ಬೆಲ್ಲಾ ತಿಂದೆ ನಾನು ನಲ್ಲಾ
ಬೆಲ್ಲಾ ಜೇನು ಎಲ್ಲಾ
ಇಂಥಾ ಬೆಲ್ಲಾ ಎಲ್ಲೂ ಇಲ್ಲಾ
ನಾನು ನೀನು ಖುಲ್ಲಾ

ಹುಲ್ಲು ಕಳ್ಳಿ ಕಂಟಿ ತಿಂದೆ
ಅದಽ ವೈನ ಅಂದೆ
ತಿಂದ ಮ್ಯಾಗ ತಿರುಗಿ ಬಿದ್ದೆ
ತಳಗ ಮ್ಯಾಗ ಆದೆ

ಇಂಗು ತಿಂದು ಮಂಗ ನಾದೆ
ಮ್ಯಾಲ ಹೆಂಡಾ ಕುಡಿದೆ
ರಂಬಿ ಕೊಂಬಿ ಹಾರಿ ಜಾರಿ
ಟೊಂಕ ಮುರಿದು ಬಿದ್ದೆ

ಇಂದು ನಿನ್ನ ಕದ್ದು ಕೊಂಡೆ
ಕಳವು ಮಾಡಿ ಬಿಟ್ಟೆ
ಕಣ್ಣಿ ಕಣ್ಣಿ ಬೆಲ್ಲಾ ತಿಂದೆ
ಮ್ಯಾಲ ಹಾರಿಬಿಟ್ಟೆ
*****