
ಕಾಲಕಾಲಕೆ ಕಂಡೆನ್ನ ನೋಟಕೊದಗಿದ ಬೀಜ ಗಳನಲ್ಲಲ್ಲೇ ಹೆಕ್ಕಿ ಸುರಿದಿಹೆನಿಲ್ಲಿ ನಲಿವಿನಲಿ ಕ್ಷುಲ್ಲವಿದು ಕಾಳಲ್ಲ ಕಾಸಿನಾ ಮರವಲ್ಲವೆನ್ನದಿರಿ ಬಲ್ಲಿರಾದೊಡೆಲ್ಲ ಹಸುರಿಂಗು ಬೆಲೆಯಿಕ್ಕು ಜಲದ ಕಣ್ಣಲ್ಲಿ ಮೆಲ್ಲ ಮೆಲ್ಲನೆ ಬಕ್ಕು – ವಿಜ್ಞಾನೇಶ...
ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ ಪ್ರೀತಿ ಕೊಟ್ಟಂತಾಗುವುದೇ? ನಸುಕಿಗೆ ಎದ್ದ ಪಕ್ಷಿಗಳು ...
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು ತೋರಿಸಿದವು! ಸುಧಾ ಕಸಪೊರಕೆಯಿಂದ ಕಸ ಗೂಡಿಸುತ್ತಿದ್ದಳ...
ಹೆಂಡತಿಯರಿಗೆ ಮಾಡಿಸಿರುತ್ತಾರೆ ಜೀವವಿಮೆ ಪಾಲಿಸಿ ಹೆಂಡತಿ ಸತ್ತರೆ ಪಡೆಯುತ್ತಾರೆ ಪಾಲಿಸಿ + ಪ್ರೇಯಸಿ *****...
ಕೋವಿಯಲಿ ಜೀವ ಅಂಕುರಿಸುವ ಮೊದಲು… ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ...
ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ ಅವಳನ್ನು ಸಾಕಷ್ಟು ಕುಗ್ಗಿಸುತ್ತಿತ್ತು. ಎಂಥ ಉದಾತ್ತ ವ್ಯಕ್ತಿ ...
ಬಿಳಿಮಲ್ಲಿಗೆಯ ಕಂಪು ಕೊಳೆತು ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ ತುರುಕಿ ಬಲವಂತ ಮುಚ್ಚಿ ಹೊರತೋರದಂತೆ ಅದುಮಿ ಇಟ್ಟು ಬಿಟ್ಟರೆ. ಕೊಳೆಯದಂತಿಡಬೇಕು, ಕೆಡದಂತಿರಬೇಕು. ಮಲ್ಲಿಗೆ ಅರಳುವುದು ಎಲರ ಅಲೆಯೊಳಗೆ ತೇಲಿ ಪರಿಮಳ ಸಾಲೆಯಾಗಿ ಪರಮಲೋಕವನ್ನೇ ಕ...
ಅಲೆ ಬೋಧಿಸುತ್ತಿದೆ… ದಂಡೆ ಆಲಿಸುತ್ತಿದೆ… *****...
ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್...
ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು ವ್ಯರ್ಥ. ಮೊದಲು ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
















