ಸುಳ್ಳು ಸತ್ಯ ಇಲ್ಲ ತಥ್ಯ ಗೆಲುವು ಒಂದೆ ನಮ್ಮ ಗುರಿ ಒಳ್ಳೆತನವು ಮಳ್ಳತನವು ಬಲವು ಇದ್ದರಲ್ಲಿ ಸರಿ ಬಾಳಿದೊಂದು ಸಮರದಂತೆ, ನುಗ್ಗು ನುಗ್ಗು ಮುಂದಕೆ ವೇಳೆಗಳೆಯ ಬೇಡ ಸಾಗು ಬೀಳಬೇಡ ಹಿಂದಕೆ! ಬಾಳಿಗಿಹುದು ಒಂದೆ ಸೂತ್ರ ಬಾಳುವುದೇ ಪೂರ್ಣ ಅರ್ಥ ಗಾಳಿ ಬೀಸುತಿಹುದೆ ಸಾರ್ಥ ನೀತಿ ನೇತಿ ಎಲ್ಲ ವೃರ್ಥ! ಜತೆ-ಜೊತೆಗ...

ನನ್ನ ಗೆಳತಿ ಅವಳು ಎಂದಂತೆ ಹೆಜ್ಜೆ ಇಟ್ಟಂತೆ ಲಜ್ಜೆಯ ಬೆಸದಂತೆ ಅವಳೊಂದು ಮಿಲನ ಮುಕ್ತ ಮುಕ್ತ ಕಾವ್ಯ ಹರಿದು ಹೋದಂತೆ ನದಿ ನದಿಗಳ ಕಡಲ ಸೇರಿ ಮುತ್ತಾದಂತೆ ಬದುಕಿನ ಮಜಲುಗಳ ಅಪ್ಪಿಕೊಂಡು ನನ್ನ ಗೆಳತಿ ಅವಳು ಮುಕ್ತ ಸಂತೆಯ ಮಳಿಗೆಗಳ ಸುತ್ತಿ ಸುಳಿದ...

ಯೋನಸಂಚರತೀ ದೇಶಾನ್‌ ಯೋನಸೇವೇತ್‌ ಪಂಡಿತಾನ್‌ | ತಸ್ಯಸಂಕುಚಿತಾಬುದ್ಧಿ ಘೃತಬಿಂದುರಿವಾಂಭಸಿ || ಸುಭಾಷಿತ || ಎಷ್ಟೋ ಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್‍ಥಕವಾಗಿ ವ್ಯಯವಾಗುವದೆಂದು ಭಾವಿಸುವರು, ಆದರೆ ಹಾಗೆ ತಿಳಿಯವದು ದಡ್ಡತನವು. ಪ್ರವ...

ಜೀವನದ ಅತ್ಯುನ್ನತೆಯ ಆದರ್ಶ ಅದುವೆ ಹರಿಯ ದೈವಭಕ್ತಿ ದೇವರನು ಮರೆತು ಏನು ಓದಿದರೂ ಅದು ದೇಹಕ್ಕೆ ಭುಕ್ತಿ ಮನಸ್ಸಿನ ಮೂಲೆ ಮೂಲೆಗೆ ಇಣಕು ಒಳಗಿರುವ ದೋಷಹೊರ ಹಾಕು ಖಾಲಿಯಾಗಿದ ಮನದ ತುಂಬ ತುಂಬು ದೇವನಾಮ ಸರಕು ಎಸೋ ವರಷವೂ ಮರೆತೆ ನಿನ್ನ ನಿ ಮೆರೆದ ...

ಪ್ರೀತಿಯೆಂದರೇನು ಎಂದು ಅರಿಯುವ ಮುನ್ನವೇ ಸೋತು ಶರಣಾದೆನು| ನಿನ್ನ ಪ್ರೀತಿಗೆ ಪರವಶನಾಗಿ ನಿನ್ನ ನಭದಲಿ ತೇಲಿ ನನ್ನೇ ನಾನು ಮರೆತೆನು || ನಿನ್ನ ಪ್ರೀತಿಯ ಸ್ಪರ್ಶದಲಿ ನಾನು ಸಂತುಷ್ಟನಾದೆನು| ನಿನ್ನ ಪ್ರೀತಿಯ ಆಲಾಪನೆಯಲಿ ಮಿಂದು ನಾನು ಪುನೀತನಾದ...

ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು ದಾಟಿ ‘ಪ್ರಿಯೆ! ...

(ಕೆಲವು ಟಿಪ್ಪಣಿಗಳು) ೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ ಬರೆದ ಮಾತುಗಳಲ್ಲಿ ...

ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ ಇಲ್ಲಿ ಕಾರಣವಿಲ್ಲ ಕಳೆದ ಜನ್ಮದ ಪಾಪವಂತೆ ಸೊಕ್ಕಿ ...

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ. ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ ೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ, ಪೊನ್ನಡಕಿಲ್ಗಂ ಪೊನ್ನ ಕ್ಕೆ. ೨. ಬೀಡುಂ ಬಯಲ್ ಮಲೆ ಕುಡಿವಾಳ್ಕೆ ಕರ್‍ಬು ಜೇನ...

ಅಪರಿಮಿತ ತಾರೆಗಳ ಅನುದಿನವು ಆಗಸದಿ ಎಣಿಸುವುದು ನನ್ನ ಧರ್ಮ ಎಣಿಸುವೆನು ಗುಣಿಸುವೆನು ಅಳೆಯುವೆನು ಎಳೆಯುವೆನು ಯಾಕೆ ಏನೆಂದು ನಾನು ತಿಳಿಯೆ ನಿಂತಿವೆಯೊ ಚಲಿಸುತಿವೆಯೊ ಮಿಂಚುತಿವೆಯೊ ಜ್ವಲಿಸುತಿವೆಯೊ ವರ್ಧಿಸುತಿವೆಯೊ ಕ್ಷಯಿಸುತಿವೆಯೊ ಹಾಗೆ ಅಲ್ಲ...

ಭಾಗೀರಥಿ– “ಆಚಾರ್ಯರೇ! ತಮ್ಮ ಬರುವಿಕೆಯು ನಮ್ಮ ಪೂರ್ವ ಪುಣ್ಯದ ಫಲವೇ. ತಮಗೆ ಬಹುಶಃ ನಮ್ಮ ಗುರುತವಿಲ್ಲ. ನಮ್ಮ ಮೂಲ ಸ್ಥಾನ ತಮ್ಮ ಹೆಂಡತಿ ಭೀಮಕ್ಕನ ತೌರುಮನೆ ಇರುವ ಸಮಂತಪೇಟೆ. ಇತ್ತಲಾಗಿ ನಾವು ಆ ಊರು ಬಿಟ್ಟು ಈ ಪಟ್ಟಣಕ್ಕೆ ಬಂದಿರುವೆವು...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...