ಕೋಟಿ ಕೋಟಿ ಜಗದ ಚಿಂತೆಗೆ
ಪಂಚ ಪೀಠವೆ ಉತ್ತರಾ
ಶಿವನ ಪರಮಾನಂದ ಭಾಗ್ಯಕೆ
ಪಂಚಪೀಠವೆ ಹತ್ತಿರಾ

ಪಂಚ ಪೀಠದ ಪೃಥ್ವಿ ಢಮರುಗ
ಪಂಚ ಗುರುಗಳು ಢಮಿಸಲಿ
ಪ೦ಚ ಪೀಠದ ಚಂದ್ರ ತಾರೆಗೆ
ಭುವನ ಸು೦ದರವಾಗಲಿ

ಚರ್ಮ ದೇಹವೆ ಮಂತ್ರವಾಗಲಿ
ಶಿಲೆಯು ಶಿವಗುಣ ಪಡೆಯಲಿ
ಜಡವು ಜ೦ಗಮವಾಗಿ ಅರಳಲಿ
ಸಕಲ ಪೃಥ್ವಿಯ ನಗಿಸಲಿ

ಶಿಲಾತತ್ವದ ಕಠಿಣ ಕಳೆಯಲಿ
ಲಿಂಗಪುಷ್ಪವು ಅರಳಲಿ
ಆತ್ಮಶಾಂತಿಗೆ ವಿಶ್ವಶಾಂತಿಗೆ
ಜ್ಞಾನಗಂಗೆಯು ಸುರಿಯಲಿ

ಕಲಿಯ ಯುಗದಲಿ ಕೊಲೆಯ ಮಸಣವ
ಶಿವನ ತೋಟವ ಮಾಡಲಿ
ಜ್ಞಾನ ಯೋಗದ ಶಿವಗಣಂಗಳು
ಜಗದ ತುಂಬಾ ತುಂಬಲಿ
*****
ಧ್ವನಿಸುರುಳಿ : ಗುರುಗಾನ ತರಂಗ
ಹಾಡಿದವರು : ಶಂಕರ ಶಾನುಭೋಗ
ಸ್ಟುಡಿಯೊ : ಅಶ್ವಿನಿ