ಸಾವಿರಾರು ನದಿಗಳು

ಸಾವಿರಾರು ನದಿಗಳು
ಸೇರುವಂತೆ ಸಾಗರ
ಸೇರಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ಊರು ಕೇರಿ ಹಿತ್ತಿಲು
ಆಗುವಂತೆ ಜನಪದ
ಆಗಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ಪಚ್ಚೆ ಪೈರು ನೆಲ ಮನೆ
ತುಂಬುವಂತೆ ಹರುಷ
ತುಂಬಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ದುಡಿತ ಕುಣಿತ ಕಾಗುಣಿತ
ಕೋಯುವಂತೆ ಜೀವನ
ಕೋಯಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ಕಲ್ಲು ಬಂಡೆ ಇಟ್ಟಿಗೆ
ಕಟ್ಟುವಂತೆ ಕಟ್ಟಡ
ಕಟ್ಟಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ಬಗೆ ಬಗೆಯ ಬಣ್ಣಗಳು
ಬೆಳಗುವಂತೆ ಉದಯವ
ಬೆಳಗಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ

ಸಾವಿರಾರು ಹಕ್ಕಿಗಳು
ಹಾಡುವಂತೆ ಇಂಚರ
ಹಾಡಬೇಕು ಕನ್ನಡ
ಸಾವಿರಾರು ಮನಗಳ
ಸಾವಿರಾರು ಕನ್ನಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ೦ಧ್ಯಾ
Next post ಉಮರನ ಒಸಗೆ – ೨೨

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys