ತನ್ನತಾನೆ ಚಂದ

ತನ್ನತಾನೆ ಚಂದ ತನ್ನದೆಲ್ಲವು ಚಂದ
ತನ್ನ ಮೀರಿದ ತಾನು ಇನ್ನು ಚಂದ
ತನ್ನ ಮಾನಿನಿ ಚಂದ ಮನಿಮಾರು ಕುಲಚಂದ
ತನ್ನದೆಲ್ಲವ ಮೀರಿದ್ದಿನ್ನು ಚಂದ

ಹಾಂಗ ಹೋದರ ಹಾಂಗ ಹೀಂಗ ಬಂದರ ಹೀಂಗ
ಹಾದಿಮನಿ ಜಡಿಲಿಂಗ ನೋಡು ಮ್ಯಾಲ
ತನಗಾಗಿ ಸತ್ತವರು ತನಗಾಗಿ ಅತ್ತವರು
ಏಳು ಸುತ್ತಿನ ಕ್ವಾಟಿ ಕರಿಯ ಮಂಗ

ತನ್ನೊಳಗಿನ ತಾನು ಮಾವು ಮಲ್ಲಿಗಿ ಜೇನು
ಸತ್ತ ಸಾವಿನ ಹುತ್ತ ತನ್ನ ಸುತ್ತ
ಜಂಗುಜೋಳಿಗಿ ಈಚೆ ಹುಗ್ಗಿಹೋಳಿಗಿ ಆಚೆ
ಮುಳ್ಳುಮಲ್ಲಿಗಿ ಕಂಟಿ ಸುತ್ತಮುತ್ತ

ಹೆಣಕೊಳ್ಳ ಕುಣಿ ಈಚೆ ತಾಯಿ ಪಾರೋತಿ ಆಚೆ
ಮೇಲು ಮೇಲಿನ ಮ್ಯಾಲೆ ಪ್ರೇಮಲಿಂಗಾ
ಗಂಟಿ ಚವುಡೇರಿಲ್ಲೆ ಗೌರಿಗಂಗೇರಲ್ಲೆ
ಮ್ಯಾಲ ಅಮೃತ ಲಿಂಗಾ ಜ್ಞಾನಲಿಂಗಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಪಮಾ ನಿರಂಜನ
Next post ಬೋಳಗುಮ್ಮಟ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…