ಬಾಹ್ಯಾಕಾಶದ ಕಥೆ

ಬಾಹ್ಯಾಕಾಶದ ಕಥೆ

ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ.

ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು ಸಂಶೋಧನೆ ಮಾಡುವರು.

ಈಗೀಗ ಅಮೆರಿಕದ ನಾಸಾದ ಪ್ರಯೋಗ ಸಿದ್ಧಿಸಿದೆ. ಅಲ್ಲಿ ತರಕಾರಿ ಬೆಳೆಯುವ ಹಚ್ಚನೆ ತರಕಾರಿ ತಿನ್ನಬಹುದು. ಬಿಸಿಬಿಸಿ ಅಡಿಗೆ ತಯಾರಿಸಬಹುದೆಂದು ಈಗಾಗಲೇ ವಿಜ್ಞಾನಿಗಳು ಘೋಷಿಸಿದ್ದಾರೆ.

ಹೌದು! ಅಲ್ಲಿ ಗುರುತ್ವವೇ ಇಲ್ಲದೆ ಆ ಜಾಗದಲ್ಲಿ ಮಣ್ಣಲ್ಲಿ ಬೀಜಗಳೇ ನಿಲ್ಲುವುದಿಲ್ಲ ಹೇಗೋ ನಿಲ್ಲಿಸಿದರೂ ಬೀಜಕ್ಕೆ ಯಾವ ದಿಕ್ಕಿಗೆ ಮೊಳಕೆಯಾಗಬೇಕೋ ತಿಳಿಯಲಾರದ ಸ್ಥಳದಲ್ಲಿ ತರಕಾರಿ ಬೆಳೆಯುವುದು ಭಗೀರಥ ಪ್ರಯತ್ನವೆಂದು ನಾಸಾದ ಐಯಾನ್ ಕ್ರಾಫೋರ್ಡ್ ಎಂಬ ವಿಜ್ಞಾನಿ ತಿಳಿಸಿದ್ದಾರೆ.

ಬಾಹ್ಯಾಕಾಶದಲ್ಲೇ ಆಹಾರ ಬೆಳೆಯುವ ನಾಸಾದ ಯೋಜನೆಯ ಹೆಸರು ವೆಜ್-೦೧ ಎಂದು! ಇದಕ್ಕೆಂದೇ ಕಳೆದ ತಿಂಗಳು ಜುಲೈ ೨೦೧೫ರಲ್ಲಿ ಸ್ಪೇಸ್‌ಎಕ್ಸ್ ಎನ್ನುವ ಖಾಸಗಿ ಉಪಗ್ರಹವನ್ನು ಕಳುಹಿಸಿ ಸ್ಪೇಸ್ ಸ್ಟೇಷನ್‌ಗೆ ಜೋಡಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳಿಗೆ ಬೇಕಾದ ಆಹಾರ ಪದಾರ್ಥಗಳ ಜತೆಗೆ ಇದರೊಳಗೆ ತರಕಾರಿ ತೋಟವನ್ನೇ ಬೆಳೆಸಲು ಬೇಕಾದ ವ್ಯವಸ್ಥೆ ರೂಪಿಸಲಾಗಿದೆಯೆಂದು ನಾಸಾದ ವಿಜ್ಞಾನಿಗಳು ಅರುಹಿದ್ದಾರೆ.

ಈಗೀಗ ಇಂಟರ್‌ನ್ಯಾಷನಲ್ ಸ್ಟೇಸ್ ಸ್ಟೇಷನ್‌ನಲ್ಲಿ ಫ್ರೆಶ್ ತರಕಾರಿ ಬೆಳೆದಿರುವರು. ಇದರ ಹೆಸರು- ಲೆಟ್ಯೂಸ್. ಇದು ಒಂದು ರೀತಿಯ ಎಲೆಕೋಸನ್ನು ಹೋಲುವ ಒಂದು ತರಕಾರಿ ಎಂದು ನಾಸಾದ ವಿಜ್ಞಾನಿಗಳು ಖಚಿತ ಪಡಿಸಿರುವರು.

ಈಗಾಗಲೇ ೩೩ ದಿನಗಳ ಕಾಲ ಸ್ಪೇಸ್ ಸ್ಟೇಷನ್‌ನಲ್ಲಿರುವ ಲ್ಯಾಬ್‌ನಲ್ಲಿ ಬೆಳೆಯಲಾಗಿರುವ ಈ ತರಕಾರಿಯನ್ನು ಆಗಸ್ಟ್ ೨೦೧೫ರ ಸೋಮವಾರ ಮೊದಲ ವಾರದಂದು ಕಟಾವು ಮಾಡಿರುವರು. ಇದನ್ನು ಅಲ್ಲಿದ್ದ ಆರು ಜನ ವಿಜ್ಞಾನಿಗಳು ಪ್ರೀತಿಯಿಂದ ಖುಷಿಖುಷಿಯಲಿ ಸೇವಿಸಿದ್ದಾರೆ! ಇದು ಮೊತ್ತ ಮೊದಲಾಗಿದೆ!

ಅಲ್ಲಿ ಸಿಟ್ರಿಕ್ ಆಮ್ಲದಿಂದ ಸ್ವಚ್ಛಗೊಳಿಸಿ ಲೆಟ್ಯೂಸ್‌ನ್ನು ನಾಸಾ ವಿಜ್ಞಾನಿಗಳು ಬಳಸಿರುವರು. ಇವರು ಅರ್ಧ ತಿಂದು ಉಳಿದರ್ಧವನ್ನು ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿಟ್ಟು ಭೂಮಿಗೆ ವಾಪಾಸ್ಸು ತಂದಿರುವರು! ಇಲ್ಲಿ ಅದನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗುವುದೆಂದು ವಿಜ್ಞಾನಿಗಳು ಖಚಿತ ಪಡಿಸಿರುವರು.

– ಹೀಗೆ ನಾಸಾದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರ ಅರಿವಿಗೆ ತಂದಿದ್ದು ಇನ್ನೂ ಹೆಚ್ಚಿನ ಸಂಶೋಧನೆಗಿಲ್ಲಿ ವಿಫುಲವಾದ ಅವಕಾಶವಿದೆ. ಇನ್ನು ಏನೇನು ಹೊಸಹೊಸ ಸಂಶೋಧನೆಗಳು ಜರುಗುತ್ತವೆಂಬುದನ್ನು ಕಾದು ನೋಡೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳೆಯದು
Next post ಕಾಳು ನೀಡು ಹಕ್ಕಿಗಳಿಗೆ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…