸನ್ಮಾರ್ಗದಿ ನಡೆಯಲು ನೀ ಹೇಳು

ಸಿದ್ಧನು ಹೇಳಿದ
ವಿಷಯ ಕೇಳಿದ
ಅವನಪ್ಪನು ಕುಡಿತವನು ಬಿಟ್ಟುಕೊಟ್ಟ
ದುಡಿದ ಹಣವನು
ಬ್ಯಾಂಕಲಿ ಅವನು
ಕೂಡಿಡುತ್ತಲೇ ಸಿದ್ಧನನು ಓದಿಸಿಬಿಟ್ಟ.

ಬೆಳೆದನು ಸಿದ್ಧ
ಹಣವನ್ನು ಗಳಿಸಿದ
ಮುಪ್ಪಿನ ಮಾತಾ ಪಿತರನು ಸಾಕಲು
ಆ ದಿನ ನೆನಪು
ಮಗನ ಕದಪು
ನೇವರಿಸುತ ಸೂಸುವ ಹರ್ಷದ ಹೊನಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯಕೆ
Next post ಯಶಸ್ಸು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…