ಕೃಷ್ಣ ಕೃಷ್ಣ ಎಂದು ಕನವರಿಸಿರುವೆ ನಾ ಕರು ತನ್ನ ತಾಯನ್ನು ಕರೆವಂತೆ ಕೃಷ್ಣ ಕೃಷ್ಣ ಎಂದು ಹಾ ತೊರೆಯುತ್ತಿದ್ದೆ ರಾತ್ರಿ ತನ್ನ ಚಂದ್ರನ ಕರೆವಂತೆ ನೀರಿನೊಳಗಿನ ಮೀನೊಂದು ಈಜುತ್ತ ಬೆಳಕನ್ನು ಪುಟ್ಟ ಕಂಗಳಿಂದ ನೋಡುವಂತೆ ಸಂಸಾರದ ನಡುವೆ ತೇಲಾಡಿದೆ ನಾನು ನಿನ್ನ ನೋಡಲು ಕಾತರಿಸಿತ್ತು ಚಿಂತೆ ಮನುಷ್ಯ ಜನ್ಮ ಸಾರ್...

ಆಧುನಿಕ ಜೀವನ ಶೈಲಿಯಲ್ಲಿ ಉಡುಗೆ ತೊಡಿಗೆ ಆಹಾರ ವಿಹಾರ ಮನರಂಜನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಅನೇಕರು ಮಿತಿಮೀರಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳ ಸೇವನೆ ಪ್ರತಿಷ್ಠೆಯ ಕುರುಹುಗಳಾಗಿದೆ. ಸಭೆ, ಸಮಾರಂಭ, ಔತಣಕೂಟಗಳಲ್ಲಿ ತಂಪು ಪ...

ಅರಿತಿದನು ಪೇಳ್ವುದದು ಬಲು ಕಷ್ಟವೋ ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ – ವ...

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ ! ಒಂದು ಸಾರಿ ದನಿಗೂಡಿಸಯ್ಯ ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ. ನೋಡಿದ್ದೆ ಒಂದು ಕ್ಷಣದ ಹಿಂದೆ ಇಲ್ಲಿಯೇ ಇದ್ದೆ ಓಣಿಯ ಹುಡುಗರ ಸಂಗಡ ಚಿನ್ನಾಟವಾಡುತ್ತಾ ಕಣ್ಮನ ತುಂಬಿದ್ದೆ. ಎಳೆವೆಯ ಸೆಳೆವಿನಲಿ ಇಲ್ಲಿಯೇ...

ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ ಮತ್ತೊಂದು ಕಾಫಿ ಕುಡಿ...

ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತ...

‘ದೊಡ್ಡ ತ್ಯಾಗಮಯಿ ನೀನು… ದಡ್ಡ. ನಿನ್ನ ಓದಿಗೆ ಕೆಲಸ ಸಿಕ್ಕರೂ ಎಷ್ಟೋ ಸಂಬಳ ಬರುತ್ತೆ. ಅಸಲು ನಿನಗೆ ಕೆಲಸ ಕೊಡೋರಾದರೂ ಯಾರು? ನಿನಗೆ ಬರೋ ಸಂಬಳ ನಿನ್ನ ಹೊಟ್ಟೆಗೇ ಸಾಲ್ದು. ಮದುವೆಗೆ ಬೇಕಾಗಿರೋದು ಲಕ್ಷಗಟ್ಟಲೆ ಹಣ. ಖರ್ಚು ಮಾಡ್ದೆ ಕೂಡಿ...

ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : “ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ.” ತಾವು ಬರೆದಂತೆ ಬದುಕಿದ, ಆತ್ಮಸಾಕ್ಷಿಗೆ ಸದಾ ಬದ್ಧವಾದ ಮನುಷ್ಯನಾ...

ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ, ಯಾಕೆಂದರೆ ಮತ್ತೆ ಮತ್ತೆ ಶಿಕ್ಷಣ ಕ್ಷೇತ್ರ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡೆರಡು ಮಂತ್ರಾಲಯಗಳು ಪ್ರಾಥಮಿಕ-ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...