ಕನ್ನಡ ತುತ್ತೂರಿ
ಊದುವ ಬನ್ನಿ
ಕನ್ನಡ ಜ್ಯೋತಿಯ
ಬೆಳಗುವ ಬನ್ನಿ

ನಿತ್ಯ ಉತ್ಸವದನಡೆಯಲ್ಲಿ
ಜಯಕಾರವ ಮೊಳಗುವ ಬನ್ನಿ
ವನರಾಶಿಯ ಕಲೆ ತಾಣದ
ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ||

ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು
ಸ್ನೇಹ ಅಧರದಲ್ಲಿ
ಶೃಂಗ ತಣಿರ ಬಾಂಧಳದಲ್ಲಿ
ಶೃಂಗಾರ ರಸದನಿಯಲ್ಲಿ ||ನಿತ್ಯ||

ರೋಮ ರೋಮ ಧಮನಿಗಳಲ್ಲಿ
ಸತ್ಯವೇ ಚೇತನ ಸವಿನುಡಿಯಲ್ಲಿ
ಮಾಧುರ್ಯ ಜೀವತಂತಿ ಮಿಡಿವ
ಕರಗಳಲ್ಲಿ ನಿತ್ಯವೇ ಚೇತನ
ಕಸ್ತೂರಿ ಕನ್ನಡ ನವ ಚೇತನ ||ನಿತ್ಯ||
*****