ಹಾಳಿ ಹಡಗ

ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ-
ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ
ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ-
ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ-
ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ-
ಹಿಡಿದು ಹೋಗಲಿ. ಹುಚ್ಚು ಮಳೆಗಾಳಿಗಳಿಗೀಡೆ
ಹುಲು ಹಡಗ? ಲಾಭ ಹಾನಿಯ ಲೆಕ್ಕ ಹೊತ್ತಿಗೆಯೊ-
ಳಿರಲಿ, ಬೆರಗಲಿ ಮೆಚ್ಚಿ ಕುಣಿದಾಡಿದುದೆ ಬಂತು.

ಒಡಲು ಉಡಿಗೆಗಳಂತೆ ಮಾಸಿ ಪಿಸಿವದು; ಉಸಿರು
ಹಸಿವೆ ನೀರಡಿಕೆಯಲಿ ಕುಸಿಯುವದು; ಬಗೆಯು ಗಂ-
ಧರ್‍ವನಗರಗಳನ್ನು ಕಟ್ಟಿ, ಬರಿದೊರೆ ಹರಿಸಿ,
ಮುಗಿಲ ಮಲ್ಲಿಗೆಯ ಕೊಯ್ದೀಡಾಡಿ ಮೂಸಿ, ಚಿ-
ತ್ತದ ಭಿತ್ತಿಯಲಿ ಮೂಡಿದಂಥ ಚಿತ್ರಗಳಲ್ಲಿ
ಜೀವಕಳೆದುಂಬಿ, ಸ್ವರ್‍ಗವ ಹಡೆದು ಪಡೆಯುತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನಕ್ಕೆ ಹುಡುಕಾಟವೇಕೆ?
Next post ಕಡೇ ಆಡು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…