ಆವಕರ್‍ಮದಿ ವಿಧಿಯು ನಿರ್‍ಮಿಪ ದೇಹಗಳ ಕುಂಬಾರನೋಲ್ | ಆವಕರ್ಮದಿ ಹರಿಯ ಹತ್ತವತಾರಗಳ ತಾ೦ತಾಳಿದಂ || ಆವಕರ್ಮದಿ ಹರನು ಜಗಸಂಹಾರಕರ ತಾಂ ನೆನಿವನೋ | ನಾವು ಕರ್ಮಾಧೀನರೈ ನೇಸರನ ಗಗನದಿ ಚಲಿಪುದೂ || ೧ || ರಾಮನನು ಹದಿನಾಲ್ಕು ವರುಷವ ವನಕೆಯಟ್ಟಿತು ಕರ್ಮವು | ಕಾಮನನು ಹರಕ್ರೊಧದಗ್ನಿಗೆ ಈಡುಮಾಡಿತು ಕರ್ಮವು ||...

ಮಸೀದಿಗಳ ಉರುಳಿಸಿ ಮಂದಿರಗಳ ಕಟ್ಟುವವರೇ ಬಿದ್ದಿರುವ ಮನಗಳನ್ನೆಂತು ಎತ್ತಿ ನಿಲ್ಲಿಸುವಿರಿ ಹೇಳಿ? ಬಿದ್ದ ಗೋಡೆಗಳ ಮತ್ತೆ ಎತ್ತಿ ನಿಲ್ಲಿಸಲೂ ಬಹುದು ಎರಡು ಮನಗಳ ಮಧ್ಯ ಎದ್ದ ಗೋಡೆಯನ್ನೆಂತು ಬೀಳಿಸುವಿರಿ? ಹೇಳಿ. ಕಂಡಿದ್ದೆವು ಹಿಂದೆ ಚರಿತ್ರೆಯಲಿ...

ಸರಕಾರಿ ನೌಕರರು, ಹೊಸತಾಗಿ ಸೇರಿಹರು ಕಿರಿ ಕಿರಿಯಿದ್ಯಾಕೆಂದು ಲಂಚಕೊಗ್ಗಿಕೊಳ್ಳುವಂದದಲಿ ತರಕಾರಿ ಸಾವಯವವೆಂದು ಮೊದಲೊಳಂದವರು ಬರಬರುತೆ ಅರ್ಥ ಪಂಡಿತರಾಗುತಿಹರಿಲ್ಲಿ ಬರಿ ವ್ಯರ್ಥವೆಲ್ಲ ಪರಿಸರದ ಭಾಷಣವು ಬರದಲ್ಲಿ – ವಿಜ್ಞಾನೇಶ್ವರಾ ****...

ಸೋದರಿಯು ಇವಳೆನ್ನ ಅದರಿಸಿ ಬರಿಸಿ, ಹರಸಿ, ಸೋದರನ ತನು-ಮನವು ರೋಸಿಹೋಗುವ ಮುನ್ನ ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು ಸೋಲು ಅಡಿಗಡಿಗೆ ಕಾಲಿರಿಸಿತ್ತು. ಗೇಲು ಎಲ್ಲಿಯೊ ಕಾಲು ಕಿತ್ತಿತ್ತು. ಅಂದು ಜೀವನದ ಮಾಮರದ ಅಡಿಯೇಳತಿತ್ತು. ತಂದೆ ಸಾವಿಗೆ ಸಿಲ...

ಜಯತು ವಿಶ್ವರೂಪಿಣಿ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೇ || ಕಾಳರಾತ್ರಿ ಕದಂಬ ವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣೀ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆಯೆ || ಜಯತು ರಾಜರಾಜೇಶ್ವರಿ ಜಯತು ಭುವನೇಶ್ವರಿ ...

ಪಾಳೇಗಾರ

೧.೧ ೧ನೇ ಉಪನ್ಯಾಸ ಮೈಸೂರು ಡಿಸ್ಟ್ರಿಕ್ಟಿನಲ್ಲಿ ತಲಕಾಡೆಂಬ ಒಂದು ಪುಣ್ಯಸ್ಥಳವಿದೆ. ಅದು ಕಾವೇರಿತೀರವಾಗಿದೆ. ತಿರಮಕೂಡಲಲ್ಲಿ ಕಪಿಲಾ ಕಾವೇರಿ ಸಂಗಮವಾಗಿ ಅಖಂಡ ಕಾವೇರಿಯು ತಲಕಾಡಿಗೆ ಹರಿದುಹೋಗುವುದು. ಈ ನದೀತೀರದಲ್ಲಿ ನೀರಿನ ಅಲೆಯಿಂದ ಮರಳು ಬಂದ...

ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ ನಿಂತರೂ ನಡೆದಾಡಿದರೂ ನಿನ್ನ...

ಯಾರು ಏನೆಂದರೇನು? ನಿಲ್ಲದೀ ಬಾಳ ದೋಣಿ| ಕಡಲಾದರೇನು ನದಿಯಾದರೇನು| ಸಾಗುವುದೇ ಇದರ ಪರಮ ಗುರಿಯಾಗಿರಲು || ಕಡಲಾದರೆ ಅನಂತ ದೂರ ಸಾಗುವೆ ನದಿಯಾದರೆ ಅನೇಕ ಊರ ಸೊಬಗ ನೋಡುವೆ| ಕಡಲಲಿ ಎದುರಾಗುವ ಅಬ್ಬರದಲೆಗಳ ದಾಟಿ ಸಾಗುವೆ| ನದಿಯಲಿ ತೊರೆಯ ಹರಿವಲಿ...

ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. “ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?” ಎಂದಳು ಅಮ್ಮ. ಮಳೆ ಬಂದರೆ ನೀನು ನಂಗೆ ಟೋಪಿ ಹಾಕುತ್ತೀಯ...

ಬೆಂಗಳೂರಿನಲ್ಲಿ ಬುದ್ಧಿಯ ಬಿಸಿಬೇಳೆ ಬಾತು ತಿನ್ನುತ್ತ ಸಂಕೀರ್ಣ ಅಸಂಗತ ಹಾಳುಮೂಳು ಹೂತು ತಲೆತಪ್ಪಲೆಗೆ ಸಟ್ಟುಗ ತಿರುವುತ್ತ ಹೊಟ್ಟೆಯಲ್ಲಿ ಹೂವರಳಿಸ ಹೊರಟವನು ಹಳ್ಳಿಗೆ ಹೋದಾಗ ಭ್ರಮೆ ಬಿಳುಚಿಕೊಂಡಿತು. ಚೌಕಟ್ಟಿಲ್ಲದ ಊರಬಾಗಿಲು ನೆಲಮುಗಿಲು ಪ್ರ...

ಭಾಗ ೧ ಆಂಡ್ರಿಯಾ ಡೆಲ್ ಸಾರ್‍ಟೊ [Andrea del Sarto] ಒಬ್ಬ ಹೆಸರಾಂತ ಚಿತ್ರ ಕಲಾವಿದ. ನ್ಯೂನ್ಯತೆಗಳೇ ಇಲ್ಲದ ಕಲಾವಿದ. ೧೫೧೨ರಲ್ಲಿ ಲೂಕ್ರೇಸಿಯಾ [Lucrezia] ಎಂಬ ಅಪೂರ್ವ ಸುಂದರಿಯನ್ನು ವಿವಾಹವಾದ ಆತನ ಅನೇಕ ಕಲಾಕೃತಿಗಳಿಗೆ ಆಕೆಯೇ ರೂಪದರ್ಶ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...