ಕಾಳು ನೀಡು ಹಕ್ಕಿಗಳಿಗೆ
ಕಾಳಿಗವೇ ಕಾರಣ
ನೀರು ನೀಡು ಮರಗಳಿಗೆ
ನೀರಿಗವೇ ಕಾರಣ

ನಿನ್ನೆಯ ನೆನೆ-ಈ ದಿನಕೆ
ನಿನ್ನೆಯೇ ಕಾರಣ
ಈ ದಿನ ಜೋಪಾನ-
ನಾಳೆಗೀ ದಿನವೇ ಕಾರಣ

ಯಾರು ನೇಯ್ದ ಮಹಾಜಾಲ
ವಿಶ್ವವೆಂಬೀ ಅಚ್ಚರಿ
ಅಲ್ಲಿ ಬಿಸಿಲು ಇಲ್ಲಿ ಮಳೆ
ಇಂದ್ರಚಾಪದೀಪರಿ

ನೀನು ನಾನು ಅವನು ಅವಳು
ಅದುವು ಇದುವು ಎಲ್ಲವೂ
ಒಂದೆ ದೋಣಿಯಲ್ಲಿ ಯಾನ
ಮುಳುಗಿದರೆ ಸಮಸ್ತವೂ

ಜ್ಞಾನಿಯೇ ವಿಜ್ಞಾನಿಯೇ
ಮುಗ್ಧನೇ ಪ್ರಬುದ್ಧನೇ
ಶುದ್ಧನೇ ಮಹಾ ಬುದ್ಧನೇ
ಅನಿಸು ನಾನು ನಿಮ್ಮವನೆ
*****