ಗಾಯಗೊಂಡು ಚೀರುವೆದೆಗೆ ಗುಟುಕು ಕೊಟ್ಟೆ
ಮುಖವಾಡಗಳ ಗೂಢದಲ್ಲಿ ಬುದ್ಧಿಬುರಖಾಗಳ ಬಡಿವಾರದಲ್ಲಿ
ಗಾಢವಾಗದೆ ಗಡಿದಾಟಿ ದೋಣಿ ಮೀಟಿ
ಏಕಾಂತ ಏದುಸಿರಿಡುವಾಗ ಕಾಂತಾಸಮ್ಮಿತವಾದೆ.
ಕೆಣಕುವ ಬೆಡಗು ಗುಟರುವ ಗುಡುಗು ಚಳಿಯ ನಡುಗು-
ಗಳ ಉಜ್ಜುವಿಕೆಯಲ್ಲಿ ಕಿಚ್ಚು-
ಕಣ್ಣುಗಳ ಗಾಳ ತಪ್ಪಿಸಿ ಗುರಿಗೋಲಿ ಹೊಡೆವ ಸೆಣೆಸಾಟದಲ್ಲಿ
ಸುರಿವ ಬೆವರು ಒರೆಸಿ ತಳಮಳ ಸರಿಸಿ
ಸುಗ್ಗಿಮೊಗ್ಗಾಗಿ ಬಂದು ತೋಳೊಳಗೆ ಅರಳಿದೆ; ನರಳಿದೆ.
ಒಳಧಗೆ ಹೊಗೆಯಲ್ಲಿ ಹೂಬಿಟ್ಟು
ಮನಸ್ಸಿನ ಚುಂಗು ಜಗ್ಗಿ ಸ್ವಿಚ್ಚೊತ್ತಿ ನರದಲ್ಲಿ ಹರಿಬಿಟ್ಟು
ಬಲ್ಬು ಹತ್ತಿಸಿದೆ.
*****