ಆ ಕರುಣೆಯೆಳನಗೆಯ ಕಡೆನೋಟದೊಂದು ಕಳೆ ಮನಕಿತ್ತ ಸದ್ಭಾವ ಸಂದೀಪ್ತಿಯೊಳಗೆ ನನ್ನೊಳಗು ಹೊರಗು ನಾ ಗುಡಿಬಳಸಿನೊಳಗಲೆದ ಚರಿತಾರ್ಥವೆಡೆಗೊಂಡಿತೀ ಕಬ್ಬದೊಳಗೆ. ಜೀವ ಮಾನುಷ್ಯದೊಳು ಪಡೆವಮಿತ ಭಾವಗಳ ಪಾರಮ್ಯವಿಲ್ಲೆಂಬ ಭೂಮಾನುಭೂತಿ ಋತಸತ್ಯಸಂಜನ್ಯ ರೂಪಸಂಕೇತಗಳ ಸೂಕ್ತಿ ಸಂಗೀತದೀ ದೇಗುಲದ ರೀತಿ ಜೀವವಿದು ಆತ್ಮದೂಷರವಾ...

ರಾಮರಾಯರ ಮಗಳನ್ನು ಜಹಗೀರ್ದಾರ ಶಂಕರರಾಯರ ಮಗ ನಿಗೆ ಕೊಢುತ್ತಾರಂತೆ– ಎಂಬ ವದಂತಿಯು ಊರಲ್ಲೆಲ್ಲಾ ಹರಡಿಕೊಂಡಿತು. ರಾಮರಾಯನ ಮನೆಗೆಹೋಗಿ ಕನ್ಯೆಯನ್ನೂ ವರನನ್ನೂ ನೋಡಿಕೊಂಡು ಬಂದಿದ್ದ ಹೆಂಗಸರು ಅಲ್ಲಲ್ಲಿ ತಮ್ಮ ಪರಿಚಿತರೊಡನೆ ವರಸಾಮ್ಯವನ್ನು...

ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು...

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨ ನಿನ...

ಅನಾಥ ಬಂಧು ನೀನಾಗಿರಲು| ತಬ್ಬಲಿ‌ಎಂದೇಕೆ ಅಂದುಕೊಳ್ಳಲಿ ನಾನು|| ನಿನ್ನೀ ಜಗದಲಿ, ನನ್ನ ಹಿಡಿ ಅನ್ನಕೆ ಕೊರತೆಯೇ| ಒಂದು ಘಳಿಗೆಯ ಪುಟ್ಟನಿದ್ದೆಗೆ ನಿನ್ನೀ ವಿಶಾಲ ಜಗದಲಿ ವಿಶ್ರಾಂತ ಜಾಗಕೆ ಬರವೆ| ನನ್ನ ಸ್ನೇಹ ಸಂಘಕೆ ನಿನ್ನ ಭಕ್ತ ವೃಂದವಿರುವಾಗ ...

ಎಲ್ಲಿ ಹೋದರೊ ಜನರು? ‘ಸಾಮರಸ್ಯದ ತವರು’ ಹೇಳುತ್ತ ಬಂದದ್ದು ಹುಸಿಯಾಯಿತೆ? ಸೇಡೆಂಬುದು ಈ ಭೂಮಿ ಹೆಸರಾಯಿತೆ? ಚಂದಿರನು ನಕ್ಕಾಗ ಮಂದಿರವು ಮುನಿದಿತ್ತು ಗುಡಿಸಲಿನ ಗರಿಯಲ್ಲಿ ಹರಿದಾಡಿತೊ- ಸೇಡು ಸರ್‍ಪವು ಸುತ್ತಿ ಸುಳಿದಾಡಿತೊ! ಬೆವರೊಡೆದ ಭೂಮಿಯಲ...

ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಕ್ಕ ಮತ್ತು ಹೊನ್ನಮ್ಮನನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ವಿಶಿಷ್ಟ ಮಹಿಳಾ ಪ್ರತಿಭೆಗಳನ್ನು ಕಾಣಲು ನಾವು ಹೊಸಗನ್ನಡ ಸಾಹಿತ್ಯಕ್ಕೇ ಬರಬೇಕು. ನವೋದಯ ಸಾಹಿತ್ಯದ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ ಅವ...

ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ ಗುರು ಬೋಧನೆಯು ಮಾತ್ರ ಒಂದೇ ಹಿರಿಯರ ಭಿನ್ನಮತ ಅ...

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ ಓ ಜಗತ್ಸಂಹಿನೀಂ – ಭಾರತತಪಸ್ವಿನೀ ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು ಸತ್ಯದರ್ಶ...

ಹೋಳಿ ಹಬ್ಬ ಬಂದಿದೆ ರಕ್ತದೋಕುಳಿಯ ಚೆಲ್ಲುತ ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ ಅಂದು ಬಲಿಯಾದ ಬಸುರಿಯರು ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು ತ್ರಿಶೂಲಕ್ಕೆ ಸಿ...

ಎಷ್ಟೊಂದು ಚಳಿ ಈ ಕಂಬಳಿ ಹುಳಕೆ ಕಂಬಳಿ ಹೊದ್ದೇ ಹೊರಡುವುದು ಮಳೆಗಾಲವಾಗಲಿ ಬೇಸಿಗೆಯಾಗಲಿ ಕಂಬಳಿಯಿಲ್ಲದೆ ಹೋಗುವಂತಿಲ್ಲ ಎಷ್ಟೊಂದು ಶೀತ ಈ ಬಸವನ ಹುಳಕೆ ಮೈ ಕೈ ಶೀತ ಕೊಂಬುಗಳು ಶೀತ ಯಾವಾಗಲೂ ನೆಗಡಿ-ಇದಕೆ ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...