ಸಿದ್ಧಾರ್‍ಥರು

ಬೋಧಿ ವೃಕ್ಷದ ಚಿತ್ರ
ಬರೆದವರೆಲ್ಲ ಬುದ್ಧರಲ್ಲ
ಹೆಚ್ಚೆಂದರೆ ಸಿದ್ದಾರ್‍ಥರು!
ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು
ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ.
ಯಾಕೆಂದರೆ-
ಬುದ್ಧರಾಗುವವರ ಬಾಯಲ್ಲಿ
ನರಿ, ಮರಿಹಾಕುವುದಿಲ್ಲ.

ನರಿ ನಾಲಗೆಯಲ್ಲಿ
ನಯವಾಗಿ ನೆತ್ತರು ನೆಕ್ಕುತ್ತ
ಸುಳ್ಳಿನ ಸುಗಮ ಸಂಗೀತದಲ್ಲಿ
ನಂಬಿದವರ ನರಕಿತ್ತು ಸರ ಮಾಡಿ
ಹಾಡುತ್ತ ಓಡಾಡುತ್ತಾರೆ-ಈ ಸಿದ್ದಾರ್‍ಥರು.
ದ್ರೌಪದಿಯ ದಾರಿ ಬಿಟ್ಟು ಧನುಸ್ಸು ಹಿಡಿದು
ಸನ್ಯಾಸಿಯ ಸೋಗಿನಲ್ಲಿ ಸಂ-ಸಾರ
ಹೂಡಬಯಸುತ್ತಾರೆ-ಈ ಪಾರ್‍ಥರು.

ಸಿದ್ದಾರ್‍ಥರೊಳಗಿನ ಪಾರ್‍ಥರನ್ನು ನಂಬಿ
ಕುದುರೆಯೇರಿದ ಚದುರೆಯರು
ಕಣ್ಣಪಟ್ಟಿ ಕಳಚಿಕೊಳ್ಳುವ ವೇಳೆಗೆ
ಅನ್ವರ್‍ಥದ ಆರೋಪದಲ್ಲಿ ಬೀಗುವ ಈ ಸಿದ್ಧಾರ್‍ಥರು
ಬೋಧಿವೃಕ್ಷದ ಪೊಟರೆಯೊಳಗೆ
ಚದುರೆಯರ ಚಂದ ಕನಸುತ್ತ
ಕಾಲು ಚಾಚುತ್ತಾರೆ ಜೊಲ್ಲು ಸುರಿಸುತ್ತ.
ಇತ್ತ ಬುದ್ಧ ಭ್ರಮೆಯ ಗತ್ತಿನಲ್ಲಿ ಚಿತ್ತಾದ ಚದುರೆಯರು
ಕುದುರೆಗೆ ಕಾಲು ಮುರಿದು ಕೆನದಾಗ ಕನಸೊಡೆದು
ಕಂಗಾಲಾಗುತ್ತಾರೆ ಚಡಪಡಿಸುತ್ತ.

ಇಲ್ಲ, ಬೋಧಿವೃಕ್ಷದ ಚಿತ್ರ
ಬರೆದವರೆಲ್ಲ ಬುದ್ದರಲ್ಲ,
ಹೆಚ್ಚೆಂದರೆ ಸಿದ್ದಾರ್‍ಥರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Gustave Flaubertನ Madame Bovary ಅನೈತಿಕತೆಯ ದುರಂತ
Next post ಮೊದಲು ಸೀರೆಯನುಟ್ಟಾ ಕ್ಷಣ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…