ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ ಅರಿಷಟ್ಕತಂತ್ರದಿಂ ನಿತ್ಯತೆಯನು ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು. ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು; ದಿವ್ಯಾನುಭೂತಿಗೂ ಮೂಡು ಮುಳುಗು; ಯಮನಿಯಮಧ್ಯಾನಾದಿ ತಂತ್ರದಿಂ ತನ್ನುಳಿವ ಸಾಧಿಸುವುದಾತ್ಮವೂ ಜೀವದೊಳಗೂ. ಧೀಮಂತ...

ವರ್ಷಗಳೇ ಕಳೆದವು ಭೂಪಾಲದ ಬಿಕ್ಕುಗಳು ನಿಂತು ಹೋಗಲಿಲ್ಲ. ರೋದನ ಶಾಂತವಾಗಲಿಲ್ಲ. ಕಾರ್ಖಾನೆಗಳು ಉಗುಳಿದ ಕಪ್ಪನೆಯ ವಿಷಗಾಳಿ ಕೊಲೆಯಾಯ್ತು ಊರೆಲ್ಲಾ ಸ್ಮಶಾನವಾಯ್ತು. ರಹಸ್ಯ ರಾತ್ರಿಯಲಿ ಕರಾಳ ಕೈಗಳು- ಛಸನಾಲಾ ದುರಂತದ ಗಣಿಯಿಂದ ಇಣುಕುತ್ತಿರುವ ಅಸ...

ಆಡುವುದು, ಪಾಡುವುದು, ಏನೆಲ್ಲ ಮಾಡುವುದು ಬಡವನಾದೊಡಂ ಬಿಡದೆ ತಾ ಜಾಣನೆನಿಸಿಕೊಳು ವೊಡೆಲ್ಲರಿಗು ನೂರೊಂದವಸರಗಳವಕಾಶಗಳಿ ರ್ದೊಡಂ ಕೈ ಕೆಸರುಣದ ಗುಂಪನೇ ಬಡ ಬಡಿಸಿ ತಜ್ಞರೆನುವಜ್ಞತೆ ಯಾಕೋ ರೈತಂಗೆ – ವಿಜ್ಞಾನೇಶ್ವರಾ *****...

ನಿನ್ನಳವಿನರಿವು ನನಗಿಲ್ಲ ಹೊನ್ನ ಬಣ್ಣವನು ತಿಳಿಯ ಬೇಕೆಂದಿಲ್ಲ ಚಿನ್ನ! ನಿರಂತರವಾದ ಸ್ವಭಾವ ಗುಣವನು ಪರತಂತ್ರನಾದ ಹುಲು ಮನುಜ ಎಂತು ಬಲ್ಲನು ಹೇಳು. ಅಂದು ಒಂದೆ ನೋಟಕೆ ಬಂದೆ ನನ್ನ ಬದುಕಿಗೆ ನಿನ್ನ ಬಯಕೆ ಅದೇನೋ ನನ್ನ ಬಯಕೆ ನೀನಲ್ಲ…&#8...

ಮೂಡಿದ ಹೂ ಮಲ್ಲಿಗೆ ನಗುವೆ ಏತಕೆ ಮೆಲ್ಲಗೆ ಸರಸವಾಡುವ ನೆಪದಲಿ ನನ್ನ ಮರೆತೆಯೇನೆ || ನಿನ್ನ ಕಾಣುವಾತರದಿ ಬಂದು ನಿಂದೆ ನಿನ್ನ ಬಾಗಿಲಿಗೆ ಒಳಗೆ ಬಾ ಎಂದು ಕರೆಯಲು ಏಕೆ ಮುನಿಸು| ನಾ ನಿನ್ನ ಗೆಳತಿ ನನ್ನ ಮರತೆಯೇನೇ || ಚೌಕಾಬಾರ ಆಡುವಾಗ ಬಳೆಗಳ ತೊ...

ಲೋ. ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ ಇಂಥಿಂಥವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿಯನ್ನು ಅನುಕರಿಸಲಿಲ್ಲ; ಶ್ರೀ ಶಿವಾಜಿಮಹಾರಾಜರು ಸ್ವರಾಜ್ಯಸ್ಥಾಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ ‘ಗನೀನೊಕಾವ...

ಓ ಎನ್ನ ಎದೆಯಾಳದ ಹರಿಯೆ ನೀನು ನನ್ನ ಭಾವಗಳ ಅರಿಯೆ ನಾನು ಹೇಗಿದ್ದರೂ ಅದು ಸರಿಯೆ ನಿನ್ನ ನೆನಪಲ್ಲೆ ಎಲ್ಲವೂ ಮರೆವೆ ಯಾವುದು ಇಲ್ಲಿ ಸಾರ್ಥಕವಿಲ್ಲ ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು ಸಾವಿನ ಮಡಿಲಲ್ಲಿ ...

ನಗೆಯು ಬಂದು ತುಟಿಯ ಮೇಲೆ ನಿಂತಿದೇತಕೆ| ನಸುನಗುತಲಿ ಮೊಗ್ಗಾಗಿ ಮಿಂಚುತಿದೇಕೆ? ಹೊರಹೊಮ್ಮಲಿ ನಗೆ ಚಿಮ್ಮಲಿ ಹರ್ಷದಾನಂದ ಮಳೆಸುರಿಯಲಿ|| ಏನೋ ಒಳಗೆ ಸಂತಸದ ಹೊನಲು ಚಿಗುರೊಡೆದಂತಿದೆ| ಹೇಳಲಾರದ ಹೊಸ ಅನುಭವವ ಅನುಭವಿಸುತಲಿ| ತನಗರಿವಿಲ್ಲದಲೆ ತುದಿಬ...

ದೇವಸ್ಥಾನಗಳಲ್ಲಿ ಕೊಟ್ಟ ಕುಂಕುಮವನ್ನು, ಕುಂಕುಮ ಭರಣಿಯಲ್ಲಿ ತುಂಬಿಡುತಿದ್ದಳು ಆಕೆ. ಮನೆಗೆ ಬಂದ ವಿಧವೆಯರಿಗೆ ನಿಸ್ಸಂಕೋಚವಾಗಿ ಉದಾರ ಮನಸ್ಸಿನಿಂದ ದೇವರ ಕುಂಕುಮ ತೆಗೆದುಕೊಳ್ಳಿ ಎನ್ನುತ್ತಿದ್ದಳು. ಅವರನ್ನು ಬೀಳ್ಕೊಡುವಾಗ ಅವರು ಕುಂಕುಮ ಪ್ರಸಾ...

ಕರಿ ಇರುಳ ಬದುಕು ದೀಪಽದ ಮಿಣಿಕು ಒಳ ಉರಿಯ ಹಿರಿಯಾಸೆ ಬಿರಿದೋಯಿತೊ ನರನರದ ಸರದಾಗೆ ಉರಿ‌ಉರಿಯ ದಳ ಅರಳಿ ಹೂವಾಯಿತೊ-ಬೆಂಕಿ-ಹೆಡೆಯಾಯಿತೊ. ಆಲದಾ ಬಿಳಲು ಕರಿಬಾಳ ಸರಳು- ನೆಲದ ನಗೆ ನುಂಗುವ ಹಗೆಯಾಯಿತೊ ಬೇರುಗಳು ಬರಸೆಳೆದು ಕಾರಿರುಳ ವಿಷ ಸುರಿದು ಬ...

ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...