ಹೊಡೆ ಹೊಡೆ ಮುಗಿಲಿನ ಡಿಂಡಿಂ ಡಂಗುರ ಕಡಲಿನ ಡಮರುಗ ಡಂಡಂಡೈ ರಾವಣ ರುಂಡಾ ಬುಡುಬುಡು ಬಿತ್ತೈ ಕಾಮಾ ಸತ್ತೈ ಥಥೈಥೈ ಓಹೋ ಶಕ್ತಿ ಕೋಹೋ ಮುಕ್ತಿ ಸೋಹಂ ಸೋಹಂ ಹಂಸೋ ಸೈ ಪಾವನ ವಿಶ್ವಾ ಪರಿಮಳ ವಿಶ್ವಾ ಪಂಪಂ ಪವನನ ಸಂಪಂಪೈ ಜಾತಿಕೋತಿ ಪುರ್ರಂ ಪಾತಿ ಹರಿ...

ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ; ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ. ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ; ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು. ಕಾವು ಕೂತಿತು ಹಕ್ಕಿ. ಮಣ್ಣ...

ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು ಗೊಂಬೆಯು ಇವನಿಗವನೇ ನೆರಳು || ಗುಡ...

ನೋಡಿ, ಮತಾಂತರ ಅನ್ನೋದು- ಆದು ವೈಯಕ್ತಿಕವೋ, ಸಾಮೂಹಿಕವೋ- ಆರೋಗಯಕರ ಅಲ್ಲ. ಮತಾನೇ ತೊಲಗಬೇಕು ಅನ್ನೋ ಈ ವೈಜ್ಞಾನಿಕ ಯುಗದಲ್ಲಿ ನನಗೆ ಇದೊಂದು ಹಾಸ್ಯ. ಹರಿಜನರು ಮುಸ್ಲಿಮರಾದರೆ ಆರ್. ಎಸ್. ಎಸ್, ಪೇಜಾವರ ಸ್ವಾಮಿಗೆ, ವಿಶ್ವ ಹಿಂದೂ ಪರಿಷತ್ತಿನವರ...

ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ “ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ… ಇದೆಂಥ ಊರು..?” ತಿಮ್ಮ ಅಚ್ಚರಿಯಿಂದ ಕೇಳಿದ “ಅದೇನನ್ನು ಕೇಳಿದೆ ನೀನು?” ಅಪರಿಚಿತ ಹೇಳಿದ “ಸಾಲ” *****...

ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ. ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...