ಬೆಂಕಿಗೆ ಬಂದ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ ಹೋದನೇ || ೧ ||

ಸೊಣ್ಣಕ್ಕೆ ಬಂದ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೨ ||

ನೀರಿಗೆ ಬಂದಾ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೩ ||

ಅಡಕೊಳ್ಕ್ ಬಂದಾ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೪ ||

ಕರ್‍ಯ ಕಾಗನ ಶೀರೀ ಉಟ್ಟಿಕೊಂಡ್
ಕೊಂಡಿ ಮೇನ್ ಶಿಟ್ಟು ಇಟ್ಟಿಕೊಂಡಿ
ಬಂದಳವ್ವಾ ಬಂದಳೇ
ಸೂಲಗಿರತೀ ಬಂದಳೇ || ೫ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.