ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ಗಾಂಧಿಯವರ ದರ್ಶನಮಾಡಿಕೊಂಡು ಬಂದಳು ಅವರು ದರಿದ್ರ ನಾರಾಯಣನ ಪ್ರತಿನಿಧಿಯೆಂದು ಮೊಳಕಾಲುಮೇಲಕ್ಕೆ ಪಂಚೆಯುಟ್ಟು ಅರೆಮೈ ಮುಚ್ಚುವಷ್ಟು ಬಟ್ಟೆಯುಟ್ಟು ಹಗಲೂ ರಾತ್ರಿ ರಾಮ ರಾಮ ಎ...

ಕಾತರಿಸುತ್ತಿದೆ ಮನವು ಪ್ರಭುವಿಗಾಗಿ ಜೀವನವು ಈಗ ಶೂನ್ಯವಾಗಿದೆ ಬದುಕಿನ ಬಿಂದು ಬಿಂದುವಿನಲಿ ಸತ್ಯವು ಇಣಕಿ ಧನ್ಯವಾಗಿದೆ ಇನ್ನೇನು ಈ ಬಾಳು ಭ್ರಮೆಯಲ್ಲವೆ! ಭ್ರಮೆ ನಿನಗೆ ಸುಖ ನೀಡುವುದೆಲ್ಲ! ಆನಂದವೇ ಮರಿಚಿಕೆಯಾಗಿ ಕಾಡಿದೆ ಚೈತನ್ಯ ಹೊರತು ಏನು ...

ಕವಿಯ ಪ್ರಥಮ ಕವನ ಮಗುವಿನ ಮೊದಲ ತೊದಲಿನಂತೆ ಗೀಚಿದ್ದೇ ಕಾವ್ಯ; ಆಡಿದ್ದೇ ಮಾತು ಅಪ್ಪು-ತಪ್ಪುಗಳೆಲ್ಲವೂ ಇಲ್ಲಿ ಒಪ್ಪು ಪುಳಕದ ಭಾವನೆ ತುಳುಕಿಸುವ ಕವನದ ಮೊದಲ ಸಾಲು ಮೊದಲ ಸಾಲಿನ ಜೊತೆ ಸಾಲು ಸಾಲಾಗಿ ತಳಕು ಹಾಕಿಕೊಂಡವದೆಷ್ಟೋ ಸಾಲು ನವ ಜನಿತ ಕವಿ...

ಎಂಥಾ ಚಂದ್ರಾಮ ಇವನೆಂಥಾ ಚಂದ್ರಾಮ ಪಡುಮನೆ ಇಳಿಯಲು ಹೋಗಿ ಇವ ನೀರಿಗೆ ಬಿದ್ದಾನ ನೀರ ತರುವವರ ಸೆರಗಿಗೆ ಬಿದ್ದಾನ ಎಂಥಾ ಚಂದ್ರಾಮ ಮೂಡಲ ಮನೆ ಏರಲು ಹೋಗಿ ಮುಗಿಲಿಗೆ ಮೆತ್ಯಾನ ಮನೆಯವಳ ಹೆಗಲಿಗೆ ಸುತ್ಯಾನ ಎಂಥಾ ಚಂದ್ರಾಮ ಮಲ್ಲಿಗೆ ಹೂಗಳ ಕೊಯ್ಯಲು ಹ...

ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ ನೆರೆದ ಸಿರಿಯೊಳು ಪುಣ್ಯ ಪುರುಷ ನಮ್ರ ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ ನೆಲೆಯರ್ತಿಗಿಂಬಾಗಿ ಭಕ್ತ ನಮ್ರ ಭಾವಂಗಳಿಡಿದಿರಲು ಸತ್ ಕವಿಯು ವಾಙ್ನಮ್ರ ವಿಪುಲದರ್ಶನ ಶಕ್ತ ಧರ್ಮನಮ್ರ ಎಲ್ಲರಹಮನು ಕಳೆದು...

ಮುರಿದ ಮೀನಾರುಗಳು, ಕಡಿದ ಮಂದಿರಗಳು ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು ಗತ ಮರೆತ ಇತಿಹಾಸದ ಪುಟಗಳು ಸರಸ ಜನನ, ವಿರಸಮರಣವೆಂದೆ ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ! ಲವಲವಿಕೆಯ ನಗುವಿನ ಒಡೆಯ ನೀನು ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ ಸಮನ್ವ...

ನಾನು ಸೊಲ್ಲಾಪುರವನ್ನು ನೋಡಿದ್ದು ೧೯೯೨ ರಲ್ಲಿ, ಅಲ್ಲಿನ ನಗರಸಭೆಯ ಕಛೇರಿಯ ಕಂಡು ಬೆಚ್ಚಿ ಬಿದ್ದದ್ದು! ಅದರ ಕತೆ ತಿಳಿದುಕೊಂಡಿದ್ದು. ಆ ನಂತರ ನಾನು ಬಸವ ಕಲ್ಯಾಣವನ್ನು ಕಂಡಿದ್ದು ೧೯೯೨ ರಲ್ಲಿ, ಅಲ್ಲಿ ಶಿವಶರಣಿ ಡಾ|| ಜಯದೇವಿ ತಾಯಿ ಲಿಗಾಡೆಯವರ...

೧ ಬಾರೆಲೆ ಕೋಗಿಲೆಯುಲಿಯುತ ಬನದೊಳು ತಾರೆಲೆ ಮೋದವ ಮೇದಿನಿಗೆ ಹಾಡೆಲೆ ಬಹುವಿಧ ರಾಗದೆ ನರರನು ತೇಲಿಸಿ ಕುಣಿಸೆಲೆ ಲೀಲೆಮಿಗೆ ೨ ಕುಡಿಗೊನರೆಲ್ಲವು ಗಿಡಗಳ ಮಡಲೊಳು ಬಿಡದಲೆ ಕಾಣುವೆ ಕೋಗಿಲೆಯೆ ತಡವನು ಮಾಡದೆ ಒಡನೆಯೆ ನಯನುಡಿ ಬೆಡಗನು ಬಿಡಿಸಲೆ ಬಿಂಕ...

‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕನ್ನಡಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿ‌ಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ ಮರೆಯಾಗುತಿದೆ ನ...

ನಾಗೇಶನ ಮನೆಗೆ ಜೀವಣ್ಣರಾಯ ಬಂದ. ಸಾಯಂಕಾಲ. “ಏನ್ರಿ, ಎಲ್ಲೂ ಆಚೆ ಹೋಗಲಿಲ್ಲವೆ? ಇವತ್ತು ಗುಡ್ ಫ್ರೈಡೇ” ಎನ್ನುತ್ತ ಜೀವಣ್ಣ ಬಂದ. “ಎಲ್ಲಿಗೆ ಹೋಗೋದು, ಈ ಕೊಂಪೇಲಿ? ನೀವೇಕೆ ಎಲ್ಲೂ ಹೋಗಲಿಲ್ಲ?” “ಹೀಗೆ ಹೊರಟ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...