ಬಂದಿತು ದೀಪಾವಳಿ ಮನೆಮನೆಯೊಳು ಕುಡಿಯಾಡಿಸುತಿದೆ ನರುಬೆಳಕು ಮಿರುಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು. ಕತ್ತಲೊಡನೆ ಪಂತವಿಲ್ಲವಿವಕೆ ತಮದೊಡನಜ್ಜಿಯಾಟವಾಡುವಂಥ ಬಯಕೆ ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು ಈ ನೋಟವೆನ್ನ ಮನದ ಜಡಕೆ ಮದ್ದು. ಧಗ ಧಗ ನುರಿದುರವಣಿಸುತ ಬಂದಾ ಹರಿಚಕ್ರವನಸುವಿಂ ಶ...

ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್...

ನೀನು ನಡೆಯುವ ದಾರಿ ನನ್ನದಿರಲೆಂದು ನಾ ಬೇಡುವೆನು ಅನುದಿನವು. ನಿನ್ನ ಹೆಜ್ಜೆಯ ಗುರುತು ನನ್ನ ಬಿಜ್ಜೆಯದಾಗಲೆಂಬ ಹರಕೆಯ ಹೊರತು ಮತ್ತಾವುದನ್ನು ತಿಳಿಯೆ. ಬಯಲಿನಾ ಕಾಡಿನಾ ಸುಳಿವಿನಲಿ ನೀನಿರುವ ಹೊಳವಿರಲಿ ಚಿದ್ಘನಾ! ನನ್ನ ಸಂಗಡಿಗ ನೀನೆಂಬ ಸಂಗತಿ...

ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ ಚಂಗುಲಾಬಿಯ ತೂರುವಾ ಆತ್ಮಸಂಯಮ ಯೋಗ ಸ೦ಯಮ ಲಿಂಗ ಸತ್ಯವ ಸಾರುವಾ ನಾ...

ಯಾವುದಾದರೂ ಒಂದು ಸಂಗತಿ ನಮಗೆ ಇಷ್ಟವಾಗದಿದ್ದರೆ ಅದನ್ನು ದೂರುತ್ತಾ ಇರುವ ಬದಲು ಅದಕ್ಕೆ ಪರಿಹಾರ ಅಥವಾ ಪರ್‍ಯಾಯ ಹುಡುಕಿದರೆ ಜೀವನ ಸುಲಭವಾಗುತ್ತದೆ. ಇಲ್ಲವಾದರೆ ಯಾವ ಸಮಸ್ಯೆಗಳೂ ಬಗೆಹರಿಯುವುದೇ ಇಲ್ಲ. ನಮ್ಮನ್ನು ಕಾಡುತ್ತಲೇ ಇರುತ್ತವೆ. ಕೆಲವ...

ಅದೊದೊದೋ ! ರಾಜಾ ! ರೋರೀರ್‌ ! ರಾಕೀಟ್ ! ಆಮೇಲ್ ಲೇಡಿ ! ಜೋಗಿನ್ ಜಲಪಾತ ಅಂತಂತಾರೆ ಇವುಗೋಳ್ ನಾಕಕ್ ಕೂಡಿ ! ೧ ನಸ್ಟಕ್ಕ್ ಸಿಕ್ಕಿ ನರಳೊನ್ಗೇನೆ ಮೇಲಿಂದ್ ಮೇಲೆ ಕಸ್ಟ ಒದ್ಕೊಂಡ್ ಬಂದಿ ಬಡದ್ ಇಕ್ಕೋದ್ನ್ ಮಾಡ್ತೈತ್ ರಾಜ ಸ್ಪಸ್ಟ ! ೨ ದುಡ್ ಉಳ್...

ಚುಮು ಚುಮು ನಸುಕಿನಲಿ ಹೂವುಗಳರಳುವವು ಅಂದವ ತೋರಿ ಸುಗಂಧವ ಬೀರಿ ಸಂಜೆಗೆ ತೆರಳುವವು. ಅದೆ ಹೊಸ ಹರೆಯದಲಿ ಆಸೆಯು ಮೊಳೆಯುವದು ಹೂತು ಕಾತು ಹಣ್ಣಾತು ಬೀತು ಮುಪ್ಪಿನಲಳಿಯುವದು. ಗಾಳಿಯ ಗತಿಯಲ್ಲಿ ದುಃಖದ ಸುಳಿವಿಲ್ಲ ಚಿಕ್ಕಮಕ್ಕಳೂ ನಕ್ಕ ನಗೆಯಲೂ ಸು...

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕ...

ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನ...

ಸಾಣಿಕಟ್ಟಿನ ಸಣ್ಣತಂಗಿ ಮಗುಲೇ ಶುಣ್ಣ ಕೊಡುವಿಯೇನೇ || ೧ || ಸುಣ್ಣ ಕೊಟ್ಟರೂ ಸೂಳೆ ಮನೆ ಬರುತ್ತ್ಯೋ ? ನಾ ಗಂಡನಿಲ್ಲದ ಗರತಿ || ೨ || ನಾನೀಗೆ ನಿಚ್ಚ ಹಾದರಗಿತ್ತೀ ನೀ ಇರುವ ಜಾಗ ತೋರು || ೩ || ಶಣ್ಣ ಕೋಣೇಲಿ ಶಾಲೆಯ ಮಂಚದ ಮೇನೆ ನೆಣಿಯ ಬೆಳಕಿ...

ಬರೆದವರು: Thomas Hardy / Tess of the d’Urbervilles ೧-೯-೧೯೨೦. ‘ತಿಲಕರು ಸ್ಪರ್ಗ ವಾಸಿಗಳಾದರು. ಚೌಪಾತಿಯ  ಸಮುದ್ರ ತೀರದಲ್ಲಿ ಅವರ ದೇಹಕ್ಕೆ ಸಂಸ್ಕಾರವಾಗಬೇಕೆಂದು  ಬೊಂಬಾಯಿಯ ಪುರಜನರು ಸಂಕಲ್ಪಿಸಿದರು. ಸರಕಾರ ಒಪ್ಪಲಿಲ್ಲ.  ಜನ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...