ವಿಶ್ವ ನಕ್ಷೆಯ ಬರೆದ ಋಷಿಯೆ ಆತ್ಮ ಪಕ್ಷಿಯ ಹಾರಿಸು ಬಾಳ ಕಾವ್ಯವ ಹೆಣೆದ ಕವಿಯ ಜೀವ ಶಕ್ತಿಯ ಉಕ್ಕಿಸು ನೋಡು ಮೂಡಣ ನೋಡು ಪಡುವಣ ನೋಡು ಕಡಲಿನ ಕೊಂಕಣ ನೋಡು ಚುಂಬನ ಚಲುವಿನೌತಣ ನೋಡು ಕಾಮದ ರಿಂಗಣ ತಾಳ ತಪ್ಪಿತು ಕಾವ್ಯ ಕೆಟ್ಟಿತು ವಿಶ್ವ ತಂಗುಳವಾಯ...
ಬೇರು, ಕಾಂಡ, ಕೊಂಬೆ, ಎಲೆ ಹೂ, ಹಣ್ಣು, ಹೊತ್ತ ಮರ ಯೋಚಿಸುತ್ತದೆ: ‘ಈ ಸಂಪತ್ತು ಯಾರಿಗೆ ಕೊಡಲಿ?’ ನರ ಯೋಚಿಸುತ್ತಾನೆ; ಬೇಕೀಗ ನನಗೊಂದು ಕೊಡಲಿ! *****...
ಸಾಹಿತಿ ಕೆ. ವೆಂಕಣಾಚಾರ್’ಗೆ ಅರವತ್ತೈದು ತುಂಬಿತು. ಅದೇನು ದೊಡ್ಡ ವಿಷಯವಲ್ಲ. ಅದಕ್ಕೆಂದೇ ಬರೆದ ಲೇಖನವೂ ಇದಲ್ಲವಾದರೂ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಚಯವನ್ನು ತಿಳಿಯದವರಿಗೆ ತಿಳಿಸುವ ಸಣ್ಣ ಪ್ರಯತ್ನವಷ್ಟೆ. ಯಾಕೆಂದರೆ ಅವರ ಜೀವನ ಶೈಲಿಯೇ ಅಂ...
ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ ಕಿತ್ತಿದೆ ಚಚ್ಚಿದೆ ಮಳೆ ಬೆಚ್ಚಿದೆ ಇಳೆ ಹುಚ್ಚೇರುತ್ತಿದೆ ಆಗಲೇ ಹೆಚ್ಚಿಹೋಗಿರು...
ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ....
-೧- ಆಕಾಶವ ದಿಟ್ಟಿಸಿದೆ ಅಹಂಕಾರ ಮರೆಯಾಯ್ತು ಹಕ್ಕಿಗಳ ನೇವರಿಸಿದೆ ಕನಸುಗಳು ಚಿಗುರೊಡೆದವು ದಂಡೆ ಬಳಿ ನಡದೆ ವಿನಯ ಅರ್ಥ ಹೊಳೆಯಿತು ***** -೨- ಇಕ್ಕಾಟ್ಟಾದ ದಾರಿಯಲಿ ನಡೆದ ಹುಡುಗಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು ಅವಳ ಒಳಗೆ ಕಚಗುಳಿ ಇಡುತ...
ಈ ಮುಸ್ಸಂಜೆಯಲಿ ಮೃದುವಾಗಿ ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ ಮಗುವಾಗಿ ಅತ್ತ ದಿವಸಗಳ ಮರೆತರೆ ಹಕ್ಕಿ ಹಾಡು ಎದೆಗಿಳಿಯುವದಿಲ್ಲ ತಾಯ ಹಾಡು ಆಕಾಶಗಂಗೆಯ ಬಿಳಿ ಹಾದಿಯಾಗುವದಿಲ್ಲ. ಚಂದ್ರನ ತಿಳಿ ಬೆಳ...
ಪಕ್ಕದ ಮನೆಯ ಪದ್ದು ಪೆದ್ದಿ ಅಂದುಕೊಂಡಿದ್ದೆ. ಈಗ – ನಗರಸಭೆಯ ಗದ್ದುಗೆ ಏರಿದ ಪದ್ದುಳ ನೋಡಿ ನಾನೇ ಪೆದ್ದಾದೆ. *****...
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು. ಈ ಹದಿನೈದು ದಿನ ನನ್ನ ಮನಸ್ಸು ಬಿರುಗ...
ಬಲಗೈಲಿ ದಾನಕೊಟ್ಟರೆ ಎಡಗೈಗೆ ಗೊತ್ತಾಗಬಾರದಂತೆ ಹಿಂದಿನವರ ವಿಚಾರ ಈಗಿನವರು ದಾನಕೊಟ್ಟರೆ ಕಹಳೆಯ ಬಾಯಿಗೆ ಮುತ್ತಿಟ್ಟಂತೆ ಪ್ರಚಾರವೋ ಪ್ರಚಾರ *****...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...






