ಹಕ್ಕಿ ಹಾರತಾವ ಹಾರಿ ಅಡತಾವ ಚಿಕ್ಕ ಮಕ್ಕಳ್ಹಾ೦ಗ ಅಕ್ಕ ನೋಡು ಭೋರಂಗಿ ಭೃ೦ಗಿ ಮದರಂಗಿ ಗಿಡದ ಮ್ಯಾಗ ಮಾವು ಹೂತು ಮು೦ಜಾವ ಮರಸತಾನ ನಸಕು ಬಣ್ಣ ಅದಕ ಬೇವು ಜಾರಿ ಬರಿ ಗಂಧ ಬೀರತಾವ ಸುತ್ತು ಮುತ್ತು ಬನಕ ಕಾಡ ಮಲ್ಲಿಗಿ ಜಾಡ ಹಿಡಿದು ಬೆಳೆದಾವ ಕೊಳ್ಳದಾಗ ಜೋಡಿ ಜೋಡಿಲೆ ಹಾಡ ಹೇಳತಾವ ಹಕ್ಕಿ ಮ್ಯಾಳದಾಗ ಬೆಳ್ಳಿ ನೀ...

ದುಃಖಾಶ್ರುವಿನ ಪಸರದಿಂದ ಜನಿಸಿದ ಮಂಜು, ಅಜ್ಞಾನದಾವರಣ, ಕನವರಿಕೆ ಅನುತಾಪ- ದಲಿ ಕಳೆವ ಸಂತಸವು, ಸಿರಿಯೆಂಬ ಹಿರಿನಂಜು, ಬಟ್ಟಬಯಲಾಗುತಿಹ ಪ್ರೀತಿಯೆಂಬೀ ಧೂಪ ನಮ್ಮ ಭಾವನೆ ತಂದ ಮೇಲುಬೆಳಕಿನಭಾವ ನಿಷ್ಕರುಣೆ, ಇದರಿಂದ ಕುರುಡಾಗಿಹುದು ಕಾಣ್ಕೆ. ಜೀವ...

ಕೋಟಿ ಕೋಟಿ ಜಗದ ಚಿಂತೆಗೆ ಪಂಚ ಪೀಠವೆ ಉತ್ತರಾ ಶಿವನ ಪರಮಾನಂದ ಭಾಗ್ಯಕೆ ಪಂಚಪೀಠವೆ ಹತ್ತಿರಾ ಪಂಚ ಪೀಠದ ಪೃಥ್ವಿ ಢಮರುಗ ಪಂಚ ಗುರುಗಳು ಢಮಿಸಲಿ ಪ೦ಚ ಪೀಠದ ಚಂದ್ರ ತಾರೆಗೆ ಭುವನ ಸು೦ದರವಾಗಲಿ ಚರ್ಮ ದೇಹವೆ ಮಂತ್ರವಾಗಲಿ ಶಿಲೆಯು ಶಿವಗುಣ ಪಡೆಯಲಿ ಜ...

ಐತಿಹಾಸಿಕ ಪೌರಾಣಿಕ ಕಥೆಗಳಿಂದ ಒಂದು ಪಾತ್ರವನ್ನೆತ್ತಿಕೊಂಡು ಸನ್ನಿವೇಶವನ್ನು ವೈಭವೀಕರಿಸಿ ಡೈಲಾಗ್ಗಳಿಂದ ಶೃಂಗರಿಸಿ ಅಬ್ಬರದಿಂದ ಆಡಿ ಕುಣಿವ ನಟರನ್ನು ನಾವು ಬಲ್ಲೆವು. ರಾವಣ, ದುರ್ಯೋಧನ, ಕಂಸ, ಕೀಚಕ ಇಂತಹ ಪಾತ್ರಗಳನ್ನು ಏಕಪಾತ್ರಾಭಿನಯಕ್ಕಾಗಿ...

ನಂ ಊರ್‍ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ – ಲಸ್ಮಪ್ಪನ್ ಕಟ್ಟೇಂತ; ಅಂಗೇ ನೋಡ್ತೀನ್ ನಮ್ಮೂರ್‌ ಕಟ್ಟೇಗ್ ಈ ಯೆಸರ್‌ ಯಾಕ್ ಬಂತೂಂತ. ೧ ಲಸ್ಮಪ್ಪೇನೋ ಲಸ್ಸಾದ್ಕಾರಿ ! ಕಟ್ಟೇಗ್ ಔನ್ದೇನ್ ಅಂಗು ? ಪೈಸಾ ಕೊಟ್ಟೋರ್ ಪ್ರಜೆಗೋಳ್ ನಾವು ! ಅದೇ ಅ...

ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ, ನೋಡೋಣ. ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ಕೋಲ್ಮಿಂಚು ಇಣಿಕಿಣಿಕಿ ಕಣ್ಕುಣಿಸಿ ಕೆಣಕೆಣಕಿ ಬ...

ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ ಹೋಗಿ ಹೆಜ್ಜೆ ಏಣ್ಣಿಸುವ ಎಂಬ ನಿರ್ಧಾರ ಕೈಗೊಂಡ. ಎಷ್ಟು ವರ...

ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ ಮುದ್ರೆಯಳಿಸುತಿರಲು – ವಿಜ್ಞಾನೇಶ...

ರಂಬೆ ಚಾರೂಚೀ ರಂಗೋಲೀ ಹೊಯ್ದೇವೆ ರಂಬೆ ನಿನ ಮಗಲ ಮದವೀಯೇ || ಮದವೀ ಶುದ್ದಿಕೆಲೀ ರಂಗೋಲಿ ಪತ್ರಕನ ಬರದಿದ್ದೆ || ತಂಗೀ, ಕೇಲೇ || ೧ || ತೆಂಗೂ ಲನೈಯ್ಡೂ ಹೆ(ಯೆ)ಡೆ ಕಡುದೇ || ಹೆಡ್ಯಕಡದೀ ಗುಡುಗಾರಾ ಮನೆಗೇ ಹೋಗೂ ಬೇಕೇ || ಹೋಗೂಬೇಕಂದೇಲೀ ರೋ ತೂ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ನಡುಮನೆಯಿಂದ ಕಿರುಮನೆ : ಕಿರುಮನೆಯಿಂದ ನಡುಮನೆಗೆ ಅಲೆಯುತ್ತಿದ್ದಾಳೆ. ಕಾತರವಾಗಿ ಏನೋ ನಿರೀಕ್ಷೆಯಲ್ಲಿ ಇರುವಂತಿದೆ. ಗಳಿಗೆ ಗಳಿಗೆಗೂ ಬಾಗಿಲಿಗೆ ಬಂದು ನೋಡು ತ್ತಿದ್ದಾಳೆ. ...

ಮಾನವ ನೀನ್ನ ಬಾಳನ್ನು ನೀನು ತಿಳಿಯಲಾರದಷ್ಟು ಅಸಮರ್ಥನೆ ಬಾಳು ಮನೋರಂಜನೆ ವಲ್ಲ ನೀ ಮನಸ್ಸಿನ ಗುಲಾಮನಾಗಲು ಸಮರ್ಥನೆ ನಿನ್ನ ಬಾಳಿನ ಕಳಶದಲ್ಲಿ ಅನೇಕ ಮುತ್ತು ರತ್ನಗಳು ಅವುಗಳನ್ನು ಪಡೆಯಲು ನೀನೆಂದೂ ಮಾಡಿಲ್ಲವೆ ಪ್ರಯತ್ನಗಳು ಬಾಳಿನ ಕ್ಷಣಗಳೆಲ್ಲ ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...