ಜೀವಜ್ಯೋತಿ ಮಿನುಗುತಿತ್ತು ರಾಗದೊಲುಮೆ ತೋರಿ, ಭಾವಬಹಳ ಬೀರುತಿತ್ತು ಮೆರೆಗನೊರೆಯ ಹಾಡಿ; ಮನದ ಮುದವ ತೋರುತಿತ್ತು ಧ್ಯೇಯ ದೂರ ಸೇರಿ, ಮಾಯರಂಗನೇರಿ ಬಂದು ಎದೆಯ ಹರುಷ ಹೂಡಿ; ಕಣ್ಣ ನೋಟ ಚನ್ನ ಚಲುವ ಈಟಿ ಮೀಟಿ ನೋಡಿ, ರಂಗಮುಗಿಲ ಬಿಂಬವೇರಿ ಜತೆಯ ಸೇರಿ ಹಾರಿ; ಸಣ್ಣ ರಾಗ ತಂತಿಮಿಡಿದು ಮೋರೆ ಮೊಗ್ಗು ಬೀರಿ, ಪ್...

ತನ್ನತಾನೆ ಚಂದ ತನ್ನದೆಲ್ಲವು ಚಂದ ತನ್ನ ಮೀರಿದ ತಾನು ಇನ್ನು ಚಂದ ತನ್ನ ಮಾನಿನಿ ಚಂದ ಮನಿಮಾರು ಕುಲಚಂದ ತನ್ನದೆಲ್ಲವ ಮೀರಿದ್ದಿನ್ನು ಚಂದ ಹಾಂಗ ಹೋದರ ಹಾಂಗ ಹೀಂಗ ಬಂದರ ಹೀಂಗ ಹಾದಿಮನಿ ಜಡಿಲಿಂಗ ನೋಡು ಮ್ಯಾಲ ತನಗಾಗಿ ಸತ್ತವರು ತನಗಾಗಿ ಅತ್ತವರು...

ಅನುಪಮಾ ನಿರಂಜನ ಎಂಬ ಹೆಸರು ಹೊಸದಾಗಿ ತಾಯ್ತನಕ್ಕೆ ಸಜ್ಜಾಗುವವರಿಗೆ, ಕಿಶೋರಾವಸ್ಥೆ ಮುಟ್ಟುತ್ತಿರುವವರಿಗೆ ಬಹು ಪರಿಚಿತ ಹೆಸರು. ಅವರ ‘ತಾಯಿ-ಮಗು’ ಪುಸ್ತಕ ಬಂದು ಎಷ್ಟೋ ವರ್‍ಷಗಳಾಗಿವೆ. ಪ್ರಾಯಶಃ ಪುಸ್ತಕ ಬಂದ ಹೊಸದರಲ್ಲಿದ್ದಿರಬಹುದಾದ ಎಷ್ಟೋ ...

ಬೇವಾರ್‍ಸಿ! ನಿನ್ ಎಸರು ನೆಪ್ಗೇನೆ ಬರದು- ಯೆಂಡ್ಕುಡಕ್ರು ಏನಂದ್ರು ಕೋಪ ಮಾಡಬಾರ್‍ದು! ಇಸ್ಟ್ಕೂನೆ ಕೂಗಿದ್ದಕ್ಟ್ ‘ಓ’ ಅಂತ್ ನೀನ್ ಅಂದ್ರೆ ಎಂಗಾನ ಕೂಗಿದ್ರೆ ಏನೈತೆ ನಿಂಗ್ ತೊಂದ್ರೆ? ೧ ನೀನೂನೆ ಬಾಳ್ ದಿವಸ ತಸ್ದಿ ತಕ್ಕಂಡಿ ನನ್ ಜತೇಗ್ ಬಲ್ ಅ...

ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ- ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ- ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ- ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ- ಹಿಡಿದು ಹೋಗಲಿ. ಹುಚ್ಚ...

ದೇವಾಲಯದಲ್ಲಿ ಕುಳಿತಿದ್ದ ಓರ್‍ವ ಸ್ವಾಮಿಗಳ ಬಳಿ ಒಬ್ಬ ಶಿಷ್ಯ ಬಂದ. ಅವನಿಗೆ ಧ್ಯಾನ ಕಲಿಯುವ ಬಲು ಕಾತುರ. ಗುರುಗಳ ಮುಂದೆ ಕೈ ಜೋಡಿಸಿ “ನನಗೆ ಧ್ಯಾನ ಕಲಿಸಬೇಕೆಂದು” ಬಿನ್ನವಿಸಿಕೊಂಡ. “ಊಟ ಮಾಡಿದೆಯಾ? ಹೊಟ್ಟೆ ತುಂಬಿತೇ? ಮ...

ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ – ವಿಜ್ಞಾನೇಶ್ವರಾ *****...

ಉಲಪೀ ಸುಂಗಾ ಬಿಟ್ಟೀದಾನೆ ಜನಪಿನ ಪಂಜೀ ಉಟ್ಟೀದಾನೆ ಕೈಲ ತೊವಲ ಕಟ್ಟಿಯದಾನೆ || ೧ || ವಾರ್‍ನಾಸ ಹಚ್ಚಿಯದಾನೆ ಯೇನ ಮಾಡಲೇ ಅಕ್ಕಾ ನಾನ್ ಕರೆಯಾಲೇನೆ? || ೨ || ಕರದರ ಬಂದಾನೇನೇ? ಬಂದರೆ ಜೋಲೀ ಹೋಡಿಯಾಲೇನೆ? ಯೇನಾರ ಅಂದಾನೇನೇ? || ೩ || ***** ಈ...

ಕಾರಾಪುರದ ಖೆಡಾ ಕ್ಯಾಂಫೂ ಎಂದರೆ ಜಗತ್ಪ್ರಸಿದ್ಧವಾದುದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಬಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಅಂಕೆಶಂಕೆಗಳಿಲ್ಲದೆ ನಿರಂ ಕುಶವಾಗಿ ಸ್ವೇಚ್ಛೆಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯ...

ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ ಮೆರೆದ...

ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್‍ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! *****...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...