ಬಂದಿತು ದೀಪಾವಳಿ ಮನೆಮನೆಯೊಳು ಕುಡಿಯಾಡಿಸುತಿದೆ ನರುಬೆಳಕು ಮಿರುಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು. ಕತ್ತಲೊಡನೆ ಪಂತವಿಲ್ಲವಿವಕೆ ತಮದೊಡನಜ್ಜಿಯಾಟವಾಡುವಂಥ ಬಯಕೆ ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು ಈ ನೋಟವೆನ್ನ ಮನದ ಜಡಕೆ ಮದ್ದು. ಧಗ ಧಗ ನುರಿದುರವಣಿಸುತ ಬಂದಾ ಹರಿಚಕ್ರವನಸುವಿಂ ಶ...

ಗುರು ಕರುಣಿಸೊ ಹರ ಹರಿಸೊ ಎನ್ನ ಭವಸಾಗರದಿ ನಿನ್ನ ಹೊರೆತು ಇನ್ನೊಂದು ಬೇಡ ವಿಷಯ ಸುಖ ಆದಿ ಕಂಗಳು ತುಂಬಿವೆ ಮನನೆಂದಿದೆ ನಿನ್ನ ನಾಮ ವಿಶೇಷದಿ ಎನ್ನ ತನುವಿನ ಮೂಲೆ ಮೂಲೆಯಲಿ ಬೆಳಗಿಸೊ ಪುಣ್ಯ ವಿಶೇಷದಿ ಅಣು ಜೀವಿ ಕೋಟಿಯಲ್ಲವೂ ನಿನ್ನ ಧ್ಯಾನಿಸುತ್...

ಆ ಮನೆ ಬೇಕೊ ಈ ಮನೆ ಸಾಕೊ ಎರಡೂ ಮನೆಗಳು ಮನುಷ್ಯನಿಗೆ ಬೇಕೊ ಭೂತ ಬೇಕೊ ಭವಿಷ್ಯ ಸಾಕೊ ವರ್‍ತಮಾನಕ್ಕೆ ಎರಡೂ ಬೇಕೊ ಹಳೆಯಲೆ ಬೇಕೊ ಹೊಸ ಎಲೆ ಸಾಕೊ ಮರವೊಂದಕ್ಕೆ ಎರಡೂ ಬೇಕೊ ಮಳೆಯು ಬೇಕೊ ಬಿಸಿಲು ಸಾಕೊ ಧರೆಗಿವೆರಡೂ ಬೇಕೊ ಹಳೆ ಹಾಡು ಬೇಕೊ ಹೊಸ ಹಾಡ...

ಕತ್ತಲದು ಕಗ್ಗತ್ತಲರಿವಾಳನರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ ಅಳಿವುದೆಣಿಸುತ ಪರದ ಚಿಂತೆಯೊಳು ಬಳಲಿ ವಿರಮಿ...

ಒಂದೇ ಉಸುರಿನಲ್ಲಿ ಹೇಳಿ ಮೂರು ತಲ್ಲಾಖ್ ಹೊರಟೆ ನೀನು ಎಲ್ಲಿಗೆ? ಬದುಕಿನ ಏರುಪೇರುಗಳಲಿ ಬಹಳ ಸಹಿಸಿಹೆನು ಪೀಡನೆ ಸಾಕು ಹೋಗು ನಿನ್ನ ದಾರಿಗೆ. ಮೆಹರ್‌ನ ಮೊತ್ತ ಇಟ್ಟು ಹಸಿರು ನೋಟಿನ ಕಟ್ಟು ಬಹುಮಾನವೆರಡು ಕೈಗಿಟ್ಟು ನಿನ್ನ ಕರ್‍ಮ ಕಾಂಡದ ಫಲ ಬದು...

೧೯೮೯ ರಿಂದಲೂ ನಾನು ಅಲೆಮಾರಿ, ಅರೆ ಅಲೆಮಾರಿ, ಜನಾಂಗವಾದ ದೊಕ್ಕಲು ಮಕ್ಕಳ ಕುರಿತು ಅಧ್ಯಯನ ಮಾಡುತ್ತಲೇ ಇದ್ದೇನೆ. ಅವರ ಹಚ್ಚೆ ಕಲೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಕಾರ್ಯದಲ್ಲಿದ್ದೇನೆ… “ಹಚ್ಚೆ ಮೊದಲೋ ಜನ ಮೊದಲೋ..?&#8...

|| ಓಮ್ || ೧ ಪರಮನೆ ನಿನ್ನ ಪರಿಯನು ಪರಿಕಿಸೆ ಬರಿಸಿದೆ ಬಾರದ ಭವಗಳಲಿ ತಿರೆಯಲಿ ಮೆರೆಯಲು ತನವನು ತರಿಸಿದೆ ಅರಿಯದ ಜನನಿಯ ಜಠರದಲ್ಲಿ ೨ ಆಗುವದೆಲ್ಲವು ಆಗಲಿದೇವನೆ ಭೋಗಿಪ ಕರ್ಮವಭೋಗಿಸುವೆ ನೀಗದ ದುಗುಡವ ಬೆಂಕೊಂಡಾಡಲಿ ಭೋಗಿಪ ಕರ್ಮವ ಭೋಗಿಸುವೆ ೩...

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ || ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯ...

ಈಶ್ವರ ಭಟ್ಟರ ಮಗ ಕೇಶವ ಮಾಣಿಯು ತನ್ನ ಕೊಳಕೆ ಗದ್ದೆಯ ಕಟ್ಟಪುಣಿಯಲ್ಲಿ ಕೂತು ಕೊನೆಯ ದಮ್ಮನ್ನು ಬಲವಾಗಿ ಎಳೆದು ಹೊಗೆಯನ್ನು ಚಕ್ರಾಕಾರವಾಗಿ ಬಿಡುತ್ತಾ ತುಂಡನ್ನು ಕೆಸರಿಗೆ ಎಸೆದ. ಅದು ಚೊಂಯ್‌ ಎಂದು ಸದ್ದು ಹೊರಡಿಸುತ್ತಾ ಕೊನೆಯುಸಿರನ್ನೆಳೆಯುವು...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...