೧ ಮೂಡಣ ಬಾನಿನ ಕರೆ ನಗಲು, ಕತ್ತಲೆ ಮೊತ್ತವೆ ಪರಿದುಗಲು, ಉಷೆರಮೆ ನಿಶೆರಮೆಯನು ಜಯಿಸಿ ಮುಂದಕೆ ಬಂದಳು ಛವಿ ಹರಿಸಿ! ೨ ಕತ್ತಲೆ ಕಡಲಲಿ ತಿರೆ ಮುಳುಗಿ. ನಿಶ್ಚೇಷ್ಟಿತವಾಗಿರಲುಡುಗಿ, ಬೆಳಕಿನ ತಿಕಿಳಿವನು ಕರುಣಿಸುತ ಎಬ್ಬಿಸುತಿರುವಳು ನಸುನಗುತ! ೩ ಹೊಸದಾಗರಳಿದ ತಾವರೆವೋಲ್‌ ‘ಲಕ-ಲಕ’ ಹೊಳೆವಳು ...

ಜೀವನವೆಂದರೆ ಅನುಭವಗಳ ಮಹಾ ಸಂಗ್ರಹ. ಹಲವು ನೈಜ ಘಟನೆಗಳು ನಮ್ಮ ಮೇಲೆ ಅಗಾಧ ಪರಿಣಾಮ ಬೀರಿ ಮರೆಯದ ನೆನಪುಗಳಾಗಿ ಅನುಭವದ ಖಜಾನೆಗೆ ಸೇರಿ ಹೋಗುತ್ತವೆ. ಆ ಖಜಾನೆ ತೆರೆದಾಗ ಇಂಥಾ ನೆನಪುಗಳು ಸ್ವಾರಸ್ಯಕರವಾದ ಕಥೆಗಳಾಗಿ ಮೂಡುತ್ತವೆ. ಕಥೆಗಾರನ ಖಜಾನೆ...

ಕನ್ನಡದಾ ಬಾವುಟವ ಹಾರಿಸಬನ್ನಿ ಕನ್ನಡದಾ ಕಹಳೆಯ ಮೊಳಗ ಬನ್ನಿ ಕನ್ನಡದಾ ದೀವಿಗೆ ನೀವಾಗಿ ಬನ್ನಿ ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ|| ಕೆಂಪು ಹಳದಿ ಬಣ್ಣದ ಧ್ವಜವ ಹಿಡಿದು ವೀರಗಾಥೆಯ ತಿಲಕವನ್ನು ಹಣೆಯ ಮೇಲೆ ಇಟ್ಟು ಐಕ್ಯತೆಯ ಭಾವುಕದ ಮೆರಗನ್...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದಾರಿಯಲ್ಲಿ ಎದುರಾದರು ಪಾದ್ರಿ ಮಾತ ಮಧ್ಯೆ ಎಚ್ಚರಿಸಿದರು. ‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ, ಬತ್ತಿ ಹೋಗುತಿವೆ ನಾಳಗಳು; ವಾಸಿಸು ಹೆಣ್ಣೆ ದೇವಸೌಧದಲಿ, ತಕ್ಕುವಲ್ಲ ಕೊಳೆರೊಪ್ಪಗಳು’. ಕೂಗಿ ಹೇಳಿದೆನು ಪಾದ್ರಿಗೆ ...

“ನೀವೇನೂ ಹೆದರೋದು ಬೇಡಾ. Stomach Wash ಕೊಟ್ಟಿದ್ದೇವೆ. ಎಲ್ಲಾ ಮಾತ್ರೆಗಳು ಹೊರಬಂದಿವೆ…” “ನಮ್ಮ ಹುಡುಗ ಆಗ ಹೋಗಿರದಿದ್ದರೆ ಅಪಾಯವಾಗುತ್ತಿತ್ತು”. “ಮುಂದಿನ ವಾರ Tubetemy Camp ಇತ್ತು. ಅದಕ್ಕೆ ...

೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ ವಿ...

ಯಾಕೆ ಗುಂಡು ಗಜಗದಾಟ ನಮ್ಮ ನಾವು ಮರೆತೆವೆ ಯಾಕೆ ರಕ್ತ ರುಂಡ ಮುಂಡ ನಮ್ಮ ಮನೆಯ ಸುಟ್ಟೆವೆ ನೋಡು ಒಂದೆ ನೀಲ ಗಗನ ಒಂದೆ ತಾಯಿ ಧರಣಿಯು ಒಂದೆ ಕುಲವು ಮನುಜ ನೆಲವು ಯಾಕೆ ಗಡಿಗಿ ಭರಣಿಯು ನಾವು ಹೂವು ಹಸಿರು ಹಕ್ಕಿ ನಾವು ನಗುವ ಮಕ್ಕಳು ನಾವು ಚುಕ್ಕಿ...

ಗಂಗವ್ವ ಗಂಗಮಾಯಿಯಾಗಿ ಹರಿದು ಹೋಗಿ ಭಾರತೀಯರ ಮನದಲ್ಲಿ ಪವಿತ್ರಳಾಗಿ ನಿಂತಿರುವಳಷ್ಟೆ. ಅಷ್ಟೆ ಪಾವನಳಾಗಿ ಗಂಗಜ್ಜಿ ಗಾಣಾದ ಮೂಲಕ ನಿಂತಿದ್ದಾಳೆ. ಅಲ್ಲವೆಂದವರಾರು? ಅವಳ ಗಾನವನ್ನು ಬಲ್ಲವರು, ತಿಳಿಯದೇ ಇರುವವರು ಎಲ್ಲರಿಗೂ ಗಂಗಜ್ಜಿ ಎಂದರೆ ಪ್ರೀತ...

ಒಂದೇ ಕೇರೀಲ್ ಉಟ್ಟ್ ಬೆಳದೋರು ಒಂದೇ ಬೀದೀಲ್ ಒತ್ ಕಳದೋರು ನಾವ್ಗೊಳ್ ಆಡಿ ಮಾಡಿದ್ದೆಲ್ಲಾ ನಿಂಗ್ ನೆಪ್ಪೈತ ನಂಜಿ? ಕಲ್ಲು ಬಕ್ರೆ ಆರೀಸ್ಕೋಂತ ಗಂಡ ಯೆಡ್ತೀರ್ ಸಂಸಾರಾಂತ ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್ ನಿಂಗ್ ನೆಪ್ಪೈತ ನಂಜಿ? ೧ ರತ್ನ ನಂಜಿ...

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ ಚಿತ್ರ...

ಗುರುಗಳಲ್ಲಿ ನಮಸ್ಕರಿಸಿ ಶಿಷ್ಯ ಹೇಳಿದ- “ಮಳೆ ಸುರಿದಾಗ ಮೋಡಕ್ಕೆ ಮುಕ್ತಿ. ಗರಿಗೆದರಿದಾಗ ಹಕ್ಕಿಗೆ ಮುಕ್ತಿ. ಹೂವರಳಿದಾಗ ಮೊಗ್ಗಿಗೆ ಮುಕ್ತಿ. ಗುಡಿಗಿನಲ್ಲಿ ಮಿಂಚಿಗೆ ಮುಕ್ತಿ. ನನಗಿಲ್ಲವೇ ಮುಕ್ತಿ?” – ಎಂದು ಕಣ್ಣು ಮುಚ್...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...