ಕೊಮಾಸಾಮಿ ಕಾಮ್ ಕ ಚೋರು ಖಾನೆ ಮೆ ಜೋರು

ಗೋಡ್ರು ಏನೇ ಲಾಗ ಹೊಡದ್ರು ಕೊಮಾ‍ಸಾಮಿ ತಪ್ಪುಗಳು ಡೇ ಬೈ ಡೇ ಹೆಚ್ತಾ ಅವೆ. ಸುಳ್ಳುಗಳ ಸರದಾರನೆಂದೇ ಖ್ಯಾತನಾದ ಏಕೈಕ ಸಿ‌ಎಂ ಈತ. ಕಾಮ್ ಕ ಚೋರು ಖಾನೆ ಮೆ ಜೋರು ಅನ್ನಂಗಾಗೇತೆ. ಬಳ್ಳಾರಿ ರೆಡ್ಡಿ ತನ್ನ ಮ್ಯಾಗೆ ೧೫೦ ಕೋಟಿ ನುಂಗ್ಯಾನೆ ಅಂತ ಚೀರುತ್ಲು, ದೇವರಾಣೆಗೂ ಕೋಟಿಗೇಟು ಸೊನ್ನೆಗಳಿವೆ ಅಂತ್ಲೆ ಐ ಡೋಂಟ್ ನೋ ಅಂದು ಬಿಡೋದೆ! ಕೆಲವೇ ದಿನದಾಗೆ ೩೬ ಕೋಟಿ ಆಸ್ತಿ ಪರಚೇಸ್ ಮಾಡಿದರ ಬಗ್ಗೆ ಗುಲ್ಲಾತು. ೮೫ % ಸಾಲ ಮಾಡಿವ್ನಿ ಅನ್ನೋ ಈವಯ್ಯಂಗೆ ಕೋಟಿಗೆ ಏಟು ಸೊನ್ನೆ ಅಂಬೋದೆ ತಿಳಿದೂ ಅಂದ್ರೆ ಎಲ್ಲಿಂದ ನಗಬೇಕೇಳ್ರಿ? ಬಳ್ಳಾರಿ ಗಣಿಗಾರಿಕೆನಾಗೆ ಸಿ‌ಎಂನೂ ಶಾಮಿಲಾಗಿರೋ ದುರ್ನಾತ ಅಬ್ಬಿಕ್ಯಂತು. ‘ಬರಿ ಸುಳ್ರಿ ಬಳ್ಳಾರಿ ಎಲ್ಲದೆ ಅಂತ್ಲೆ ನಂಗೊತ್ತಿಲ್ಲ. ಕರ್ನಾಟಕದ ಭೂಪಟದಾಗಷ್ಟೆ ನೋಡಿವ್ನಿ. ಗಣಿ ಪಾರ್ಟನರ್ ಆಗೋವಷ್ಟು ಬಿಗ್ ಪರ್ಸನ್ ನಾನಲ್ಲ. ಬಡರೈತನ ಮಗ’ ಅಂತ ರೆಡಿಮೇಡ್ ಆನ್ಸರ್ ಬಂತು ಕೊಮಾನಿಂದ. ಆದ್ರೆ ಅಸಲಿಯತ್ತು ಹೊರಾಗ್ ಬಂತರ್ಲಿ! ಕೊಮಾರನ ಎಲ್ಡರ್ ಬ್ರದರ್ ಬಾಲಕಿಸ್ಣ ; ಹೆಸರಿಗಾಟೇ ಡಾಕ್ಟರಾ ಯಂಗರ್ ಬರದರ್ ಫುಲ್‍ಟೇಂ ಪೊಲಿಟೀಸಿಯನ್ ರಮೇಸ ಬಿ.ಎಸ್.ಕೆ ಸಂಸ್ಥೆನಾಗೆ ಪಾರ್ಟನಸಾಗಿದ್ದು ಈಚ್ಗೆ ಬಂತು. ನೈಸ್ ಕಾರಿಡಾರ್ ರಸ್ತೆ ರಿಪೇರಿನಾಗೂ ನಮ್ಮದೆಲ್ಲಿ ಜಮೀನು ಐತ್ರಿ? ಅಂತ ಸಿ‌ಎಂ ರಾಂಗೋರಾಂಗು. ಆಮೇಲೆ ಜುಜುಬಿ ೩೬ ಎಕರೆನಾ ಲೋನ್ ಬೇಸಿಸ್ ಮ್ಯಾಲೆ ತಗಂಡಿದೀವಿ ಅಂಬೋ ಹಳೆರಾಗದ ಆಲಾಪ್ನೆ ಹೊರಾಗ್ ಬಂತು. ಖೇಣಿ ಅಂಬೋನು ಫೇಣಿ ಕೊಟ್ಟು ನನ್ನ ಖರೀದಿ ಮಾಡೋದ್ರಾಗೆ ಮಾಜಿ ಸಚಿವನೂ ಇದ್ದ ಅಂತ ಬಂತೊಂದು ಸುಳ್ಳು. ಇದ್ನೆ ಹಿಡ್ಕೊಂಡು ‘ಯಾರವನು ಹೆಸರೇಳು? ಇಲ್ಲ ರಾಜಿನಾಮೆ ಒಗಿ’ ಅಂತ ಕಾಂಗ್ರೆಸ್ ಅಟ್ಕಾಯಿಸ್ಕಂತು. ‘ಆ ಮಾತೇ ನನ್ನ ನಾಲಿಗೆ ಮ್ಯಾಗೆ ಬರ್ನಿಲ್ಲ. ಇದೆಲ್ಲಾ ಮಾಧ್ಯಮದೋರ ಕಿತಾಷಪಿ ಗ್ರಾಫಿಕ್ ಟ್ರಿಕ್ಸು. ಟಿವಿನಾಗೆ ಕಾಣಿಸ್ದೋನು ನಾನೇ ಅಲ್ಲ” ಅಂದುಬಿಟ್ಟ ಕೊಮಾರ. ಒಂದೇ ದಿನದಾಗೆ ಗೋಡ್ರ ಸೊಸೆ ಮುದ್ದು ಕವಿತಾ, ಬಾಲಕಿಸ್ಣ ಗೋಡನ ಪಟ್ಟದರಾಣಿ ಶ್ರೀರಂಗಪಟ್ಟಣ ತಾವಿರೋ ಗಣಂಗೂರು, ಬ್ರಹ್ಮಪುರದಾಗೆ ೧೫ ಎಕರೆ ಜಮೀನು ಆನ್ ದಿ ಸೇಮ್ ಡೇ ಅಲ್ಲ್ವೇ ೪ ಎಕರೆ ಆಸು ಪಾಸ್ನಾಗೆ ೨ ಎಕರೆ ಖರೀದಿ ಮಾಡವರೆ. ಇದ್ಕೆಲ್ಲಾ ರೊಕ್ಕನಾ ಬೈಕ್ಯಾಷ್ ಬಟವಾಡೆ ಮಾಡವ್ರೆ. ಅಷ್ಟಿಷ್ಟು ಅಲ್ಲ ೬೦ ಲಕ್ಷ. ಸಬ್ ರಿಜಿಸ್ಟರ್ ಕಛೇರಿನಾಗೆ ಸ್ಟ್ಯಾಂಪ್ ಡ್ಯೂಟಿ ಪೀಜು ಅಂತೆಲ್ಲಾ ಸೇರಿ ಸೊಸೆ ಯಾಪಾರಾನೇ ಕೋಟಿ ಮೀರಿದೆ ಕಣ್ರಿ. ಇಂಥ ಕೋಟಿಗೊಬ್ಬ ಸೊಸೆ ತನ್ನ ಗಂಡ ಬದುಕಿದ್ದರೂ ಆತನ ಹೆಸರನ್ನೇ ಮುಚ್ಚಾಕಿ ಡಾಟರ್ ಆಫ್ ಹೊನ್ನಪ್ಪ ಅಂತ ಬರಸವ್ಳೆ. ಇದನ್ನೆಲ್ಲಾ ರೈತ ಸಂಘದ ಲೀಡರ್ ಕ.ಎಸ್. ನಂಜೇಗೌಡ ಬಯಲು ಮಾಡಿ ಸಿ‌ಒಡಿ ಗೊಪ್ಪಿಸಿ ಅಂತ ಕೂಗಾಡುತ್ಲು ಗಾಣ್ಗಾಬರಿಯಾದ ಕವಿತಾ ಮೇಡಂ ಖಾತೆ ಮಾಡ್ಸೋಕೆ ಅಂಜಿ ಜಮೀನು ಖರೀದಿನೇ ‘ಕ್ಯಾನ್ಸಲ್’ ಮಾಡ್ಸಿ ಹೆಡ್ ಕ್ವಾರ್ಟರ್ಸ್‍ಗೆ ರಿಟನ್ ಅಗವಳ್ರಿ. ಬಾಲಕಿಸ್ನೇಗೌಡ ಒಬ್ಬ ಗೋರ್ನ್ನಮೆಂಟು ಸರ್ವೆಂಟು ಈಟು ರೊಕ್ಕ ಹೆಂಗೆ ಮಾಡ್ದ? ಹಂಗಾರೆ ಈ ರೊಕ್ಕ ಕವಿತಂಗೆ ಕೊಟ್ಟೋರಾರ ಯಾರು? ಉತ್ತರ ಹೇಳಬೇಕಾಗಿರೋ ದೊಡ್ಡ ಗೋಡ್ರೀಗ ಮೌನವ್ರತ ಹಿಡಿದವರಂತೆ. ಇಡೀ ಗೊಡ್ರ ಫ್ಯಾಮಿಲಿನೇ ಸಾಮೂಹಿಕ ಭೋಜ್ನಕ್ಕೆ ಕುಂತು ಒಂದು ಕಡೆಯಾಗಿಂದ ಕರ್ನಾಟಕಂವಾ ತಿಂದ್ಕಂಡು ಬತ್ತಾ ಅವರೆ. ಏನಾರೊ ನಮ್ಗೂ ತಿನ್ನೋಕೆ ಬಿಡ್ತಾರೋ ಅಂಬೋ ದಿಗಿಲು ಹತ್ಕಂಡದೆ ಇವರ ಜೊತೆ ಸೇರಿ ಹಾರಫನ್ಗಳಂತಾಗಿರೋ ಬಿಜೆಪಿಗುಳ್ಗೆ, ಈ ಗದ್ದಲದ್ಯಾಗೆ ಕೂಮಾಸಾಮಿ ಗಣಿ ಹುತ್ತಕ್ಕೆ ಕೈ ಹಾಕಿದ್ದರಿಂದಾಗಿ ಕುತ್ತಿಗ್ಗೇ ಕುಣಿಕೆ ಹಾಕ್ದಂಗಾಗೇತಿ. ಮಂತ್ರಿಗಳಾದ ಡಿಡಿಟಿ ಜಯ್ಗ, ಅನ್ನಾರಿ, ಸಿ‌ಎಂ ಫ್ರೆಂಡ್ ಜಮೀಗೆ ಮೇಯ್ಯೋ ಖಾತೆ ಸಿಕ್ಕಿಲ್ಲ ಅಂತ ಡಿಪ್ರೆಶನ್ಗೆ ಹೋಗವರೆ. ಬಿಸಿ ಪಾಟೀಲ ಬಿಸಿ ಕಳ್ಕಂಡವ್ನೆ. ಸಿನಿಮಾದಾಗೆ ಸೈಡ್ ಆಕ್ಟಿಂಗ್ ಮಾಡ್ಯಾರ ಬದುಕ್ಕಾತಿದ್ದೆ ಅಂತ ಅಳ್ಳಿಕತ್ತಾನ್ರಿ. ಅಲಂಗೂರು, ಜಿಟಜಿಟಿ ಗೋಡ ಬಯ್ಯಾಪುರ ಒಳಗೇ ಬೈಕಂತ ಕತ್ತಿ ಮಸಲಿಕತ್ತಾರೆ. ಅತೃಪ್ತ ಸ್ಯಾಸಕರ ಪಟ್ಟಿ ಬೆಳಿತಾ ಐತೆ. ಇವರ ಗದ್ದಲ ಕೇಳಿ ಸಿ‌ಎಂಗೆ ಡಯೇರಿಯ ಹತ್ಕಣತ್ಲು. ೧೭ ದಿನಾಂಕದಂದು ಉಣ್ಣಾಕೆ ದಳದ ಎಲ್ಲಾನೂ ಕರೆದು ಬಾಡೂಟ ಹಾಕ್ಸಿ, ಬಾಟ್ಲಿ ಕೊಡ್ಸಿ ಹೆಗಲ ಮ್ಯಾಗೆ ಕೈ ಹಾಕಿ ಫೋಟೋ ಹೊಡ್ಸಿ ನಾವೆಲ್ಲಾ ಒಂದೇ ತಾಯಿ ಹೊಟ್ಟೆಯಾಗಿಂದ ಬಂದ ಹಸುಗೂಸುಗಳು ನಮ್ಮೊಳಗೆ ಗುಸ್ಸ ಏನ್ ಇಲಿ ಇದನ್ನೆಲ್ಲಾ ಪೇಪನೋರಾದ ನೀವು ಕಥೆ ಕಟ್ಟಿ ಬರಿಲಿಕ್ಕತ್ತೀರಾ.
ಸಿನಿಮಾ ಮಾಡ್ತಿದ್ದ ನನ್ಗೆ ತಿಳಿಯಾಕಿಲ್ವೆ? ಯಾಕಿಂತ ಅಡ್ನಾಡಿ ಸ್ಕ್ರಿಪ್ಟ್ ಮಾಡ್ತೀರ್ರಿ ಅಂತ ಪೇಪನೋರ ಮ್ಯಾಗೆ ಬಾಯಿ ಮಾಡವ್ನೆ ಕೊಮಾಸಾಮಿ.

ಅದರೂ ಜಮೀರ್ ಅಹಮದ್. ಸಂತೋಷ್ ಲಾಡು, ರಾಥೋಡು ಇತ್ಯಾದಿ ಆರುಮಂದಿ ಬಾಡೂಟಕ್ಕೆ ಬದೆ ಮಾಯವಾಗವ್ರೆ. ಮಹಿಮಾಪಟೇಲು ಬಂದ್ರೂ, ‘ಶರಣಾರಾದ ನಾವು ಇಂಥ ಊಟ ಮಾಡಲ್ಲ’ ಅಂಬೋದ್ನ ಸನ್ನೆನಾಗೇ ಹೇಳಿ ಸಿಂಗಲ್ ವಡೂ ಮಾತಾಡ್ದಂಗೆ ಸೆಟ್ಕಂಡು ಎದ್ದು ಬಂದವ್ರೆ. ಇಂಥ ಸಭೆಗಳಿಂದ ಮೂರು ಕಾಸಿನ ಉಪೇಗಿಲ್ಲ ಅಂದವ್ನೆ. ಉಳಿದ ಸ್ಯಾಸಕರು ಸಿಕ್ಕಿದ್ದೇ ಸೀರುಂಡೆ ಅಂತ ನಮ್ಮನ್ನ ಮಂತ್ರಿ ಮಾಡದಿದ್ರೆ ನಿಗಮ ಮಂಡಳಿ ಅಧ್ಯಕ್ಷನ ಮಾಡೋಕೆ ಕಾನೂನಿನ ಟ್ರಬಲ್ ಐತೆ ಅಂತಿರಾ, ನಮ್ಮ ಕಾರ್ಯಕರ್ತನಾರ ಮಾಡಲೆ ಕೊಮಾರ ಅಂತ ದಬಾಯಿಸವರೆ. ನಿಮ್ಮ ಬ್ರದರ್ ರೇವಣ್ಣನಿಗೇನು ದೊಡ್ಡರೋಗ? ಸ್ಯಾಸಕರ ಮೂತಿ ನೋಡಿದ್ರೆ
ವಾಕರಿಸ್ತಾನೆ. ಡಾಕ್ಟರಿಗಾರ ತೋರಸಿ ಇಲಾಜು ಮಾಡ್ಸಿ ಅಂತ ಬುದ್ಧಿನೂ ಹೇಳವ್ರೆ, ಎಲ್ಲದಕ್ಕೂ ‘ಎಸ್’ ಅಂದವ್ನೆ ಕೆಮಾರ. ರಿಮೇನಿಂಗ್ ಕೊಶ್ಚನ್ಗೆ ಸಿದ್ಧಾಂತಗಳ ಪಿತಾಮಹ ಎಂಪಿ ಪ್ರಕಾಸು ತಿಪ್ಪೆ ಸಾರಿಸವ್ರೆ. ನನ್ನ ಗುಣಗಾನ ಮಾಡಿದಿದ್ರೂ ಬ್ಯಾಡ ಬ್ರದರ್ಸ್ ದಿನಾ ನನ್ನ ವಿರುದ್ಧವಾಗಿ ಏನಾರ ಗೊಣಗಾದು ಬಿಡ್ರಿ ಅಂತ ಕೊಮಾರಸಾಮಿ ಕೈ ಮುಗಿದವ್ನೆ. ಕೊಮಾಸಾಮಿ ಶ್ಯಾನೆ ಡೆಸ್ಪಿರೇಟ್ ಆಗಿರೋ ವಾಗ್ಲೆ ತೆಲಗಿತಾವ ಖರ್ಗೆ ಮಾತಾಡಿದ್ನ ಮಂಪರ್ನಾಗೆ ತೆಲಗಿ ಹೇಳ್ಯಾನೆ ಅಂತ ಸುದ್ದಿ ಹಬ್ಬುತ್ಲು ಕೊಮಾರ ಅಗ್ದಿ ಖುಷಿಯಾಗೋಗವ್ನೆ. ಅದು ನಿಜವೇ ಅಗಿದ್ದರೆ ನಾನ್ ನೇಣು ಹಾಕ್ಕತೀನಿ ಹಗ್ಗ ಕೊಡ್ರಿ ಅಂತ ಖರ್ಗೆ ಗೊಗ್ಗರ ದನಿಯಾಗೆ ರೇಗ್ಲಿಕತ್ತಾನೆ. ‘ಇದೆಲ್ಲಾ ಪೋಲಿಸನೋರ್ನ ಸರಿಮಾಡ್ಕಂಡು ಸಿ‌ಎಂ ಆಡ್ತಿರೋ ನಾಟಕ. ತೆಲಗಿನಾ ಸಿಬಿ‌ಐಗೆ ಒಪ್ಪಿಸಿದೋರೆ ಕಾಂಗ್ರಸ್ನೋರಾದ ನಾವು’ ಅಂತ ಡಿ.ಕೆ.ಶಿ. “ಅದ್ರಾಗೆ ಪಾಲುದಾರರಾಗಿದ್ರೆ ನಾವೆಂಗೆ ಅವನ್ನ ಹಿಡಿದು ಸಿಬಿ‌ಐಗೆ ಕೊಡ್ತಿದ್ವಿ? ತೆಲಿ ಎಲ್ಲಿಟ್ಕಂಡಿಯಲೆ ಕೊಮಾರ” ಅಂತ ರಾಂಗ್ ಆಗವ್ನೆ.

‘ವಿಗ್ ಕಿಸ್ಣ ಎಗೇನ್ ಕಮಿಂಗು’ ಅಂಬೋ ಸುದ್ಧಿನೂ ಅಬ್ಬೇತೆ! ಬಳ್ಳಾರಿ ರೆಡ್ಡಿ ಶ್ರಾವಣಮಾಸ ಮುಗಿಯೋದ್ರಾಗೆ ಕೊಮಾರನ ಮಾನ ತೆಗಿತೀನಿ ಅಂತಾ ಅವ್ನೆ. ತಮ್ಮ ಪಕ್ಷದ ಸ್ಯಾಸಕರೆ ಸಿ‌ಎಂ ಎತ್ತಂಗಡಿ ಯಾದ್ರೆ ಚಲೋ ಅನ್ಲಿಕತ್ತಾರೆ. ಕಂಗಾಲಾದ ಕೊಮಾರ ಪತ್ನಿ ಸಮೇತ ಸೋಂದಿಗೊಂದಿಯಾಗಿರೋ ಗುಡಿಗೆಲ್ಲಾ ಎಂಟ್ರಿಕೊಟ್ಟು ಅಡ್ಡ ಬೀಳ್ತಾ ‘ಸರ್ಕಾರ ಬಚಾವ ಮಾಡಿ ಮೈ ಡಿಯರ್ ಗಾಡ್ ಅಂಡ್ ಗಾಡೆಸ್ಸು’ ಅಂತ ಮೊರೆಯಿಡ್ತಾ ಅವ್ನೆ. ದೇವರು ಏನ್ ಡಿಸಿಶಿನ್ ತಗೋತಾವೋ ದೇವರೇ ಬಲ್ಲವು. ಹೋಮ ಹವನದಿಂದ ಬಿಜಿಯಾದ ಬ್ರಾಂಬ್ರಂತೂ ಹೊಟ್ಟೆ ಸವಕಂಡು ದಕ್ಷಿಣೆ ಎತ್ಕಂಡು ಸುಖವಾಗವ್ರೆ.
*****
(ದಿ. ೩೧-೦೮-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಲ್ಲ
Next post ಪ್ರೀತಿಗೇಕೆ ಸೋಲುತ್ತದೆ?

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys