
ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ! ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ? ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ ಮಳೆ ಬಿಸಿಲಿನ, ಹೊಳೆ ಉಸಿರಿನ ಪಾದದಲ್ಲಿ ಚಲಿಸಿ ಉದಯಾಸ್ತದ ...
ನಿನ್ನ ಪ್ರತಿ ಹೆಜ್ಜೆಯಲ್ಲೂ ನೀನು, ನಿನ್ನ ಗುರಿ ಕಾಣದಿದ್ದರೆ ಅದು ದಾರಿಯಾದರೂ ಆದೀತು ಹೇಗೆ? *****...
ಆಟೋ ಇಳಿಯುತ್ತಿದ್ದಂತೆ ಮೊದಲು ಕಂಡ ಮುಖವೇ ರಂಗಣ್ಣನದು. ಮನೆಯ ಒಳಗೆ ಹೆಜ್ಜೆ ಇಡಲೇ ಜಿಗುಪ್ಸೆ ಉಂಟಾಯಿತು. ಸತ್ತವರ ಮನೆಯ ಮುಂದೆ ಬೆರಣಿಯ ಹೊಗೆ ಹಾಕೋದು ತಪ್ಪಬಹುದು. ಆದರೆ ರಂಗಣ್ಣ ಬರೋದು ತಪ್ಪಲ್ಲ. ಬಂಧು ಬಾಂಧವರ ಸಂಸ್ಕಾರಗಳಿಗಷ್ಟೇ ಅಲ್ಲ ಮಿತ...
ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****...
ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ ಹಾಡುತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಗಾಳಿ ಬೀಸ...
ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು? ಏನೆಲ್ಲ ಆಗಬಹುದು… ಸಂಸ್ಥೆಗೆ ನಶ್ಟವಾಗಬಹುದು ಪ್ರಯಾಣಿಕರಿಗೆ ಕಶ್ಟವಾಗಬಹುದು ರಿಕ್ಷಾ, ಟೆಂಪೋ, ಮೆಟಡೋರ್, ಲಾರಿ, ಟ್ರಕ್ಕು, ಖಾಸಗಿ ಬಸ್ಸು… ಎನೆಲ್ಲ ತುಂಬಿ, ಆ ದಿನದ...
ಅಮಾವಾಸ್ಯೆಯ ದಿನ ಈ ಚಂದ್ರ ಸಾಮೀ ಗುಟ್ಟಾಗಿ ಏನ್ಮಾಡ್ತಾನಂತೇ ಗೊತ್ತಾ? ಗೊತ್ತು ಕತ್ತಲಲ್ಲೇ ಸೂರ್ಯನ್ಮನೆಗೇ ಹೋಗಿ ಬೆಳದಿಂಗಳ ಕದೀತಾನಂತೆ ನಮ್ಮಮ್ಮಾನೇ ಹೇಳ್ದುಳು. *****...
ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ ಬದಲಾವಣೆ ಮಾಡಿಕೊಂತೀವಿ ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














