೧ ಮೂಡಣ ಬಾನಿನ ಕರೆ ನಗಲು, ಕತ್ತಲೆ ಮೊತ್ತವೆ ಪರಿದುಗಲು, ಉಷೆರಮೆ ನಿಶೆರಮೆಯನು ಜಯಿಸಿ ಮುಂದಕೆ ಬಂದಳು ಛವಿ ಹರಿಸಿ! ೨ ಕತ್ತಲೆ ಕಡಲಲಿ ತಿರೆ ಮುಳುಗಿ. ನಿಶ್ಚೇಷ್ಟಿತವಾಗಿರಲುಡುಗಿ, ಬೆಳಕಿನ ತಿಕಿಳಿವನು ಕರುಣಿಸುತ ಎಬ್ಬಿಸುತಿರುವಳು ನಸುನಗುತ! ೩ ಹೊಸದಾಗರಳಿದ ತಾವರೆವೋಲ್‌ ‘ಲಕ-ಲಕ’ ಹೊಳೆವಳು ...

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತ್ತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನ...

ಮೌನ…. ಸ್ಮಶಾನ ಮೌನ….. ಮೌನದ ಭೀಕರತೆಯ ಅರಿವಾಗುವುದು ಅದರ ಹಿಂದಿನ ಭೀಕರ ಗದ್ದಲದ ಪ್ರಚಂಡತೆಯ ಪ್ರಖರತೆಯಿಂದ ಮಾತ್ರವಂತೆ. ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಂತೆ…. ಯಾರು ಹಾಗೆಂದವರು? ಮಾವೋನೋ ಲೆನಿನನೋ? ಕ್ಷಣ...

ಕನ್ನಡ ತುತ್ತೂರಿ ಊದುವ ಬನ್ನಿ ಕನ್ನಡ ಜ್ಯೋತಿಯ ಬೆಳಗುವ ಬನ್ನಿ ನಿತ್ಯ ಉತ್ಸವದನಡೆಯಲ್ಲಿ ಜಯಕಾರವ ಮೊಳಗುವ ಬನ್ನಿ ವನರಾಶಿಯ ಕಲೆ ತಾಣದ ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ|| ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು ಸ್ನೇಹ ಅಧರದಲ್ಲಿ ಶೃಂಗ ತಣಿರ ಬ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು; ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು; ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು ದೊಡ್ಡ ಚರ್‍ಚಿನ ಗಂಟೆ ಬಡಿದು, ಗಾಳಿಯಲೀಗ ರಾತ್ರಿಂಚರರ ಹಾಡು. ಚಿಕ್ಕಯೋ ಚ...

ಚಿನ್ನೂ, ನಿಜಾ… ಹೇಳಲೇನೆ? ಎಲ್ಲರ ಮುಂದೆ ಧೈರ್ಯ, (ಭಂಡತನ?) ಪ್ರದರ್ಶಿಸುತ್ತಿದ್ದ ನನಗೆ ಒಳಗೊಳಗೆ ಭಯವಾಗತೊಡಗಿತ್ತು. ‘ಅತ್ಯಾಚಾರ… ನಂತರ ಕೊಲೆ…’ ಹೀಗೆ ಏನೇನೋ ವಿಷಯಗಳು ಕಣ್ಣುಗಳ ಮುಂದೆ ಸರಪಳಿಯಂತೆ ಬರತೊಡಗ...

ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆ...

ಕನ್ನಡ ನಲ್ಬರಹದ ಸೇವೆ ಮಾಡಲು ಕಾರಣರಾದ ನಮ್ಮೆಲ್ಲ ಬರಹಗಾರರಿಗೆ, ಓದುಗರಿಗೆ ಹಾಗೂ ಸದಸ್ಯರಿಗೆ ನನ್ನಿ....

ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ ಇರುಳೊಂದು ಪರಿನಿದ...

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸ...

ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್‌ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨ ಮನಸಿನ್ ಜೋಡಿ ಯೀಣೆ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...