Gustave Flaubertನ Madame Bovary ಅನೈತಿಕತೆಯ ದುರಂತ

Gustave Flaubertನ Madame Bovary ಅನೈತಿಕತೆಯ ದುರಂತ

Charles Bovary ಒಬ್ಬ ಹಳ್ಳಿಹುಡುಗ. ೧೫ರ ಪ್ರಾಯದ ಆತ ತನ್ನ ತರಗತಿಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಎತ್ತರವಾಗಿದ್ದಾನೆ. ಅಸಂಬದ್ಧ ಉಚ್ಛಾರ, ಅಸ್ತವ್ಯಸ್ತ ವೇಷಭೂಷಣ, ಅಸುಸಂಸ್ಕೃತ ವರ್ತನೆಗಳಿಂದ ತರಗತಿಯಲ್ಲಿ ಗುರುತಿಸಲ್ಪಡುತ್ತಾನೆ. ಆದರೆ ಆತ ಹಾಗೆ ಉಳಿಯುವುದಿಲ್ಲ. ತನ್ನ ವಿಧ್ಯಾಬ್ಯಾಸ ಮುಗಿಸಿದ ಆತ Tostes ನಲ್ಲಿ ಡಾಕ್ಟರರಾಗಿ ನೆಲೆನಿಲ್ಲುತ್ತಾನೆ ಆತನಿಗೆ ಎರಡು ಪಟ್ಟು ಹೆಚ್ಚು ವಯಸ್ಸಾದ ಕುರೂಪಿಯೂ ಆದ ಆತನ ಮೊದಲ ಪತ್ನಿ ಬಹುಬೇಗನೇ ಮರಣ ಹೊಂದುತ್ತಾಳೆ. ಆ ನಂತರವೇ Emma Bovary ಆತನಿಗೆ ಪರಿಚಿತಳಾಗುತ್ತಾಳೆ. ಆಕೆಯ ತಂದೆಯ ಮುರಿದ ಕಾಲನ್ನು ಸರಿಮಾಡಲು ಬಂದ ಚಾರ್ಲ್ಸ ಎಮ್ಮಾಳನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ.

Emma Bovary ರಮ್ಯ ರೋಮಾಂಚಿತ ಭಾವ ಪ್ರಪಂಚದಲ್ಲಿ ಸದಾ ಓಲಾಡುವ ಹೆಣ್ಣು; ಅಂತಹ ಕಾದಂಬರಿಗಳ ಓದು ಆಕೆಯ ವ್ಯಕ್ತಿತ್ವವನ್ನೂ ಬಣ್ಣಮಯಗೊಳಿಸಿದೆ. ಹಾಗಾಗಿ ಆಕೆ ತನ್ನ ಬದುಕಿನ ತುಂಬಾ ಥ್ರಿಲ್‌ಗಳ ಕುತೂಹಲಗಳ ಒಂದು ಆವರಣವನ್ನು ಕಟ್ಟಿಕೊಂಡಿದ್ದಾಳೆ. ಅಂತಹ ಬಯಕೆ ಆಕೆಯದು. ಆದರೆ ಆಕೆಯ ಆ ಎಲ್ಲ ಕನಸು ಭ್ರಮೆಗಳು ಚಾರ್ಲ್ಸನೊಂದಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಭ್ರಮನಿರಸನಗೊಳ್ಳುತ್ತವೆ. ಆಕೆ ಬಯಸಿದ ಯಾವುದೊಂದು ವ್ಯಕ್ತಿತ್ವವೂ ಆತನಲ್ಲಿಲ್ಲದೇ ಆಕೆ ಪರಿತಪಿಸುತ್ತಾಳೆ. ಹತಾಶೆಗೊಳ್ಳುತ್ತಾಳೆ. ಆ ಬದುಕಿನ ಕೂಪದಿಂದ ಪಾರಾಗಲು ತನ್ನದೇ ಕನಸಿನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾಳೆ. ನನಸಾಗದ ನಿರಾಶೆಯಿಂದ ಖಾಯಿಲೆಗೆ ಬಲಿಯಾಗುತ್ತಾಳೆ.

ಎಮ್ಮಾ ವಿಚಿತ್ರವಾದರೂ ಪಾಶ್ಚಾತ್ಯ ಸ್ತ್ರೀ ಸಮುದಾಯದ ಒಂದು ಜ್ವಲಂತ ಉದಾಹರಣೆಯಂತೆ ಕಂಡುಬರುತ್ತಾಳೆ. ಅಷ್ಟೇ ಅಲ್ಲ ಆಧುನಿಕ ಭಾರತದ ಒಂದು ವರ್ಗದ ಸ್ತ್ರೀ ಪಾತ್ರವಾಗಿಯೂ ಆಕೆಯನ್ನು ಸಮೀಕರಿಸಬಹುದು. ಬರೀಯ ವಾಸ್ತವತೆಯನ್ನು ಅರಿಯದೇ ಕನಸಿನ ಕಲ್ಪನೆಯ ಬದುಕನ್ನೇ ನಿಜವೆಂದು ಭ್ರಮಿಸುವ ಅಪಕ್ವತೆಯ ಹಣ್ಣಾಗಿ ಹೆಣ್ಣಾಗಿ ಕಾಣುತ್ತಾಳೆ ಎಮ್ಮಾ. ಇನ್ನೊಂದು ರೀತಿಯಲ್ಲಿ ವಾಸ್ತವ ಮತ್ತು ಊಹೆಯ ಬದುಕನ್ನು ಅರ್ಥೈಸಲಾಗದ ಕೀಳು ಅಭಿರುಚಿಯ ಹೆಣ್ಣಾಗಿಯೂ ಕಂಡುಬರುತ್ತಾಳೆ. ಇನ್ನೊಂದು ಮೂಲದಲ್ಲಿ ಹೆಣ್ಣಿನ ಆಂತರ್ಯದ ಗೊಂದಲದ ವ್ಯಕ್ತಿತ್ವಕ್ಕೆ ಸಾಕ್ಷಿಯೂ ಆಗುತ್ತಾಳೆ.

ಫ್ಲಬರ್ಟ ಚಾರ್ಲ್ಸನ ಸರಳ ಸ್ವಭಾವ ಸಾಕಾರವೆಂಬಂತೆ ಚಿತ್ರಿಸಿದ್ದಾನೆ. Tostes ನಲ್ಲಿ ನೈರಾಶ್ಯದ ಕೂಪದಲ್ಲಿ ಒದ್ದಾಡುತ್ತಾ ಅನಾರೋಗ್ಯದ ಹಾಸಿಗೆಯಲ್ಲಿ ಬಳಲುತ್ತಿದ್ದವಳ ಆರೈಕೆಗಾಗಿ ಆತ ಸ್ಥಳ ಬದಲಾವಣೆಯ ಮಾಡಿ ಕುಟುಂಬವನ್ನು ಎಮ್ಮಾಳ ರಮ್ಯ ಆಕರ್ಷಣೆಯ ದೊಡ್ಡ ಪಟ್ಟಣವಾದ Yonville L’Abbaye ಗೆ ಬದಲಾಯಿಸುತ್ತಾನೆ. ಆದರಾತನಿಗೆ ಎಮ್ಮಾಳ ಮಾನಸಿಕ ವ್ಯಾಪಾರಗಳ ತುಮುಲಗಳ ಅರ್ಥೈಸಲಾಗುವುದಿಲ್ಲ. ಆತನೊಬ್ಬ ಪುರುಷ. ಅದರಲ್ಲೂ ಬದುಕು ಎಂದರೆ ಪತ್ನಿ, ಪುತ್ರಿ ಅವರ ಕಾಳಜಿ ಅವರನ್ನು ಆತ ಬಹಳವಾಗಿ ಪ್ರೀತಿಸುತ್ತಾನೆ. ಅದರೆ ಅದನ್ನು ವ್ಯಕ್ತಗೊಳಿಸುವ ಮಾರ್ಗ ತಿಳಿದವನಲ್ಲ. ಸೊಗಸು ಮಾತುಗಾರನಲ್ಲ. ರಸಿಕನಲ್ಲ. ಆಕೆಗೋಸ್ಕರ ವಾಸ್ತವ್ಯ Yonville L’Abbaye ಬದಲಾಯಿಸಿಕೊಂಡ ಅವರ ಕುಟುಂಬಕ್ಕೆ ಪರಿಚಿತರಾಗುತ್ತಾರೆ ಡೋಂಗಿ ಮುಖವಾಡದ ಡ್ರಗಿಸ್ಟ Homais ಹಾಗೂ ನೋಟರಿಯ ಕ್ಲರ್ಕ Leon.

ಅಲ್ಲಿ ಆಕೆ ಮೋಹಕ ವ್ಯಕ್ತಿತ್ವದ ಲಿಯೋನ್‌ನಲ್ಲಿ ಮೋಹಿತಳಾಗುತ್ತಾಳೆ. ಆದರೆ ಅದು ಅವರಿಬ್ಬರನ್ನು ಆಕರ್ಷಿಸುವ ಮುನ್ನವೇ ಲಿಯೋನ್ ಪ್ಯಾರಿಸ್‌ಗೆ ಹೊರಟುಹೋಗುತ್ತಾನೆ. ಹೀಗೆ ಆಕೆಯ ನಿರಂತರದ ತೃಪ್ತಗೊಳ್ಳದ ತಹತಹದಲ್ಲಿ ಇರುವಾಗಲೇ ಪರಿಚಿತನಾಗುವ Rodolphe Boulanger ಆಕೆಯ ಓಳತೋಟಿಯ ತುಮುಲ ನಿರಸಭಾವಗಳ ಗುರುತಿಸಿಬಿಡುತ್ತಾನೆ. ಹೆಂಗಳೆಯರ ಬದುಕಿನೊಂದಿಗೆ ಹಲವಾರು ಪಾತ್ರಗಳ ಹಾಕಿದ ಆತ ವಿಷಯಲಂಪಟ. ಸ್ತ್ರೀ ಬದುಕಿನೊಂದಿಗೆ ಚಕ್ಕಂದವಾಡುವ ಪಾತ್ರದವ. ಆದರಾಕೆ ಆತನ ವ್ಯಕ್ತಿತ್ವ ಅರಿಲಾಗದೇಯೋ ಅಥವಾ ಅರಿತೋ ಅತನೊಬ್ಬ ಸಮರ್ಥನೆಂಬಂತೆ ಭಾವಿಸಿ ಸಂಪೂರ್ಣವಾಗಿ ಆತನ ವಶವಾಗುತ್ತಾಳೆ. ಸ್ತ್ರೀತ್ವವನ್ನು ಮಾರಿಕೊಳ್ಳುತ್ತಾಳೆ.

ಇದಾಗಿ ಆರು ತಿಂಗಳಲ್ಲೇ ಆತ ಆಕೆಯ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ವರ್ತಿಸುತ್ತಲೂ ಆಕೆ ಪುನಃ ತನ್ನ ಗಂಡ ಚಾರ್ಲ್ಸನನ್ನೇ ಪ್ರೀತಿಸಲು ಪ್ರಾರಂಭಿಸುತ್ತಾಳೆ. ಸುಗಮ ಸಂಸಾರಕ್ಕೆ ಸರಿತೂಗಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಲೇ ಇರುವಾಗಲೇ ಕಾರಣಾಂತರಗಳಿಂದ ಚಾರ್ಲ್ಸ ಬಗ್ಗೆ ಮತ್ತೆ ಹತಾಶೆಗೊಂಡು ರೋಡಾಲ್ಫನೊಂದಿಗೆ ಓಡಿ ಹೋಗವ ನಿರ್ಧಾರಕ್ಕೆ ಬರುತ್ತಾಳೆ. ಆದರಾತ ಹೇಳಿದ ದಿನ ಬರದೆ ಆಕೆಗೆ ಮೋಸ ಮಾಡುತ್ತಾನೆ. ಇದರಿಂದ ಆಶಾಭಂಗಗೊಂಡ ಆಕೆ ವಿಪರೀತ ಕಾಯಿಲೆ ಬೀಳುತ್ತಾಳೆ.

ಅವಳ ಆರೈಕೆಗಾಗಿ ಮನಸ್ಸಿನ ಖುಷಿಗಾಗಿ ಬದಲಾವಣೆಗೋಸ್ಕರ Rouenನಲ್ಲಿ ನಾಟಕ ನೋಡಲು ಚಾರ್ಲ್ಸ ಕರೆದುಕೊಂಡು ಹೋದಾಗ ಪುನಃ ಆಲ್ಲಿ ಆಕೆಗೆ ಲಿಯೋನ್ ಭೇಟಿಯಾಗುತ್ತದೆ. ಆತನೊಂದಿಗೆ ತನ್ನ ಹಳೆಯ ಚಟವನ್ನು ಮುಂದುವರೆಸುತ್ತಾಳೆ. ಪ್ರೇಮ ಜಗತ್ತಿನ ಕಾಮನಬಿಲ್ಲನ್ನು ಏರಿದ ಆಕೆ ಆತನಿಂದ ಬಲಾತ್ಕಾರಕ್ಕೆ ಒಳಗಾದಾಗಲೂ ಸಂತಸಪಡುತ್ತಾಳೆ. ಆದರೆ ಎಲ್ಲಾ ಸಂದರ್ಭ ಹೀಗೆ ಇರುವುದೆಂದು ಹೇಳಲಾಗದು. ಲಿಯೋನ್ ನೊಂದಿಗೆ ಅಕೆಯ ಚಕ್ಕಂದ ಕಂಡ ಬಡ್ಡಿ ವ್ಯಾಪಾರಸ್ಥ Lheuteux ಕ್ರಮೇಣ ಆಕೆಯನ್ನು ಬ್ಲಾಕ್ ಮೇಲ್ ಮಾಡತೊಡಗುತ್ತಾನೆ. ಇದೇ ಸಮಯದಲ್ಲೇ ಚಾರ್ಲ್ಸನ ತಂದೆ ತೀರಿಹೋಗಲು ಪಿತ್ರಾರ್ಜಿತ ಆಸ್ತಿಯನ್ನು ತನಗೇ ಬರೆದು ಕೊಡುವಂತೆ ಇಲ್ಲದಿದ್ದರೆ ಆಕೆಯ ವೃತ್ತಾಂತವನ್ನೆಲ್ಲಾ ಚಾರ್ಲ್ಸನಿಗೆ ಹೇಳುವುದಾಗಿ ಬೆದರಿಸುತ್ತಾನೆ ಆತ. ಆತ ಹೇಳಿದಂತೆ ದಾಖಲೆಗಳಿಗೆಲ್ಲಾ ಸಹಿಮಾಡಿದ ಆಕೆಯ ಸಹಾಯಕ್ಕೆ ಯಾರೊಬ್ಬ ಆಕೆಯ ಗೆಳೆಯರೂ ಬರುವುದಿಲ್ಲ. ಏಕಾಂಗಿಯಾಗುತ್ತಾಳೆ ಸಹಾಯ ಕೇಳಿದ ಅನ್ಯರೂ ಆಕೆಯನ್ನು ದೈಹಿಕವಾಗಿ ಬಯಸಿ ಕಿರಿಕಿರಿಯುಂಟುಮಾಡುತ್ತಾರೆ. ಆಕೆಗೆ ಸಂಬಂಧಿಸಿದ ಎಲ್ಲ ಆಸ್ತಿಪಾಸ್ತಿಗಳನ್ನು Lheuteux ತನ್ನ ವಶಮಾಡಿಕೊಳ್ಳುತ್ತನೆ. ಹೀಗಾಗಿ ಇವೆಲ್ಲವನ್ನೂ ಚಾರ್ಲ್ಸನಲ್ಲಿ ಹೇಳಿಕೊಳ್ಳಲೂ ಆಗದೆ ಬಿಡಲೂ ಆಗದೆ ನಿಸ್ಸಾಯಕಳಾದ ಎಮ್ಮಾ ಹೋಮೇಸನ ಔಷಧಾಲಯದಿಂದ ತಂದ ಅರೆನ್ಸಿಕ್ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಇದರೊಂದಿಗೆ ಆಕೆಯ ರಮ್ಯ ಜಗತ್ತಿನ ಕೊನೆಯಾಗುತ್ತದೆ. ಕಾದಂಬರಿ ಮುಖ್ಯ ಸಂಗತಿ ಎಂದರೆ ಎಮ್ಮಾಳ ಮೂರ್ಖತೆಯಿಂದ ಕೂಡಿದ ರಮ್ಯಕನಸುಗಳು ಹೇಗೆ ಆಕೆಯ ಬದುಕನ್ನು ಬಲಿಪಡೆದವು ಎಂಬುದಾಗಿದೆ. ರಮ್ಯತೆಯ ಕನಸು ಒಂದು ಕಾಯಿಲೆ. ಉತ್ತಮ ವಿಚಾರಗಳ ತೊಡೆದು ಕನಸಿನ ಲೋಕದಿ ವಿಹರಿಸುವ ಮನಸ್ಸು ಕ್ರೀಯಾಶೀಲವಾಗದು. ಬದಲಿಗೆ ದುರಂತ ಅಂತ್ಯ ಅದರ ಫಲವೆಂಬ ಸತ್ಯವನ್ನು ಪ್ಲಬರ್ಟ ಚೆನ್ನಾಗಿ ನಿರೂಪಿಸಿದ್ದಾನೆ. ಎಮ್ಮಾ ಓದುಗರ ಕರುಣೆಗೆ ಪಾತ್ರವಾಗುತ್ತಾಳೆ. ಆಕೆಯ ಮೂರ್ಖ ಮುಗ್ಧತೆಗಾಗಿ, ಪತಿಗೆ ಮೋಸಮಾಡಿದರೂ ತನ್ನ ರಮ್ಯತೆಯ ಕಲ್ಪನೆಯಲ್ಲಿ ನಿಜಕ್ಕೂ ನಂಬಿದ ವ್ಯಕ್ತಿಗಳಿಂದ ಮೋಸಹೋಗಿರುವುದಕ್ಕಾಗಿ, ಪ್ಲಬರ್ಟ ಪ್ರಕಾರ ಹೆಂಗಳೆಯರು ಕಾದಂಬರಿಗಳಿಂದ ಓದುವುದರಿಂದ ಅಲ್ಲಿಯ ಉತ್ಪ್ರೇಕ್ಷೆಗಳಿಂದ ಕೂಡಿದ ಸಕಲ ಗುಣ ಸಂಪನ್ನರಾದ ನಾಯಕರಿಂದ ಪ್ರಭಾವಿತರಾಗಿ ನಿಜ ಬದುಕಿನಲ್ಲೂ ಆಂತಹ ನೀರೀಕ್ಷೆಗಳಿಂದ ಬದುಕಿನಲ್ಲಿ ವಿಫಲತೆಗಳನ್ನು ಅನುಭವಿಸುತ್ತಾರೆ.

ಚಾರ್ಲ್ಸನ ಕೊನೆ ಮಾತ್ರ ನೋವಿನ ಎಳೆಯನ್ನು ಎದೆಯಲ್ಲಿ ಗೀರುತ್ತದೆ. ಪತ್ನಿಯನ್ನು ಬಹಳವಾಗಿ ನಂಬಿದ ಚಾರ್ಲ್ಸಗೆ ಆಕೆಯ ಅನೈತಿಕ ವ್ಯವಹಾರಗಳು ತಿಳಿಯುತ್ತಲೇ ಆತನ ಹೃದಯ ಒಡೆದುಹೋಗುತ್ತದೆ. ಭಗ್ನಹೃದಯಿಯಾದ ಆತ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ. ಅವರಿಬ್ಬರ ಒಂದೇ ಕುಡಿ ಅನಾಥಳಾಗುತ್ತಾಳೆ. ಚಾರ್ಲ್ಸ ಒಬ್ಬ ಅಯಶಸ್ವಿ ವೈದ್ಯ. ಆದಾಗ್ಯೂ ಆತ ತನ್ನ ಮೂರ್ಖತೆಯಲ್ಲೂ ಸದ್ಗುಣಿ. ಆತನೆಲ್ಲಾ ಪ್ರಯತ್ನಗಳು ಕನಸುಗಳು ತನ್ನಿಡಿ ಕುಟುಂಬದ ಶ್ರೇಯಸ್ಸಿಗಾಗಿ. ಕಾದಂಬರಿಯಲ್ಲಿ ಆತನ ಶ್ರೇಷ್ಟತೆ ಪ್ರಕಟವಾಗುವುದು ಎಮ್ಮಾಳ ಆತ್ಮಹತ್ಯೆ ನಂತರ ರೋಡಾಲ್ಫ ತನ್ನೊಂದಿಗಿನ ಎಮ್ಮಾಳ ಅನೈತಿಕ ಸಂಬಂಧವನ್ನು ಹೊರಗೆಡುವಿದಾಗ. ಕೋಪೋಗ್ರನಾದ ಚಾರ್ಲ್ಸ ರೊಡಾಲ್ಫನಿಗೆ ಅಲ್ಲೇ ಸದೆಬಡಿಯಬಯಸುತ್ತಾನೆ. ಆದರೆ ನಿಮಿಷಾರ್ಧದಲ್ಲಿ ತನ್ನ ನಿಗ್ರಹಿಸಿಕೊಳ್ಳುತ್ತಾನೆ.

೧೯ನೇ ಶತಮಾನದ ಪ್ರೆಂಚ್ ಸಾಹಿತ್ಯದಲ್ಲಿ ಫ್ಲಬರ್ಟ ಹೆಸರುವಾಸಿಯಾಗಿದ್ದ. ೧೮೨೧ರ ಡಿಸೆಂಬರ್ ೧೨ರಂದು Rouen ನಲ್ಲಿ ಜನಿಸಿದ ಫ್ಲಬರ್ಟ ತನ್ನ ತಂದೆತಾಯಿಯರ ಆರು ಜನ ಮಕ್ಕಳಲ್ಲಿ ನಾಲ್ಕನೆಯವನು. ತಂದೆ Dr. Flaubert
ವೈದ್ಯನಾಗಿದ್ದು ಆಸ್ಪತ್ರೆಯ ವಾತಾವರಣ ಚಿರಪರಿಚಿತವಾಗಿತ್ತು. ಹಾಗಾಗಿ ಕಾದಂಬರಿಯಲ್ಲಿ ಮೆಡಂ ಬೊವೆರಿಯ ಸಾವಿನ ಹಾಸಿಗೆಯ ದೃಶ್ಯ ಪರಿಣಾಮಕಾರಿವಾಗಿ ಮೂಡಿಬಂದಿದೆ.L’ Education Sentimantale, La Temptation de Saint antonie ಮುಂತಾದ ಕೃತಿಗಳನ್ನು ಬರೆದ ಫ್ಲಬರ್ಟ ೧೮೮೦ರಲ್ಲಿ ಮೂರ್ಛೆರೋಗಕ್ಕೆ ಬಲಿಯಾಗಿ ಮರಣಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟನ ಹಳ್ಳಿ
Next post ಸಿದ್ಧಾರ್‍ಥರು

ಸಣ್ಣ ಕತೆ

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…