
ಬದುಕು ಕೆಲವರಿಗೆ ಜೂಜು ಹಲವರಿಗೆ ಮೋಜು ಇನ್ನು ಕೆಲವರಿಗೆ ಆಟದ ಗಾಜು *****...
ಇಲ್ಲಿ ನಾನು ಬಿದ್ದಂತೆ ಎದ್ದಂತೆ ನಡೆದಂತೆ ಮರೆತಂತೆ ಅಲ್ಲಿ ನಿನಗೆ ಕನಸಾಗುತ್ತದೆ. ನನ್ನ ಉಸಿರು ಕಟ್ಟಿದಂತೆ ಸತ್ತಂತೆ ಹೂತಂತೆ ಸೋತಂತೆ ಸಾಯುವುದಿಲ್ಲ ಗೆಳೆಯಾ ಯೋಚಿಸ ಬೇಡ ಸಮ್ಮನೇ ಸತ್ತಂತೆಯೇ ಬದುಕುವುದು ಅಭ್ಯಾಸವಾಗಿದೆ ಬಿಡು ಮತ್ತೆ ಸಾಯುವುದೇ...
ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ ಸುಂದರ ತಳಿಗಳೆಲ್ಲ ವೃದ್ದಿಸಲಿ ಎನ್ನುವುದು, ಹಣ್ಣಾದದ್ದೆಲ್ಲವೂ ಮಣ್ಣಿಗುರುಳುವ ಮುಂಚೆ ನೆನಪನುಳಿಸಲು ತನ್ನ ಕುಡಿಯನ್ನು ಪಡೆಯುವುದು. ನೀನೊ ನಿನ್ನದೆ ಕಣ್ಣಕಾಂತಿಯಲಿ ಬಂಧಿತ, ನಿನ್ನ ಚೆಲುವಿನ ಉರಿಗೆ ಆತ್ಮತ...
ತೇಜಾನಿಗೆ ಸಿದ್ಧಾನಾಯಕ್ ಕೊಲೆಯಾದ ವಿಷಯ ಮಾತ್ರ ಗೊತ್ತಾಗಿತ್ತು. ಅದು ಕಲ್ಯಾಣಿಯ ಕೆಲಸವೇ ಎಂದು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ. ಮೊದಲೇ ಆದೇಶ ಕೊಟ್ಟು ಬಂದಿರಬಹುದೇ ಎಂದವನು ಯೋಚಿಸುತ್ತಾ ಆ ವಿಷಯವನ್ನವಳಿಗೆ ಹೇಳಿದ್ದ “ಗೊತ್ತು” ...
ಸಂತಸ ಹಂಚಲು ಮನ ತುಂಬ ಬೇಕು ದುಃಖ ಹಂಚಲು ಕಣ್ಣು ತುಂಬಲು ಸಾಕು. *****...
ಕಡಲ ಒಡಲೊಳಗಿಂದ ನಿನ್ನ ತಬ್ಬಿಕೊಳ್ಳುವೆನೆಂಬ ಮುಗಿಲೆತ್ತರದ ಆಸೆಯಿಂದ ಅಬ್ಬರಿಸಿ ರಭಸದಿ ಬರುತಿರಲು ನಾ… ನಿನ್ನ ಸನಿಹಕೆ ಅದೇಕೋ ತಣ್ಣಗಾದೆ ನಾ ನಿನ್ನಲ್ಲಿಗೆ ಬರುವಷ್ಟರಲ್ಲಿ ಸೇರದೇ ಬಿಗಿದಪ್ಪದೇ ನಿನ್ನ ನಾ.. ಮರಳಿದೆ ಗೂಡಿಗೆ ಕಡಲಿನಾ ಒಡಲ...
ಬಡತನವೆಂದು ಬೇಸರವೇ? ಯಾರಿಗಿಲ್ಲ ಬಡತನ? ಸುಖ ಕೊಡುವುದಿಲ್ಲ ಸಿರಿತನ ಸಿರಿವಂತರ ಚಿಂತೆ ಹಲವು ನಮಗಿಲ್ಲ ಅದರ ಗೊಡವು ನಮಗೆ ಬರಿಯ ಹೊಟ್ಟೆ ಚಿಂತೆ ಮಲಗಲಿದೆ ದೊಡ್ಡ ಸಂತೆ ಯಾರೋ ಉಟ್ಟು ಬಿಟ್ಟ ಬಟ್ಟೆ ನಮಗಿದ್ದೇ ಇದೆ ಎನ್ನಿ ಪರರ ಕಷ್ಟ ಸ್ವಲ್ಪ ನೋಡ ಬ...
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ ವಹಿಸಿಕೊಂಡವರು ಸ್ಥಳೀಯ ...
ಆತ್ಮಕ್ಕೊಂದು ಅಪ್ಪುಗೆ ದಕ್ಕಿದೆ ಮನಸ್ಸು ಜಾರಿದ ತಪ್ಪಲ್ಲದ ತಪ್ಪಿಗೆ *****...
ಗಣಪತಿ ಬಂದಾನೋ ಚೌತಿ ಗಣಪಣ್ಣಾ ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ|| ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ ಮವ್‌ಮೆವ್ ಮೆವ್‌ಮೆವ್ ಬೆಕ್ಕ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...















