ದೇವನೆ ನಿನ್ನಲ್ಲಿ ನಾನೇನು ಬೇಡಲಿ ನೋಡುವುದಕ್ಕೆ ನನಗೆ ಚಕ್ಷು ನೀಡಿದೆಯಾ ಚಕ್ಷುಗಳಲಿ ನಿನ್ನ ಸ್ವರೂಪ ತೋರೋ ಹಾಗಿಲ್ಲದೆ ಈ ಕಣ್ಣುಗಳೇಕೆ ನೀಡಿದೆಯಾ! ದೇವನೆ ನಿನ್ನಲ್ಲಿ ನಾನೇನು ಬೇಡಲಿ ನುಡಿಯಲು ಎನಗೆ ಜಿವ್ಹೆ ನೀಡಿದೆಯಾ ನಾಲಿಗೆಯ ಮೇಲೆಲ್ಲ ನಿನ್...
ನಾನೂ ಕನಸು ಕಾಣುತ್ತೇನೆ ನನಸು ಮಾಡಿಕೊಳ್ಳುವ ಆಸೆಯಿಂದ ಆದರೆ, ನನ್ನದು ಹಗಲುಗನಸಲ್ಲ ರಾತ್ರಿಯ ಸುಂದರ, ಸುಮಧುರ ಸ್ವಪ್ನ ದಿನಾ ಒಂದೊಂದು ಕನಸು ಆಶಾಗೋಪುರವ ಹತ್ತಿ, ವಾಸ್ತವ ಲೋಕದಿಂದ ಮೇಲೇರಿ ವಿಹರಿಸಿದ ಅನುಭವ ಮುಚ್ಚಿದ ಕಣ್ಣುಗಳೊಳಗೆ ಕಾಣುವ ನಿಜ...
ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್ಯಾರ ಕಟ್ಕೊಂಡು ಯಾರ್ಯಾರ ಬಿಟ್ಕೊಂಡು ಯಾರ್ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ ಬೆಳ್ಳಿಯ ಹಡಗ...
ಗುಡಿಯಿದಿರ ಮಣಿಗೆಯೇ, ಭೂಮಾವಿನಮ್ರತೆಯೆ, ದುರ್ಭರಾಹಂಕಾರದಮನವಿಧಿಯೇ, ಆನಂದವರಣದೊಳು ಸುಖಯಜ್ಞ ಕಲ್ಪವೇ, ತರ್ಕಧೀಧರಗರಳಶಮನಸುಧೆಯೇ, ಕೆರೆಯ ನೀರನು ಕೆರೆಗೆ ಚೆಲ್ಲಿ ವರಪಡೆವಂದ ಭರವಳಿದು ಹಗುರಪ್ಪ ಸಂ-ನ್ಯಾಸವೇ, ತನಗು ಹಿರಿದುಂಟೆಂಬ ತಿಳಿವ ಹೊಳಪಿನ...
ಭಾಗ ೧ ಕೂಗಬೇಕೆಂದರೆ ಹಾಳಾದ್ದು ಧ್ವನಿಯೇ ಹೊರಡುತ್ತಲಿಲ್ಲ ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ? ಒಡಲಾಳದಲ್ಲಿ ಹುಗಿದಿಟ್ಟ ಅದೆಷ್ಟೋ ಇತಿಹಾಸದ ಪುಟಗಳು ತೊಟ್ಟ ದಾಗೀನ ಆಭರಣ ಸಹಿತ ಸಂಸ್ಕೃತಿಯ ಗೋರಿಯೊಳಕ್ಕೆ ತನ್ನ ತಾನೇ ಹುಗಿದುಕೊಂಡು ಮುಳ್ಳುಬೇಲಿಯ ...
ವಿಜ್ಞಾನಿಗಳು ಇಷ್ಟರಲ್ಲಿಯೇ ಮಾನವನ ಜಿನ್ಸ್ಗಳನ್ನು ಅಧ್ಯಯನ ಮಾಡಿ ಅವುಗಳ ಒಂದು ಬೃಹತ್ ಸಂಗ್ರಹಾಲಯವನ್ನು ನಿರ್ಮಿಸಬಹುದು. ಈ ಜಿನ್ಸ್ ಸಂಗ್ರಹಾಲಯದಲ್ಲಿ ಪ್ರತಿಯೊಂದು ಜಿನ್ಸ್ಗಳ ವಿವರಗಳಿದ್ದು ಯಾವ ಜಿನ್ಸ್ ಯಾವ ಕಾರ್ಯಕ್ಕೆ ಯೋಗ್ಯ? ಜೀವಿಗಳಲ್...
೧ ತಾರಿನ ತಂತಿಯ ಮೇಲೆಯ ನಲಿಯುತ ತಾನವ ನೀಡುತ “ಕುಕೂಕು” ನಾದವನೆಬ್ಬಿಸಿ ಬೂದಿಯ ಬೆಳವನು ಮೇದಿನಿ ಮೈಸಿರಿ ಮೆರಿಸುತಿದೆ ೨ ಬದುವಿನ ಬೇವೊಳು “ಕುವೋಽ” ಎನ್ನುತ ರಾಗದ ಕೋಗಿಲೆ ಕೂಗುತಿದೆ ಇನಿದನಿಯೆರಡನು ಮನದಿಂದಾಲಿಸೆ ಹರಣವು ಹರುಷದೆ ...
ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು ಸಿಂಗರದ ಈ ಬೀಡು ಕವಿಗಳೆದೆ ಹಾಡು ಹಾಡು ತುಂಬಿದ ನಾಡ...
ಕುಂದಾಪುರ ಶಿವಮೊಗ್ಗ ರಸ್ತೆಯಲ್ಲಿ ನನ್ನ ಕನ್ನಡಕದ ಅಂಗಡಿ ತೆರೆದಿದ್ದೆ. ಅಲ್ಲಿಗೆ ಸಿದ್ದಾಪುರ, ಶಂಕರನಾರಾಯಣ, ಇತರ ಹತ್ತಾರು ಹಳ್ಳಿಗಳಿಂದ ನನ್ನ ಕನ್ನಡಕದ ಅಂಗಡಿಗೆ ನಿತ್ಯವೂ ನೂರಾರು ಗಿರಾಕಿ ಬರುತ್ತಿದ್ದರು. ಕನ್ನಡಕದ ಅಂಗಡಿ ಪಕ್ಕದಲ್ಲೇ ಸಣ್ಣದ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







