
ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್‍ತಿಯನೆ ಬಯಸಿಲ್ಲ. ನನ್ನ...
ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ. ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ ಗೂರ್‍ಖಾನ ಸೀಟಿ ಅರೆಮಂಪರಿನಲಿ ಕ...
ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ ನನ್ನ ಮನಸನು ಓಲಾಡಿಸು ತಂಗಾಳಿ ನಿನ್ನ ಬಯಸಿ ಬಯಕೆಗಳ ಚಿಗುರಲಿ ಹೊಸ ಗೀತೆಯ ಬರೆದು ವಸಂತನ ಕರೆದು ನನ್ನ ಮನಸನು ತೂಗಿಸು ತಂಗಾಳಿ ಆ ಮರದ ಹೂವು ಈ ಮರದ ಹೂ ಗೊಂಚಲು ನನ್ನ ಮ...
ಪರಮಹಂಸರು ನೀವು ಮಹಾ ಚೇತನರು ಬಾಳೆಲ್ಲ ದೈವತ್ವದಲ್ಲಿ ಕಳೆದವರು ಪದವಿಗಳ ಪಡೆಯದ ವಿದ್ಯಾವಂತರು ಅಮೋಘವನ್ನು ಸಾಧಿಸಿದ ಅಮರಜರು ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು ಅವರ ಉದರದಿ ಜನಿಸಿದ ನೀವು ಸುತರು ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು ಅಣ್ಣ ನನ...
ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ ...
ಫಲದ ನಿರ್‍ಣಯವು ಏನು ಆದರೂ ಕ್ಷುಬ್ಧನಾಗನವನು ನೇರಾದ ರೀತಿ ರುಜು ಅವನ ನೀತಿ, ಸಿದ್ಧಿಸದೆ ಇದ್ದರೂನು ತನ್ನ ಯೋಗ್ಯತೆಗೆ ತಕ್ಕ ರೀತಿಯಲಿ ಕರ್‍ಮಕುಶಲನಾಗಿ ಸತ್ಯವನ್ನೆ ಸಾರುವನು ಜಗಕೆ ನಿರ್‍ಭೀತ ಧೀರನಾಗಿ. ಫಲವೆಂದೆ ಬರಲಿ ಯುಗಯುಗವು ತಾಳಿ ಎದೆಗೆಡದ...
ಎಲ್ಲಿದೆಲ್ಲಿದೆ ತಣಿವು ? ಏತರಲ್ಲಿದೆ ತಣಿವು ? ಎಲ್ಲಿಯೆಲ್ಲಿಯು ಕಾಣಲೊಲ್ಲದಾ ತಣಿವು! ಕುಸುರುಕುಸುರಿನ ಚಿನ್ನ -ರನ್ನ ದೊಡವೆಗಳಿಟ್ಟು ಹೊಸ ಮಿರುಗಿನಾ ಸೀರೆ ಬಣ್ಣಗುಪ್ಪಸ ತೊಟ್ಟು ಸಾಕುಸಾಕಿನ್ನೆಂಬ ತಣಿವ ಪಡೆಯುವರು, ಆ ಕೆಳದಿಯರು ನಕ್ಕು ನಲಿದಾಡ...
ಒಮ್ಮೆ ಪ್ರೀತಿಯಲಿ ಸೋತರೇನು, ಮೋಸ ಹೋದನೆಂದೇಕೆ ಕೊರಗುವೆ ನೀನು| ನವಚೈತನ್ಯವ ತಂದುಕೊ ಸೋತು ಸೊರಗಿ ನೀ ಮಂಕಾಗದಿರು| ಹೊಸ ಜೀವನವ ನೋಡು ಹಳೆಯದನ್ನೆಲ್ಲಾ ಮರೆತುಬಿಡು|| ಏಕೆ? ಪ್ರೇಮ ಫಲಿಸಲಿಲ್ಲವೆಂದು ಯೋಚಿಸು| ನಿನ್ನ ಪ್ರೀತಿಸುವವರ ನೀ ಪ್ರೀತಿಸೆ...
ನಕ್ಕವರೆಲ್ಲ ನನ್ನವರೆಂದು ಮಳೆಗರೆಯಿತು ಮನಸು ಸುತ್ತ ಮುತ್ತಿದ ಕಂಡ ಕಂಡವರಿಗೆ ಹದವಾಯಿತು ಕನಸು ಕಳಕಳ ಎನ್ನುವ ಕನಸಿಗೆ ಅವರು ಅಮಲಿನ ಹಾಸಿಗೆ ಹಾಸಿದರು ನರಳಿತು ಕನಸು ಸುಖ ಸಂತಸದಲಿ ಮರೆತು ಹೋಯಿತು ಮಳೆ ಮನಸು ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು ನ...
ಸ್ವಾತಂತ್ರ್ಯಪೂರ್ವದಲ್ಲಿ ಬದುಕಿನಲ್ಲಿ ತುಂಬಿದ್ದ ಆದರ್ಶ ಭರವಸೆ ಕನಸುಗಳು ಅಂದಿನ ಕಾವ್ಯಮಾರ್ಗವಾದ ನವೋದಯ ಕಾವ್ಯದಲ್ಲಿ ಪ್ರತಿಬಿಂಬಿಸಿದವು. ಆದರೆ ಸ್ವಾತಂತ್ರ್ಯಾನಂತರ ಬದುಕಿನಲ್ಲಿ ಕಂಡುಬಂದ ಹುಸಿತನ, ಭೀಭತ್ಸತೆ, ಭ್ರಷ್ಟತೆ ಇವು ನವ್ಯಕಾವ್ಯದಲ್...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















