ಸಂಕ್ರಾಂತಿ

ಸುಗ್ಗಿಯ ಹಬ್ಬ |
ನಮಗಿಂದು ಸಂಕ್ರಾಂತಿ
ತಂದಿತು ನಮ್ಮಲ್ಲಿ |
ಸುಖ ಶಾಂತಿ
ಎಳ್ಳಿನ ಎಣ್ಣೆಯ |
ಮಜ್ಜನ ಮಾಡುತ
ಮೈಯಲಿ ಮೂಡಿತು |
ಹೊಸ ಕಾಂತಿ

ಮಾಗಿಯ ಚಳಿಯದು |
ಇಳಿಯುವ ಹೊತ್ತು
ರವಿಯ ಕಿರಣಗಳು |
ನೇರಕ್ಕೆ ಬಿತ್ತು
ಚೈತ್ರದ ಚಿಗುರು |
ಮೂಡುವ ಹೊತ್ತು
ಭೂರಮೆಯ ಸ್ವಾಗತವು |
ವಸಂತನಿಗಿತ್ತು

ಎತ್ತು ಬಂಡಿಗಳ |
ಶೃಂಗಾರ ಮಾಡಿ
ಹಿಗ್ಗಿಲೆ ಸುಗ್ಗಿಯ |
ಹುಗ್ಗಿಯ ಮಾಡಿ
ಸುಗ್ಗಿಯ ಹಾಡಿಗೆ |
ತಾಳವ ಹಾಕಿ
ರೈತನ ಮುಖದಲಿ |
ಸಂಭ್ರಮ ಮನೆಮಾಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕ್ರಾಂತಿ
Next post ನಾನೊಂದೆ ನಿಂತಿರುವೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…