ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ? ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ?  ಪ ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ?  ೧ ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು ...

“ಒಳ್ಳೇದು, ಅವನನ್ನು ಒಳಗೆ ಬರಹೇಳು” ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ ಗುಮಾಸ್ತನು, ನಿಂತಲ್...

ಗಂಡು ಮಕ್ಕಳಿಂದಲೇ ಸಿಗದು ಸ್ವರ್‍ಗ ಹೆಣ್ಣು ಮಕ್ಕಳಿಂದ ಸಿಗದು ನರಕ ತುತ್ತು ಅನ್ನ ಹಿಡಿಯಷ್ಟು ಪ್ರೀತಿ ತೋರಿಸದ ಮಕ್ಕಳಿಂದ ಜೀವನ ರೌರವ ನರಕ ಸತ್ತಮೇಲೇಕೆ? ಕಾಣದ ಸ್ವರ್‍ಗ *****...

ಸೋನೆ ಮಳೆಯ ಸಂಜೆ… ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ ಸ್ವೆಟರ್ ಏರಿಸಿ ಹಾಳೂರು.. ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು ದೀಪ ಧಾರಿಣಿಯಾದೆ, ಗಾಳಿ ಬಾಗಿಲ ತಳ್ಳಿತು ಎದುರಲ್ಲಿ ತೊಯ...

ಮರುದಿನ ಸಿದ್ಧಾನಾಯಕ್‌ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. ಅದು ಮತ್ತು ತನ್ನ ರ...

ಸುಗ್ಗಿಯ ಹಬ್ಬ | ನಮಗಿಂದು ಸಂಕ್ರಾಂತಿ ತಂದಿತು ನಮ್ಮಲ್ಲಿ | ಸುಖ ಶಾಂತಿ ಎಳ್ಳಿನ ಎಣ್ಣೆಯ | ಮಜ್ಜನ ಮಾಡುತ ಮೈಯಲಿ ಮೂಡಿತು | ಹೊಸ ಕಾಂತಿ ಮಾಗಿಯ ಚಳಿಯದು | ಇಳಿಯುವ ಹೊತ್ತು ರವಿಯ ಕಿರಣಗಳು | ನೇರಕ್ಕೆ ಬಿತ್ತು ಚೈತ್ರದ ಚಿಗುರು | ಮೂಡುವ ಹೊತ್ತ...

ಬಾಳೇ ಒಂದು ಸಂಕ್ರಾಂತಿ ಬದುಕಿಗೆ ಇದು ಸಂಗಾತಿ ಮೈ ಮನಗಳಲಿ ನವಿರೇಳುವ ಕ್ರಾಂತಿ ಓಡಿಸುವುದು ಮನದ ಭ್ರಾಂತಿ ಆತ್ಮದತ್ತ ಮನವು ವಾಲಬೇಕು ಪ್ರೀತಿಯತ್ತ ಬುದ್ಧಿವಾಲಬೇಕು ದೇವರತ್ತ ಇಂದ್ರಿಯ ವಾಲಬೇಕು ಆತ್ಮವು ಪರಮಾತ್ಮನತ್ತ ಸಾಗಬೇಕು ಮಕರ ಸಂಕ್ರಮಣ ಭಾ...

ಇತಿಹಾಸದಲ್ಲಿ ಅದೆಷ್ಟೋ ಮಂದಿ ಸರ್ವಾಧಿಕಾರಿಗಳು ಆಗಿಹೋಗಿದ್ದಾರೆ; ಅವರು ಕ್ರೂರಿಗಳೂ ನಿರಂಕುಶಮತಿಗಳೂ ಆಗಿದ್ದರೆ ಅವರ ಅಧಿಕಾರವ್ಯಾಪ್ತಿಗೆ ಸೇರಿದ ಜನರ ಪಾಡು ಹೇಳತೀರದು. ಚೆಂಗಿಶ್ ಖಾನ್, ಮಹಮ್ಮದ್ ತುಘ್ಲಕ್, ಔರಂಗಜೇಬ್, ಈದಿ ಅಮೀನ್, ಹಿಟ್ಳರ್, ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...