ಮಲ್ಲಿ – ೬

ಮಲ್ಲಿ – ೬

ಕಾರಾಪುರದ ಖೆಡಾ ಕ್ಯಾಂಫೂ ಎಂದರೆ ಜಗತ್ಪ್ರಸಿದ್ಧವಾದುದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಬಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಅಂಕೆಶಂಕೆಗಳಿಲ್ಲದೆ ನಿರಂ ಕುಶವಾಗಿ ಸ್ವೇಚ್ಛೆಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯೆನ್ನುವ ಬಲೆಗೆ ಸಿಕ್ಕಿ ತಪ್ಪಿಸಿಕೊಳ್ಳಲಾರದೆ ಬಂದು ಒಂದು ಖೆಡ್ಡಾದಲ್ಲಿ ಸೇರುವುವು. ಅದು ಒಂದು ವಿಚಿತ್ರವಾದ ವಿನೋದ.

ಸೋಲಿಗರು ಹಿಂಡುಗಳಿಗೆ ಗೊತ್ತಿಲ್ಲದಂತೆ ಮೊದಲು ಅದನ್ನು ಬಳಸುವರು. ಒಡೆದ ಬಿದಿರಿನ ತುಂಡುಗಳಿಂದ ಆ ವಿಕಾರವಾದ ಶಬ್ದವನ್ನು ಮಾಡುತ್ತಾ ಆ ಆನೆಗಳ ಮನಸ್ಸಿನಲ್ಲಿ ಅನಿರ್ದಿಷ್ಟವಾದ ಭಯವನ್ನು ಹುಟ್ಟಸಿ ಹಿಂಡಿಗೆ ಹಿಂಡೇ ಸ್ಥಳವನ್ನು ಬಿಟ್ಟು ಮುಂದೆ ಸರಿಯುವಂತೆ ಮಾಡುವರು. ಅದು ಮುಂದೆ ಸರಿಯುವಾಗಲೂ ಅಲ್ಲಲ್ಲಿ ಗುರುತಿನ ಬೆಂಕಿಗಳನ್ನು ಹಾಕಿ, ಸನ್ನೆ ಹಾಕಿ, ರಥವು ಗೊತ್ತಾದ ಹಾದಿಯಲ್ಲಿಯೇ ನಡೆಯುವಂತೆ ಮಾಡುವ ಹಾಗೆ, ಹಿಂಡು ಗುರುತಾದ ಹಾದಿಯನ್ನೇ ಹಿಡಿದು ಹೋಗಿ ಗೊತ್ತಾದ ಆವರಣಕ್ಕೆ ಹೋಗುವಂತೆ ಮಾಡುವರು. ಅಲ್ಲಿ ಆನೆಗಳೆಲ್ಲವೂ ಒಳ ಸೇರಿದ ಮೇಲೆ ಆ ಆವರಣದ ಬಾಗಿಲನ್ನು ಮುಚ್ಚುವರು – ಬಾಗಿಲೆಂದರೆ ಅದು ಊರಿನ ಬಾಗಿಲುಗಳಂತೆ ಅಲ್ಲ ! ಭಾರಿ ಭಾರಿ ಮರಗಳನ್ನು ಕಟ್ಟಿ ಮಾಡಿರುವ, ದೆವ್ವನಂತಹ ಬಾಗಿಲು. ಅದಕ್ಕೆ ಹಿಂದೆ, ಊರು ಗೋಲಾಗಿ ಕೊಟ್ಟಿರುವ ಮರವೊಂದೊಂದನ್ನೂ ಸರಿಯಾಗಿ ಗರಗಸ ಹಾಕಿಸಿದರೆ, ಭಾರಿಯ ತೊಲೆ ಎರಡು ಮೂರಾದರೂ ಆದಾವು.

ಆ ಆವರಣದ ಸುತ್ತ ಭಾರಿಯ ಕಂದಕ. ಆ ಕಂದಕ ಇರುವ ಜಾಗವೇ ಖೆಡ್ಡಾ ! ಆನೆ ಇಳಿಯುವುದಕ್ಕೂ ಆಗದು ; ದಾಟುವುದಕ್ಕೂ ಆಗದು ಅಷ್ಟು ಭಾರಿ ಕಂದಕ. ಅಬ್ಬಾ ! ಆ ಆನೆಗಳು ಅದರಲ್ಲಿಯೂ ಗಂಡಾನೆಗಳು ತಾವು ಸೆರೆ ಸಿಕ್ಕಿದೆವು ಎಂದು ತಿಳಿದುಕೊಂಡು ಬಿಟ್ಟರೆ, ಅಲ್ಲಿಗೆ ಬಂದ ಮನುಷ್ಯರ ಮೊಕ ಕಂಡ ಕೂಡಲೇ ರೇಗಿ, ಅಷ್ಟಷ್ಟು ಗಾತ್ರದ ಕಲ್ಲುಗಳನ್ನು ಮನುಷ್ಯರ ಕಡೆಗೆ ಒದೆಯುತ್ತವೆ. ಆ ಭಾರಿಯ ಕಲ್ಲುಗಳು ಕೈಯಲ್ಲಿ ಗುರಿಯಿಟ್ಟು ಹೊಡೆದುದಕ್ಕಿಂತ ಹೆಚ್ಚಾಗಿ ರೊಯ್ಯನೆ ಬರುತ್ತವೆ. ಅವಕ್ಕೆ ಸಿಕ್ಕಿದ ಮರಗಳು, ಹೆಮ್ಮರಗಳು ಮುರಿದು ರೊಪ್ಪನೆ ಬೀಳುತ್ತವೆಂದ ಮೇಲೆ, ಆ ಕಲ್ಲಿನೇಟಿಗೆ ಮನುಷ್ಯ ಸಿಕ್ಕಿದರೆ, ಹೇಳಬೇಕಾದುದೇ ಇಲ್ಲ. ಆದರೆ ಆ ಮನುಷ್ಯರು ಏಟಿಗೆ ಸಿಕ್ಕುವುದಿಲ್ಲ.

ಖೆಡ್ಡಾದಲ್ಲಿ ಬೇಕಾದ ಹಾಗೆ ಹಸುರು ಇರುತ್ತದೆ. ಆದರೆ ಆನೆಗಳಿಗೆ ಸೆರೆ ಸಿಕ್ಕಿದೆವೆಂದು ಗೊತ್ತಾದ ಕೂಡಲೇ ಅವಕ್ಕೆ ಆಹಾರ ನೀರು ಯಾವುದೂ ಬೇಕಾಗುವುದಿಲ್ಲ. ಘೀ ಎಂದು ಕೂಗುತ್ತ ತಪ್ಪಿಸಿ ಕೊಳ್ಳುವುದಕ್ಕೆ ಹಾದಿಯನ್ನು ಹುಡುಕುತ್ತ ತಿರುಗುತ್ತವೆ. ಕೆಲವು ಕೊಂಬಿನಿಂದ ತಿವಿದು ಮಣ್ಣೆತ್ತಿ ಹಳ್ಳ ತುಂಬಿ ಹೊರಟು ಹೋಗಲು ಯತ್ನಿಸುತ್ತವೆ. ಅವು ಹಾಗೆ ಮಾಡದಂತೆ ಬಿದಿರಿನ ಅಂಡೆ ಅಲ್ಲಾಡಿಸುತ್ತಾ ಕಾವಲು ಕಾಯುತ್ತಾ ಜನರು ಕುಳಿತಿರುತ್ತಾರೆ. ಹೀಗೆ ಎಂಟು ಹತ್ತು ದಿನ ಅವು ಹೆಣ್ಣು, ಗಂಡು, ಮರಿ ಎಲ್ಲವೂ ಸೊರಗಿ, ಹೆದರಿ, ನಿಸ್ತೇಜವಾದ ಮೇಲೆ, ಕುಂಕಿ ಆನೆಗಳನ್ನು ತೆಗೆದುಕೊಂಡು ಹೋಗಿ, ಒಂದೊಂದನ್ನೂ ಬೇರೆ ಮಾಡಿ ಅವುಗಳಿಗೆ ಹಗ್ಗ ಹಾಕಿ ಕಟ್ಟುತ್ತಾರೆ. ಹಾಗೆ ಗುಂಪಿನಿಂದ ಒಂದೊಂದನ್ನೂ ಬೇರ್ಪಡಿಸಿ, ಹಗ್ಗಹಾಕಿ ಕಟ್ಟುವುದೇ ಪ್ರಸಿದ್ಧವಾದ ಖೆಡ್ಡಾ ಆಪರೇರ್ಷ.

ಬಹುಶಃ ಮೈಸೂರಲ್ಲಿ ಈ ಖೆಡ್ಡಾ ಆಪರೇರ್ಷ ನಡೆಯುವುದಕ್ಕೂ ಒಂದು ವಿಚಿತ್ರ ಕಾರಣವಿತ್ತೇನೋ ? ಮೈಸೂರಿನ ಹುಲಿ ಟಿಪ್ಪುಸುಲ್ತಾನನು ಸೋತು ಅಥವ ಸತ್ತ ಮೇಲೆ ಬ್ರಿಟಿಷರ ರಾಜ್ಯ ಇಂಡಿಯದಲ್ಲಿ ಸ್ಥಿರವಾದುದು. ಅದಕ್ಕೇ ಏನೋ ಇಲ್ಲಿ ಅದ್ಭುತ ದೇಹ ಬಲ ಸಂಪನ್ನವಾದ, ಮೃಗಗಳಲ್ಲೆಲ್ಲಾ ಸೂಕ್ಷ್ಮ ಬುದ್ದಿಗೆ ಹೆಸರಾದ ಗಜ ರಾಜನನ್ನು ಯಃಕಶ್ಚಿತ್ ಮನುಷ್ಯ ಹಿಡಿದು ಹಗ್ಗದಲ್ಲಿ ಕಟ್ಟಿ ಹಾಕುವ ದೃಶ್ಯವನ್ನು ಮೈಸೂರು ತೋರಿಸುತ್ತಿದ್ದುದು ! ನೀವೂ ಹೀಗೇ ಭಾರಿಯ ಇಂಡಿಯವನ್ನು ಕಟ್ಟಿ ಹಾಕಿದಿರಿ ಎಂದು ಭಾರತಮಾತೆಯು ಮಹಾ ರಾಣಿಯ ಮೊಮ್ಮಗನಿಗೆ ತನ್ನ ದುಃಖವನ್ನು ಆನೆಗಳ ಗೋಳಾಗಿ ಹೇಳಿ ಕೊಳ್ಳುತ್ತಿದ್ದಳೇನೋ ?

ಆನೆಯ ಪ್ರತಾಪವನ್ನು ನೋಡಬೇಕೆನ್ನುವವರು ಖೆಡ್ಡಾ ನೋಡಿ ಬರಬೇಕು. ಪಳಗಿ, ಸಿಂಗಾರ ಮಾಡಿಸಿಕೊಂಡು ಅಂಬಾರಿ ಹೊತ್ತು ಹೋಗುವುದರಿಂದ ಹಿಡಿದು, ಸರ್ಕಸ್ಸಿನಲ್ಲಿ ಹೇಳಿದ ಹಾಗೆ ದೇಹ ಬಗ್ಗಿಸಿಕೊಂಡು ಕುಣಿಯುವ ಆನೆಯನ್ನು ನೋಡಿದರೆ ಏನಿದೆ ? ಗುಂಪಿನಿಂದ ಬೇರ್ಪಡಿಸಿ, ಎಳೆ ತಂದು, ಸ್ಟಾಕೇಡಿನಲ್ಲಿ ಸೇರಿಸುತ್ತಾರೆ. ದಪ್ಪದಪ್ಪ ದಿಮ್ಮಿಗಳನ್ನು ಆಳಾಳುದ್ದ ಅಗೆದು ಮೊಳಕ್ಕೊಂದರಂತೆ ಹೂಳಿ, ಅದರ ಮೇಲೆ ಅಟ್ಟವನ್ನು ಕಟ್ಟಿರುತ್ತಾರೆ. ಆನೆಗಳನ್ನು ಅಲ್ಲಿಗೆ ತಂದು ಅಕ್ಕ ಪಕ್ಕದಲ್ಲಿ ಪಳಗಿದ ಆನೆ ಕುಂಕಿ ಕೊಡುತ್ತಾರೆ. ಅವು ಆನೆಯ ಸೊಂಡಿಲಿಗೆ ಸೊಂಡಿಲು ಸೇರಿಸಿ, ಮೈಗೆ ಮೈಗೆ ಒತ್ತಿಕೊಂಡು ‘ವೈಸ್’ನಲ್ಲಿ ಹಿಡಿದುಕೊಂಡಹಾಗೆ ಮಾಡಿಕೊಂಡು ನಿಲ್ಲುತ್ತವೆ. ಮನುಷ್ಯನು ಹಿಂದಿನಿಂದ ಹೋಗಿ ನೂಲುಹಗ್ಗ ಕಾಲಿಗೆ ಹಾಕಿ ಎಳೆದು ದಿಮ್ಮಿಗಳಿಗೆ ಕಟ್ಟುತ್ತಾನೆ. ಕುಂಕಿ ಆನೆ ಮುಂದೆ ಸಾಗುತ್ತಲೂ, ಆ ಆನೆಯು ರೇಗಿ ಆರ್ಭಟಿಸುತ್ತಾ ಮುಂಗಾಲೂರಿ, ತನ್ನ ಕಾಲಿನ ಕಟ್ಟನ್ನು ಕೀಳುವುದಕ್ಕೆ ಯತ್ನಿಸುತ್ತದೆ. ಆಗ, ಆ ಭಾರಿಯ ದಿಮ್ಮಿಗಳು ನಡುಗುತ್ತವೆ. ಅಟ್ಟಣೆಯು ಅಳ್ಳಾಡಿ ಹೋಗುತ್ತದೆ. ಮೇಲಿರುವ ಜನ ಕಟ್ಟಿ ಹಾಕಿರುವ ಆನೆಯನ್ನೇ ಮೃತ್ಯುವೆಂದು ಕೊಂಡು ಹೆದರಿ ಕಿರಿಚಿಕೊಂಡು ಅಲ್ಲಿಂದ ಹಾರಿ ಓಡಿ ಹೋಗುವವರೆಗೂ ಆಗುತ್ತದೆ. ಬಹುಶಃ ಬ್ರಿಟಿಷರ ಕೈಗೆ ಸಿಕ್ಕಿ ಯತ್ನವಿಲ್ಲದೆ ಒದ್ದಾಡುತ್ತಿದ್ದು ಭಾರತದ ಹೃದಯವು ಹಾಗೆಯೇ ಒದ್ದಾಡುತ್ತಿತ್ತೇನೋ ? ಆದರೆ ಆಗ ಬ್ರಿಟಿಷರಿಗೆ ಬೇಕಾದ ಕುಂಕಿ ಆನೆಗಳು ಬೇಕಾದಹಾಗೆ ಇದ್ದುವು. ಬ್ರಿಟಿಷರಿಗೆ ಆಗಾಗ ಭಾರತದ ಹೃದಯದ ನೋವಿನ ಕೂಗು ಕಿವಿಯು ಬಿರಿಯುವಂತೆ ಕೇಳಿಸುತ್ತಿತ್ತು. ಬಂಗಾಲವನ್ನೊಡೆದಾಗ ಕೂಗಿದ ಕೂಗು ಕರ್ಜನ್ನಕನ್ನೂ ಕೆರಳಿಸಿದರೂ ಹೆದರಿಸಿತು. ಅದಕ್ಕಾಗಿಯೇ ಅವರು ತಮ್ಮ ಕುಂಕಿ ಆನೆಗಳು ಹೆಚ್ಚಲಾಗಲೆಂದು ಹಿಂದೂ ಮುಸ್ಲಿಂ ಭೇದ ತಂದೊಡ್ಡಿದರು. ಆಗಿನ ವೈಸರಾಯ್, ‘ ಎಷ್ಟಾಗಲಿ ಮುಸ್ಲಿಂರು ನಮ್ಮ ಹಿಂದೆ ರಾಜ್ಯವಾಳುತ್ತಿದ್ದವರು. ಅವರಿಗೆ favourite wife treatment, ಮೋಹದ ಮಡದಿಯ ಮಮತೆ ಸಲ್ಲಬೇಕು’ ಎಂದು ವಿಷಬೀಜವನ್ನು ನೆಟ್ಟನು. ಮುಂದೆ ನಲವತ್ತು ವರ್ಷದಮೇಲೆ ಅದು ಪಾಕಿಸ್ತಾನವೆಂಬ ವಿಷಫಲವನ್ನೂ ಕೊಟ್ಟಿತು.

ಪ್ರಿನ್ಸ್ ಆಫ್ ವೇಲ್ಸ್ನ ಪತ್ನಿಸಮೇತನಾಗಿ ಮೈಸೂರಿಗೆ ಬಂದನು. ದಿವಾನರು ಬೆಂಗಳೂರಲ್ಲಿ ಸಂಧಿಸಿ ರಾಜಧಾನಿಗೆ ಕರೆ ತಂದರು. ಮಹಾರಾಜರು ಅವರನ್ನು ರೈಲ್ವೆ ಸ್ಟೇರ್ಷನಲ್ಲಿ ಎದುರುಗೊಂಡು ರೆಸಿರ್ಡೆಸಿಯಲ್ಲಿ ಇಳಿಸಿದರು. ಭೇಟಿ ಮರು ಭೇಟಿಗಳಾದುವು. ರೆಸಿಡೆಂಟರ ಸಮ್ಮುಖದಲ್ಲಿ ಮೈಸೂರಿನಲ್ಲಿ ಗಣ್ಯರಾದವರ ಪರಿಚಯವೂ ಆಯಿತು. ರಾಜಧಾನಿಯಲ್ಲಿ ದೀಪೋತ್ಸವವು ನಡೆಯಿತು. ಸುತ್ತಮುತ್ತಲಿಂದ ಜನಗಳು ಬೇಕಾದಹಾಗೆ ಬಂದರು. ಪ್ರಿನ್ಸ್ನನ್ನು ನೋಡುವುದಕ್ಕೆ ಬಂದವರು ರಾಜಧಾನಿಯಲ್ಲಿ ನಿಲ್ಲುವುದಕ್ಕೆ ಎಡೆಯಿಲ್ಲ ಎನ್ನುವ ಮಟ್ಟಿಗೆ ಆಯಿತು. ಭಾನುವಾರ ಬೆಳಿಗ್ಗೆ ಮಹಾರಾಜರು ಅತಿಥಿಗಳೊಡನೆ ಕಾರಾಪುರದ ಕ್ಯಾಂಪಿಗೆ ಬಂದರು. ನಾಯಕನು ಒಂದು ದಿವಸ ಮುಂಚಿತವಾಗಿ ಅಲ್ಲಿಗೆ ಬಂದಿದ್ದನು.

ಮಹಾರಾಜರು ಅತಿಥಿಗಳೊಡನಿರುವಾಗ ಡೆಪ್ಯುಟೀಕಮೀಷನರು ನಾಯಕನನ್ನು ಕರೆತಂದರು. ನಾಯಕನು ಆರಡಿಯ ಮನುಷ್ಯ. ಎತ್ತರಕ್ಕೆ ತಕ್ಕ ದಪ್ಪವೂ ಸೇರಿ ನಡೆಯುತ್ತಿದ್ದರೆ ನೆಲ ಜಗ್ಗುವುದು ಎನ್ನುವಹಾಗಿದೆ. ಮೊದಲೇ ಪರಿಚಯ ಪತ್ರಿಕೆಯು ನಾಯಕನ ವಿಷಯವನ್ನೆಲ್ಲ ಪ್ರಿನ್ಸ್ಗೆ ತಿಳಿಸಿತ್ತು. ನಾಯಕನು ಚಿನ್ನದಲ್ಲಿ ಮಾಡಿದ್ದ ಅಂಬಾರಿಯ ಆನೆಯನ್ನು ಕಾಣಿಕೆಯಾಗಿ ಒಪ್ಪಿಸಿದನು. ಅದು ಸುಮಾರು ಐದು ಸೇರು ತೂಕ ಒಂದು ಅಡಿಯ ಎತ್ತರವಿತ್ತು. ಆ ರತ್ನ ಖಚಿತವಾದ ಗೌನ್, ಆಭರಣಗಳು, ಅಂಬಾರಿ, ಎಲ್ಲವೂ ಸೇರಿ ಆಗಿನ ಬೆಲೆ ಸುಮಾರು ಐದುಸಾವಿರ ರೂಪಾಯಿ. ಎಲ್ಲಕ್ಕಿಂತ ವಿಚಿತ್ರ ವಾಗಿದ್ದುದು ಆ ಆನೆಯ ಹಣೆಯ ಮೇಲೆ ಕೆತ್ತಿದ್ದ ಸುಮಾರು ಅವರೆಯಕಾಳು ದಪ್ಪದ ಕೆಂಪು.

ಪ್ರಿನ್ಸ್ ಆ ಆನೆಯನ್ನು ತೆಗೆದುಕೊಳ್ಳಲು ಎರಡು ಕೈಗಳನ್ನೂ ನೀಡಬೇಕಾಯಿತು. ಅದನ್ನು ಹಿಡಿದುಕೊಂಡು ಹಿಂದು ಮುಂದೆ ನೋಡುತ್ತ, ಅದರ ಅಂದವನ್ನು ಅಂದವನ್ನು ಒಪ್ಪಿಕೊಳ್ಳುತ್ತ, ಅದರ ಹಣೆಯಲ್ಲಿರುವ ಕೆಂಪುಕಲ್ಲು ನೋಡಿ ಬಹಳ ಸಂತೋಷಪಟ್ಟು ” ಇದು ಗ್ರೇಟ್ ಕಾರ್ಬಂಕಲ್ ಅಲ್ಲವೆ ? ” ಎಂದರು. ಎಲ್ಲರೂ ನಕ್ಕರು. ಪ್ರಿನ್ಸ್ ತನ್ನ ಸಂತೋಷವನ್ನು ತೋರಿಸುವುದಕ್ಕೆ ನಾಯಕನ ಕೈ ಹಿಡಿದು ಕುಲುಕಿದನು. “ನೀವು ಬಹಳ ದೊಡ್ಡ ಷಿಕಾರಿದಾರರಂತೆ. ನಿಮ್ಮ ಹಂದಿಯ ಬೇಟೆ ಬಲು ಸೊಗಸಂತೆ ! ನಾವು ಅದನ್ನು ನೋಡುವುದು ಯಾವಾಗ ? ” ಎಂದು ಕೇಳಿದನು.

ನಾಯಕನು * ಹುಜೂರು ಅಪ್ಪಣೆಯಾದಾಗ ? ” ಎಂದು ಮಹಾರಾಜರ ಮುಖವನ್ನು ನೋಡಿದನು. ಅವರು ಡೆಪ್ಯುಟಿಕಮೀಷನರ ಮುಖವನ್ನು ನೋಡಿದರು. ಆತನು “ಮೊದಲ ಎರಡು ದಿವಸ ಅಂದರೆ ನಾಳೆ ನಾಡಿದ್ದು ಆನೆ ಕಟ್ಟುವುದು. ಆಮೇಲೆ ಭಾರಿಯ ಷಿಕಾರಿಗೆ. ಇಂದಿಗೆ ಐದನೆಯ ದಿನ ಎಂದರೆ ಗುರುವಾರ ಇವರ ಷಿಕಾರಿ ನೋಡುವುದು ” ಎಂದನು.

ಮಹಾರಾಜರು “ಬುಧವಾರ ಇವರದಾಗಲಿ, ಬೃಹಸ್ಪತಿವಾರ ಅದರಂತೆಯೇ ಷಿಕಾರಿ ಅನ್ನಿ ” ಅಂದರು. ಅದರಂತೆಯೇ ಗೊತ್ತಾಯಿತು.

ಅಂದಿನ ಸಂಜೆ ಅರ್ಧಗಂಟೆಯ ಹೊತ್ತು ಏಕಾಂತವಾಗಿ ತತ್ವಗಳನ್ನು ಹೇಳುವುದು ಎಂದು ಗೊತ್ತಾಯಿತು. ಆ ದಿನ ಮಹಾರಾಜರು ಸಪತ್ನೀಕನಾದ ಅತಿಥಿಯನ್ನು ಕರೆದು ಕೊಂಡು ಅರಣ್ಯ ಸೌಂದರ್ಯವನ್ನು ನೋಡಲು ಹೋದರು. ಒಂದೇ ಸಮನಾಗಿ ನಾಟಿಹಾಕಿ ಬೆಳೆಸಿರುವ, ಗಗನಚುಂಬಿಯಾಗಿ ಬೆಳೆದಿರುವ ತೇಗದ ಗಿಡಗಳು, ಅತಿಥಿಗೆ ಬಹಳ ಮೆಚ್ಚಿಗೆಯಾಯಿತು. ಅಲ್ಲಿ ಎತ್ತ ತಿರುಗಿದರೂ ಹೂವು ಹಸುರು. ಅಲ್ಲಿ ಪ್ರಿನ್ಸೆಸ್ ಕೋರಿಕೆಯಂತೆ ಕುರುಬರ ಹಾಡಿಗೆ ಹೋದರು. ಕಪ್ಪಗೆ ಗುಂಡು ಗುಂಡುಗೆ ಇರುವ ಆ ಕುರುಬರ ದೇಹಸೌಷ್ಟವನ್ನು ನೋಡಿ ಅತಿಥಿಗಳಿಗೆ ಆಶ್ಚರವಾಯಿತು. ಆ ಕಾಡಿನಲ್ಲಿ ಎಲೆಗಳುದುರಿ ಕಷಾಯ ವಾಗಿರುವ ನೀರನ್ನು ಕುಡಿದು, ಕೊಳೆತ ಎಲೆಗಳ ನಾತ ತುಂಬಿರುವ ಗಾಳಿಯನ್ನು ಸೇವಿಸುತ್ತ, ಸಿಕ್ಕಿದ ಆಹಾರದಿಂದ ಹೊಟ್ಟೆ ತುಂಬಿ ಕೊಂಡು, ಅರೆಬಟ್ಟೆಯನ್ನು ಉಟ್ಟು ಬಾಳುವ ಆ ಕುರುಬರ ಆರೋಗ್ಯ ಭಾಗ್ಯವನ್ನು ಕಂಡು ಆಶ್ಚರ ಪಡದಿರಲೆಂತು ? ಪ್ರಿನ್ಸೆಸ್ಗೆ ಅವರ ಮಕ್ಕಳನ್ನು ಎತ್ತಿಕೊಳ್ಳಬೇಕೆಂದು ಆಸೆ. ಗರ್ವ ಗಂಧಿತನವಿಲ್ಲದಿದ್ದರೆ, ಆಕೆಯು ಅವರ ಮನೆಯೊಳಕ್ಕೆ ಹೋಗಿ ಅವರ ಅಡುಗೆಯ ರುಚಿಯನ್ನೂ ನೋಡುತ್ತಿದ್ದಳೋ ಏನೋ ? ಆದರೆ ಪದವಿಯ ಬಿಂಕ ಅದಕ್ಕೆಲ್ಲ ಅವಕಾಶ ಕೊಡುವುದೇನು ? ಬೆಟ್ಟದಾಕೋಡಲ್ಲಿ ಮನೆ ಕಟ್ಟಿದರೆ, ಗಾಳಿಯ ಏಟನ್ನು ತಡೆಯಲೇ ಬೇಕು. ಕಡಲ ಮಗ್ಗುಲಲ್ಲಿ ಮನೆ ಕಟ್ಟಿದವನು, ಮೊರೆತವನ್ನು ಸಹಿಸಬೇಕು.

ಕುರುಬರು ಅತಿಥಿಗಳ ಗೌರವಾರ್ಥವಾಗಿ ಒಂದು ಕುಣಿತ ಕುಣಿದರು. ಅಂಡೆಯಲ್ಲಿ ತುಂಬಿಟ್ಟಿದ್ದ ಕಿರಿಜೇನು ತಂದುಕೊಟ್ಟರು. ತಾವು ತಿನ್ನುವ ತೊಡೆಯಗಾತ್ರದ ಹೆಗ್ಡೆಣಸು ಕಾಣಿಕೆಮಾಡಿದರು. ಅತಿಥಿಗಳು ಅವರಿಗೆ ಕಂಬಳಿ, ದುಪ್ಪಟಿ, ಸೀರೆಗಳನ್ನು ಕೊಟ್ಟು, ಅವರು ಮಾಡಿದ ನಮಸ್ಕಾರಗಳನ್ನು ಒಪ್ಪಿಸಿಕೊಂಡು ಹಿಂತಿರುಗಿದರು.

ಅಂದು ಕುರುಬರಿಗೆ ಎಂದೂ ಇಲ್ಲದ ಸಂತೋಷ ರಾಣಿ ಯಾರೋ ಅವರು ಕಾಣರು, ಚಕ್ರವರ್ತಿಯನ್ನು ಅಷ್ಟಕ್ಕೂ ಕಾಣರು. ಆದರೂ ಅವರಿಗೆ ಸಂಭ್ರಮ. ಅವರ ಕಣ್ಣಲ್ಲಿ ತಮ್ಮನ್ನು ನೋಡುವು ದಕ್ಕೆ ಬಂದಿದ್ದವರು ಮನುಷ್ಯಮಾತ್ರದವರಲ್ಲ. ಯಾರೋ ಮೇಲಿನಿಂದ ಇಳಿದು ಬಂದಿದ್ದ ದೇವತೆಗಳು. ಸಾಲದೆ, ಅವರ ಬಣ್ಣ ಅರ್ಧಮೊಂಕು ಹಿಡಿಸಿತ್ತು. ತಮ್ಮ ಮೈಬಣ್ಣನೋಡಿಕೂಂಡು ಅವರನ್ನು ನೋಡಿದರೆ, ತಾವು ಆನೆಯ ಬಣ್ಣವಾದರೆ ಅವರು ದಂತದ ಬಣ್ಣ ; ತಾವು ಅಮಾ ವಾಸ್ಯೆಯಾದರೆ ಅವರು ಹುಣ್ಣಿಮೆ.

ಪಾಪ! ಆ ಕಾಡು ಕುರುಬರು ಬೆರೆತುಹೋದುದು ಏನು ಅತಿ ಶಯ! ಮಹಾ ಮಯಾ ವಿದ್ವಾಂಸರೂ ಕೂಡ ಬ್ರಿಟಿಷರನ್ನು ದೇವತೆ ಗಳಿಗೆ ಹೋಲಿಸಿ ಹಾಡಿ ಹೊಗಳಿ ಹರಸಿರಲಿಲ್ಲವೇನು ? ತಪಸ್ವಿಗಳಾದ ಅವರೆಲ್ಲರ ಆಶೀರ್ವಾದ ಇದ್ಟುದರಿಂದಲೆಃ ಏನೋ ಇಂಡಿಯಕ್ಕೆ ಸ್ವರಾಜ್ಯ ಬರುವುದು, ಇಲ್ಲಿ ಸ್ವಾತಂತ್ರ್ಯೊದಯವಾದುದು, ಅಷ್ಟು ತಡವಾದುದು. ಬಹುಶಃ ಅವರು ‘ ಹೊರಟಹೋದಮೇಲ್ಶೂ ಕೆಲಸ ರನು? ಎನ್ಟೋಜನ, ಸ್ವರ್ಗಸ್ಥನಾದ ಪತಿಯನ್ನು ನೆನೆಸಿಕೊಂಡು ಅಳುವ ಪತಿವ್ರತೆಯಂತೆ ಅಳುತ್ತಿರಲಿಲ್ಲವೆ? ಅತಿಥಿಗಳಿಗೆ ಆ ಊಟ ಉಪಚಾರ ! ಎಲ್ಲೂ ನಡೆಯದ ವೈಭ ವದಿಂದ ನಡೆಯಿತು. ಸಂಜೆ ಐದುಗಂಟೆಯಾಯಿತು. ಅವರ ಮುಂದೆ ಮಲ್ಲಿಯ ತತ್ವಗಳ ಹಾಡುವಿಕೆ. ಮಲ್ಲಣ್ಣನು ನಡುಗಟ್ಟಿ ಕೊಂಡು ಈಶ್ವರನ ಸಭೆಯಲ್ಲಿ ಇರಬೇಕಾದಷ್ಟು ಭಯಭಕ್ತಿಗಳಿಂದ ಬಂದು ನಿಂತಿ ದ್ದಾನೆ. ನಾಯಕನು ನಡುಗಟ್ಟಿಕೊಂಡಿದ್ದರೂ ದರ್ಪದಿಂದ ನಿಂತಿ ದ್ದಾನೆ. ಮಗು ಮಲ್ಲಿ ಮಾತ್ರ ಗಾಬರಿ ಭಯ ಏನೂಇಲ್ಲದೆ, ಹಣೆತುಂಬ ಇಟ್ಟುಕೊಂಡಿರುವ ವಿಭೂತಿಯು ಮುಖಕ್ಕೆ ಅಪೂರ್ವವಾದ ಕಾಂತಿಯೊಂದನ್ನು ಬೀರುತ್ತಿರಲು, ಆ ಕಲಾಪತ್ತಿನ ಕಿರುಗೆಯನ್ನುಟ್ಟು, ಕಲಾಪತ್ತಿನ ರವಿಕೆ ತೊಟ್ಟು ನಿಂತಿದ್ದಾಳೆ. ನಾಯಕನ ಅರಮನೆಯ ಬಾಲತೊಡುಗೆಯ ಆಭರಣಗಳೆಲ್ಲ ಅವಳನ್ನು ಅಲಂಕರಿಸಿವೆ. ಬೆರಳು ಬೆರಳಿಗೂ ಸಣ್ಣಸಣ್ಣ ಹರಳಿನ ಉಂಗುರಗಳು. ಆ ಉಂಗುರಗಳು ಜಾರಿಬೀಳದಂತೆ ಸಣ್ಣ ಮುತ್ತಿನ ಸರಗಳು. ಆ ಸರಗಳನ್ನೆಲ್ಲ ಹಿಡಿದು ಕೊಂಡಿರುವ ಒಂದು. ಸಣ್ಣ ಪದಕ, ಅದರಮೇಲೆ ಮುಂಗೈಯಲ್ಲಿರುವ: ರತ್ನಖಚಿತವುದ ಪಟ್ಟೆ ಕಡಗ. ಅದರಮೇಲೆ ಮುದ್ದಾದ ಪೌಂಚಿ. ಅದರಮೇಲೆ ಸಿಂಹಲಲಾಟದ ಕಡಿಯ. ತೋಳಿಗೆ ಬಾಜೂ ಬಂದು. ಕತ್ತಿನಲ್ಲಿ ಅಡ್ಡಿಕೆ, ಅಸಲಿ, ಬಂದಿ, ಜೋಮಾಲೆ, ಏಕಾವಳಿಸರ, ಹನು ಮನ ತಾಳಿ, ಹುಲಿಯುಗುರು. ನಡುವಿಗೆ ನಾಗರಹೆಡೆಯ ಚಿನ್ನದ ಡಾಬು, ಬೈತಲೆಗೆ ಬೈತಲೆಯ ಬಟ್ಟು, ತಲೆಯಮೇಲೆ, ಮಲಕು: ಸೊಗ ಸಾಗಿ ಕಟ್ಟಿರುವ ತುರುಬಿಗೆ ಒಂದು ಜಡೆಬಿಲ್ಲೆ : ಹೂವಿನ ಕುಚ್ಚುಗಳು. ಕಿವಿಗೆ ಓಲೆ, ಚಳತುಂಬು, ಬುಗುಡಿ, ಕಾಲಿಗೆ ಗಗ್ಗರ, ಪಿಲ್ಲಿ, ಸರಪಳಿ, ಮಲ್ಲಿಯು ಚಿನಿವಾರರ ಅಂಗಡಿಯ ಬೊಂಬೆಯಾಗಿದ್ದಾಳೆ.

ಪ್ರಿನ್ಸೆಸ್ ಅದನ್ನು ನೋಡಿ ಆಶ್ಚರ ಚಕಿತಳಾದಳು. ಮಗ್ಗು ಲಲ್ಲಿದ್ದ ಮಹಾರಾಜರನ್ನು, “ನಿಮ್ಮ ದೇಶದಲ್ಲಿ ಮಕ್ಕಳಿಗೆ ಇಷ್ಟು ರತ್ನಾ ಭರಣಗಳನ್ನು ಅಲಂಕರಿಸುವಿರಾ ? ” ಎಂದು ಕೇಳಿದಳು : ” ಇನ್ನೊಂದೆರಡು ಮೂರು ಬಿಟ್ಟು ಹೋಗಿದೆ” ಎಂದರು.

“ಹಾಗೆಯೇ ? ಅವಳನ್ನು ಹತ್ತಿರ ಕರೆದು ಅದನ್ನೆಲ್ಲಾ ನೋಡ ಬೇಕಲ್ಲಾ ! ”

“ಆಗಬಹುದು ಈ ಹಾಡುಗಳಾಗಲಿ.”

ಮಲ್ಲಿಯ ಹಾಡು ಆರಂಭವಾಯಿತು. ಏಕನಾದವನ್ನು ಶುದ್ಧ ವಾಗಿ ಬಾರಿಸಿಕೊಳ್ಳುತ್ತಾ, ಅದರ ನಾದಕ್ಕೆ ತಕ್ಕಂತೆ ಹೊಂದಿಕೊಂಡು ತತ್ವಗಳನ್ನು ಮುದ್ದಾಗಿ ಹಾಡಿದಳು.

“ಅನುದಿನ ಎನ್ನೊಳಿದ್ದು, ಎನಗೊಂದುಮಾತ |
ಪೇಳದೆ ಪೋದೆಯಾ ಹಂಸ ||ಪ||
ಕೆರೆಯ ನೀರನು ಏರಿ | ತಡೆದುಕೊಂಡಿದ್ದಂತೆ |
ನಾ ನಿನ್ನ ತಡೆದುಕೊಂಡಿದ್ದೆನಲ್ಲಾ ! ||ಹಂಸ||
ಅಟ್ಟ ಬೆಟ್ಟದ ನಡುವೆ ಇಟ್ಟೆ ಡೆಮೆಳೆಯೊಳು ಜೇನು |
ಕಟ್ಟಿತು ತನ್ನ ಸುಖಕಾಗಿ ||
ತಟ್ಟಾನೆ ತಾನೆದ್ದು ಜೇನುಂಡು ಹೋಗುವಾಗ ಹುಳತನ್ನ |
ಅಟ್ಟೆಗೆ ಹೇಳಿ ಹೋಯಿತೆ ಒಂದು ಮಾತ ||-

ಜನಪದಗೀತೆಯ ರಾಗದಲ್ಲಿ ಗಂಭೀರವಾಗಿ ಹಾಡುತ್ತಿರುವ ಮಗುವಿನ ಸಂಗೀತವು ಅತಿಥಿಗಳಿಗೆ ಅರಮನೆಯ ಭಾರಿ ಸಂಗೀತಗಾರರ ಸಂಗೀತಕ್ಕಿಂತ ಚೆನ್ನಾಗಿ ಹಿಡಿಸಿತು. ತಮ್ಮ ಜೊತೆಯಲ್ಲಿ ಬಂದಿದ್ದ ಸಂಗೀತಗಾರನನ್ನು ಕರೆದು ಇದರ ನೊಟೇಷನ್ ಬರೆದುಕೊ ಎಂದು ಹೇಳಿ, ಪ್ರಿನ್ಸ್ನು ಮಹಾರಾಜರನ್ನು “ಇದರ ಅರ್ಥವೇನು ? ” ಎಂದು ಕೇಳಿದನು. ಅವರು “ಇದು ವೇದಾಂತ! ಜೀವಕ್ಕೂ ದೇಹಕ್ಕೂ ನಡೆದ ಸಂಭಾಷಣೆ” ಎಂದರು.

ಹಾಗೆಯೇ ಆತನು, “ಇಂಡಿಯದ ಹಳ್ಳಿ ಹಳ್ಳಿಯಲ್ಲೂ ಇಂತಹ ವೇದಾಂತದ ಹಾಡುಗಳನ್ನು ಹಾಡುವ ಜನರಿದ್ದಾರೆ. ಅವರು ನಿರಾಶ್ರಯರಾಗಿ ತಿರುಗಿಕೊಂಡಿರುತ್ತಾರೆ.” ಎಂದು ತಿಳಿದು, “ಹಾಗಿದ್ದರೆ ನಿಮ್ಮ ಜನದ ವಿಚಾರವಾಗಿ ಪ್ರೊಫೆಸರ್ ಮ್ಯಾಕ್ಸ್ ಮುಲ್ಲರು ಹೇಳಿರುವುದು ನಿಜ. ನೀವೆಲ್ಲ ವೇದಾಂತಿಗಳು ? ಎಂದು ಅಭಿನಂದನ ಮಾಡಿದನು.

ಮಲ್ಲಿಯ ಕಚೇರಿ ಅರ್ಧಗಂಟೆಯಾಯಿತು. ಅದಾದ ಮೇಲೆ ಪ್ರಿನ್ಸೆಸ್ಳು ಆ ಮಗುವನ್ನು ಹತ್ತಿರ ಕರೆದು ಕೂರಿಸಿಕೊಂಡು ಅವಳ ಮೈ ಮೇಲಿದ್ದ ಒಂದೊಂದು ಒಡವೆಯನ್ನೂ ಮುಟ್ಟಿ ಮುಟ್ಟಿ ನೋಡಿ, ಅದರ ಹೆಸರು ಕೇಳಿ ತಿಳಿದುಕೊಂಡು, ಅದನ್ನು ಹಾಕಿ ತೆಗೆಯುವ ವಿಧಾನವನ್ನೂ ಅರಿತುಕೊಂಡು ಬಹಳ ಸಂತೋಷಪಟ್ಟಳು. ಅವಳು ಗಂಡನ ಕಿವಿಯಲ್ಲಿ “ನಮ್ಮಲ್ಲಿ ಇಷ್ಟು ನಾಜೋಕಾದ ಒಡವೆಗಳಿಲ್ಲ : ಇಷ್ಟು ಜಾತಿಯೂ ಇಲ್ಲ.” ಎಂದಳು.

ಕೊನೆಗೆ ಅವರು ಅಲ್ಲಿರುವವರೆಗೂ ತಪ್ಪದೆ ದಿನವೂ ಮಲ್ಲಿಯ ಕಚೇರಿ ಆಗಬೇಕು ಎಂದು ಅಪ್ಪಣೆಯಾಯಿತು.

ಮಲ್ಲಣ್ಣ ಯಾವುದೋ ಲೋಕಕ್ಕೆ ಹೋಗಿದ್ದ. ನಾಯಕನ ಮನಸ್ಸು ಹತ್ತಾರು ವರ್ಷ ಮುನ್ನಡೆದು ತರುಣಿಯಾದ ಮಲ್ಲಿಯೊಡನೆ ಸರಸ ಸಲ್ಲಾಪಗಳನ್ನಾಡುತ್ತ ಕಾಮಕೇಳಿಗೆ ಸಿದ್ದವಾಗುತ್ತಿತ್ತು.

ನಾಯಕನು ಸಾರೋಟಿನಲ್ಲಿ ಹಿಂತಿರುಗಿದನು. ಮಲ್ಲಣ್ಣನಿಗೆ ತಾನು ಅಲ್ಲಿಗೆ ಹೋಗುವಾಗ ಸಾರೋಟಿನಲ್ಲಿ ಕುಳಿತು ಕೊಳ್ಳುವುದು ಹೇಗೆ ಎನ್ನಿಸಿತ್ತು. ಈಗಂತೂ ಏನೋ ಆಗಿಹೋಗಿದೆ. ನಾಯಕನು ಅವನು ತಡೆಯುತ್ತಿರುವುದನ್ನು ನೋಡಿ, “ಹತ್ತೋ ಪುಣ್ಯಾತ್ಮ ! ಆಗಲೇ ಹೊಟ್ಟೆ ಪದ ಹೇಳುತ್ತಿದೆ” ಎಂದು ಒದರಿದನು. ಅವರು ಮನೆಗೆ ಬಂದು ಊಟಕ್ಕೆ ಕುಳಿತುಕೊಳ್ಳುವ ವೇಳೆಗೆ ಒಂಭತ್ತು ಗಂಟೆಯಾಗಿ, ಕ್ಯಾಂಪಿನಿಂದ ಸಂತ್ರಿಗಳ ತುತ್ತೂರಿಯು ಕೇಳಿಸಿತು.

ಆ ದಿನ ಮಲ್ಲಿ ನಾಯಕನ ಜೊತೆಯಲ್ಲಿ ಊಟಮಾಡಿದಳು. ” ಪಾಪ! ಮಗು

” ಎಂದು ಅವನು ಅವಳನ್ನು ತನ್ನ ಹಾಸುಗೆಯ ಮೇಲೆ ಮಲಗಿಸಿಕೊಂಡನು.

ಮಲ್ಲಣ್ಣ ನಾಯಕನ ಗುಡಾರದಲ್ಲಿಯೇ ಮಲಗಿದನು : ಅವನಿಗೆ ಏನೇನೋ ಕನಸುಗಳು. ಎಲ್ಲಾ ವೈಭವದ ಕನಸುಗಳೇ! ಆ ವೈಭವಕ್ಕೆ ಮಲ್ಲಿ ನಾಯಕ, ಹೇಗೆ ಹೇಗೊ ಕಾರಣರು ಎನ್ಸಿಸಿದ್ದರೂ, ಬೆಳಗಾದಾಗ ಆ ವಿವರಗಳು ಒಂದೂ ನೆನಪಿರಲಿಲ್ಲ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರ್‍ಪಿಸಿಕೊ
Next post ಕರೆಯಾಲೇನೇ?

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…