ಕೋವಿಯಲಿ ಜೀವ
ಅಂಕುರಿಸುವ ಮೊದಲು…
ಮನುಷ್ಯನ ಮಮಕಾರದ
ಹಲ್ಲು ಉದುರುವುದು
ಎದೆಯು ಕಲ್ಲಾಗುವುದು

ಮೈಯೊಳಗೆ ರಕ್ತ ಪ್ರವಾಹವು
ಹಿಮ್ಮುಖವಾಗಿ ಏರುವುದು

ತೋಳುಗಳ ಮಾಂಸ ಖಂಡಗಳು
ಸೊಕ್ಕಿ ಕುಣಿಯುವವು

ಮೂಗಿನ ಹೊಳ್ಳೆಗಳು ಬಿರಿದು
ಕಣ್ಣುಗಳು ನಿಚ್ಚಳ
ಬೇಸಿಗೆಯ ಆಕಾಶವಾಗುವುದು

ಹೂ ಬೆರಳುಗಳು ಕಟ್ಟಿಗೆಯಾಗಿ
ಸೆಟೆದು ಸಜ್ಜಾಗುವವು

-೨-

ಕೋವಿಯಲಿ ಜೀವ
ಸಂಚಾರವಾಯಿತೆಂದರೆ…

ಅದು ಮೊದಲು
ದಯೆಯನ್ನು ಬಲಿ ತೆಗೆದುಕೊಳ್ಳುವುದು

ಆಮೇಳೆ-
ಪ್ರಪಂಚದ ಮೊಗವು ಛಿದ್ರವಾಗುವ ತನಕ
ಬೆಂಕಿ ಉಗುಳುವುದು.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)