ಕಾರುಣ್ಯ

ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು.

“ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು ಅಂಗಿ ನಿನಗೆ ಕೊಡುವೆ”, ಎಂದಿತು.

ಗೆಳತಿ! “ನೀ ಹಸುರು ಅಂಗಿ ನನಗೆ ಕೊಟ್ಟರೆ ನಿನ್ನ ನಗ್ನ ನರಳುವಿಕೆಯನ್ನು ನಾ ತಾಳಲಾರೆ” ಎಂದಿತು ಬೋಳು ಮರ.

“ಬೋಳು ಮರ! ನಿನ್ನ ಒಡಲಿಗೆ ನಾನು ನಕ್ಷತ್ರದ ಹೂವು ಉದರಿಸುವ” ಎಂದಿತು, ಕೇಳಿಸಿಕೊಂಡ ಆಗಸ. ಅಷ್ಟು ದೂರದಲ್ಲಿ ಇರುವ ನಿನಗೆ ನಮ್ಮ ಗೋಳು ಹೇಗೆ ಮುಟ್ಟಿತು?”

“ಕಾರುಣ್ಯದ ದೃಷ್ಟಿಗೆ ದೂರವೇನು, ಹತ್ತಿರವೇನು?” ಎಂದಿತು ಕಣ್ಣೀರ ಹನಿಸಿ ಆಗಸ. “ಮರುಗುವ ಎದೆಗೆ ಮಾರ್‍ನುಡಿಯಲು ಎದೆಮಿಡಿತ ಸಾಲದೇ?” ಎಂದಿತು ಆಗಸ.

ಮರಗಳ ಮೈತುಂಬಾ ನಕ್ಷತ್ರ ನಕ್ಕಾಗ ಆನಂದ ಆಶೀರ್‍ವಾದವಾಯಿತು. ನಕ್ಷತ್ರ ತುಂಬಿದ ಬೋಳುಮರವನ್ನು ನೋಡಿ ಹರ್‍ಷದಿಂದ ಹಸಿರು ಮರ ಪುಲಕಗೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?
Next post ಅಗಸ್ತ್ಯ

ಸಣ್ಣ ಕತೆ

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…