ಹೊಡೆ ಹೊಡೆ ಮುಗಿಲಿನ ಡಿಂಡಿಂ ಡಂಗುರ
ಕಡಲಿನ ಡಮರುಗ ಡಂಡಂಡೈ
ರಾವಣ ರುಂಡಾ ಬುಡುಬುಡು ಬಿತ್ತೈ
ಕಾಮಾ ಸತ್ತೈ ಥಥೈಥೈ

ಓಹೋ ಶಕ್ತಿ ಕೋಹೋ ಮುಕ್ತಿ
ಸೋಹಂ ಸೋಹಂ ಹಂಸೋ ಸೈ
ಪಾವನ ವಿಶ್ವಾ ಪರಿಮಳ ವಿಶ್ವಾ
ಪಂಪಂ ಪವನನ ಸಂಪಂಪೈ

ಜಾತಿಕೋತಿ ಪುರ್ರಂ ಪಾತಿ
ಹರಿಹರಿ ನರಿನರಿ ನಾಹಂ ನೈ
ಅಕ್ಕಾ ಅಣ್ಣಾ ಅಪ್ಪಾ ಅಮ್ಮಾ
ಜಗವೇ ಜೀವಾ ಜೈಜೈಜೈ

ಆಕೈ ಈಕೈ ಯಾಕೈ ಸಾಕೈ
ತಾತಾ ಕೈಕೈ ಥೈಥೈಥೈ
ಸಾಕೈ ಯಾಕೈ ಬೇಕೈ ನೂಕೈ
ಹೋಹೋ ಹೈಹೈ ಹೈಹೈಹೈ
*****