ರಾಜರು ಕಟ್ಟಿಸಿದ ಅರಮನೆ
ಮಹಲು, ಗುಡಿ, ಗೋಪುರ,
ಮಸೀದಿ, ಕೋಟೆ, ಕೊತ್ತಳಗಳಿಗೆ
ಇಟ್ಟಿಗೆ, ಗಾರೆ, ಕಲ್ಲುಗಳ ಹೊತ್ತು
ಹುಡಿಯಾಗಿ ಕೊನೆಗೆ
ಭೂತಾಯಿ ಒಡಲು ಸೇರಿದವರು.
ಇಲ್ಲವೆ
ರಾಜರು ಘೋಷಿಸಿದ
ಯುದ್ಧಗಳಿಗೆ ಮರು ಮಾತಿಲ್ಲದೆ
ಕತ್ತುಗಳ ಕತ್ತರಿಸಿ
ನೆತ್ತರ ಕಾಲುವೆ ಹರಿಸಿದ
ವೀರ ಸೈನಿಕರು – ಇಲ್ಲವೆ
ಸಾವನ್ನು ಸ್ವಾಗತಿಸಿ
ಶಹೀದ್ ಎನಿಸಿಕೊಂಡವರು.
*****