ಕಡೇ ಆಡು

ಬೇವಾರ್‍ಸಿ! ನಿನ್ ಎಸರು ನೆಪ್ಗೇನೆ ಬರದು-
ಯೆಂಡ್ಕುಡಕ್ರು ಏನಂದ್ರು ಕೋಪ ಮಾಡಬಾರ್‍ದು!
ಇಸ್ಟ್ಕೂನೆ ಕೂಗಿದ್ದಕ್ಟ್ ‘ಓ’ ಅಂತ್ ನೀನ್ ಅಂದ್ರೆ
ಎಂಗಾನ ಕೂಗಿದ್ರೆ ಏನೈತೆ ನಿಂಗ್ ತೊಂದ್ರೆ? ೧

ನೀನೂನೆ ಬಾಳ್ ದಿವಸ ತಸ್ದಿ ತಕ್ಕಂಡಿ
ನನ್ ಜತೇಗ್ ಬಲ್ ಅಲದೆ- ನನ್ ಆಡ್ ಬರ್‍ಕಂಡಿ.
ಅಸ್ಟಲ್ದೆ ಯೋಳ್ತಾರ ದೊಡ್ ದೊಡ್ಡೋರೆಲ್ಲ:
‘ಕಸ್ಟ್ ಪಡದೆ ಕಿತ್ತೀಯ ದೊಡ್ಡಾನೆ ಅಲ್ಲ?’ ೨

ಲೋಕಾನೆ ವುಚ್ಚುಚ್ಚು! ಯಿಂದ್ ಇದ್ದಂಗ್ ಇಲ್ಲ!
ವಸ್ತಾದ್ಗೆ ಯೋಳ್ತಾರೆ ಈಗ್ನೋರು-ಮಲ್ಲ!
ಯಾರಾನ ಕೇಳ್ದೋರು ಪದಗೊಳ್ ಚಂದ್ ಅಂದ್ರೆ
ಮಸ್ದಾಗ್ ನಾನ್ ಆಡ್ತೀನಿ ನೀ ತಿರಗಿ ಬಂದ್ರೆ. ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಳಿ ಹಡಗ
Next post ಅನುಪಮಾ ನಿರಂಜನ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…