
ಕಾವೇರಿ ನದಿಯ ನೀರಿಗೆ ರಾಜಕೀಯ ಶಕ್ತಿ ಬಂದಿದೆ; ಯಾಕೆಂದರೆ ಆ ನೀರಿಗೆ ರೈತರಿಗೆ ಬೆಳಕಾಗುವ ಜೀವಶಕ್ತಿಯಿದೆ. ಕೃಷ್ಣಾನದಿಗೂ ಅಷ್ಟೆ, ಕಾವೇರಿಯ ವಿಷಯದಲ್ಲಿ ತಮಿಳುನಾಡಿನ ಜೊತೆ, ಕೃಷ್ಣಾ ವಿಷಯದಲ್ಲಿ ಆಂಧ್ರದ ಜೊತೆ ಜಗಳ ಬಂದಾಗಲೆಲ್ಲ ರೈತರನ್ನೂ ಒಳಗೊ...
ಜೋಗುಳ ಹಾಡನ್ನು ಲಾಲಿಸು, ಜೋ! ಜೋ! ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ! ಸುಮಲತೆಗಳ ಪರಿಮಳವ ಬಿತ್ತರಿಸಿ, ಕಮಲದ ಕೋಮಲ ಗಂಧವ ಬೆರಸಿ, ಮಂದ ಮಾರುತವು ಬೀಸುತ್ತಿರಲಿನಿಸು, ತಂದೆ, ತಂದಿಹೆನೊಂದು ಮುದ್ದಿನ ಕನಸು. ಮೊದಲೆವೆಗಳನು ಮುಕುಳಿಸೆನ್ನ ಸಿರಿ...
ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? – ವಿಜ್ಞಾನೇಶ್ವರಾ *****...
ಮಾವು ಬಾಳೆ, ತೆಂಗು, ಹಲಸು ರಸದ ಕಬ್ಬು ಬೆಳೆಯಲಿ ಸುತ್ತಮುತ್ತ ಚೈತ್ರ ಚಿತ್ರ ಪ್ರೇಮ ಪತ್ರ ಬರೆಯಲಿ ಜೀವಸೂತ್ರ ಗೆಲ್ಲಲಿ ಸೂರ್ಯ ಚಂದ್ರ ಮುಗಿಲು ಚುಕ್ಕಿ ವಿಶ್ವ ಲಾಲಿ ಹಾಡಲಿ ಹಕ್ಕಿ ಕಂಠ ಹಾಲು ಬೋನ ಜೇನುತುಪ್ಪ ಸುರಿಯಲಿ ಬೇವು ಬೆಲ್ಲವಾಗಲಿ ನೂರು ...
ಯಾರೋ ಬರೆದ ಕವನ ಕಾಡಿತ್ತು ಎಡೆಬಿಡೆದೆನ್ನ ಮನ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಬೆನ್ನು ಹತ್ತಿದ ನಕ್ಷತ್ರಿಕನಂತೆ ಕಣ್ಣಾಡಿಸಿದೆ ಅರ್ಥವಾಗಲಿಲ್ಲ ನವ್ಯವೋ ನವೋದಯವೋ ಏನೋ ತೋಚಿದ್ದು ಗೀಚಿದ್ದು ಭಟ್ಟಿ ಇಳಿಸಿದ್ದಾರೆ. ಓದಿದೆ ಒಂದಲ್ಲ ಹತ್ತಾರು ಸಲ...
ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ ಕನಸಿನ್ನೆಲ್ಲಿ ಬಹುದವ್ವಾ [ದಿಟವಾದಡೆ-ನಿಜವಾದರೆ] ಉರಿಲಿಂಗದೇವನ ವಚನ...
ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೂರುವಿರಾ ? ಅಪಾರ ಗಗನವು ಇರತಿಹುದಂತೆ ! ತಾರಾಗಣದಿಂ ತೋರುವುದಂತೆ ! ಕಾರ್‍ಮೋಡಗಳಿ೦ ಮುಸುಕಿಹುದಂತೆ ! ಚಂದ್ರ ಸೂರ್‍ಯರಲ್ಲಿರುತಿಹರಂತೆ ! ಜಗವನು ಬೆಳಗಲು ನಿಂದಿಹರಂತೆ ! ರಾಹು ಕೇತುಗಳು ಪ...
ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ ಸಮಯದಲ್ಲಿ ನೆತ್ತಿ ಸವರಿ ಹಾರಿವೆ ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ ದೇವರ ಮನೆಯಲ್ಲಿ ನಂದಾದೀಪ ಉರಿದಿದೆ. ಮರಗಳ ಮೌನಗೀತೆಯನ್ನು ಹಕ್ಕಿಗಳು ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ ಪಾರಿಜಾತ ಅವನ ಒಲುಮೆಯ...
ಕಾಡ ಬೇಡ ಗೆಳತಿ ಹೊನ್ನಾಡ ಬೇಡ ಬೆಡಗಿ ಒಲವಿನಾಸೆರೆ ಬಯಸಿ ಬರಸೆಳೆದು ಬಿಗಿದಪ್ಪಿ ಮುದಗೊಳಿಸಿ ನಿನ್ನ ಕರೆದಿದೆ ಕಾಡ ಬೇಡ ಗೆಳತಿ ನಿನ್ನತನ ನೆನೆದಾಗ ಉಸಿರುಸಿರು ನನ್ನ ಮನದಾಗ ಹೊನ್ನಾಡ ಬೇಡ ಹುಡುಗಿ ಅಕ್ಕ ತಂಗೀರು ನನ್ನ ಬೆನ್ನ ಮ್ಯಾಲೆ ನೀರು ಹೊಯ್...
ಎತ್ತೆತ್ತ ನೋಡಲಿ ದೇವಾ ನಾನು ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ ಕಣ್ಣು ಮಚ್ಚಿದರಾಯ್ತು ನಾನು ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ ಯಾರು ಹೇಳದರೋ ನಮಗಂದು ಮನಸ್ಸು ತುಂಬ ಮರ್ಕಟವೆಂದು ಆದರೆ ಮನಸ್ಸನ್ನು ಕರೆದು ತೋರಿದವರು ಇದೆಲ್ಲ ಸುಖವೆಂದು ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















