ನಿನ್ನಳವಿನರಿವು ನನಗಿಲ್ಲ
ಹೊನ್ನ ಬಣ್ಣವನು ತಿಳಿಯ ಬೇಕೆಂದಿಲ್ಲ
ಚಿನ್ನ!
ನಿರಂತರವಾದ ಸ್ವಭಾವ ಗುಣವನು
ಪರತಂತ್ರನಾದ ಹುಲು ಮನುಜ
ಎಂತು ಬಲ್ಲನು ಹೇಳು.
ಅಂದು ಒಂದೆ ನೋಟಕೆ
ಬಂದೆ ನನ್ನ ಬದುಕಿಗೆ
ನಿನ್ನ ಬಯಕೆ ಅದೇನೋ
ನನ್ನ ಬಯಕೆ ನೀನಲ್ಲ……
ಆದರೆ ಮರುಳೆ….
ಇಂದು ನೀನು ನನ್ನುಸಿರು,
ಉಸಿರಿನೆಳೆಯಲ್ಲಿ ಜೀವ ಹಸಿರು
ಮುಂದಿದೆ ಹಿರಿದಾರಿ
ಅದರ ಕೊನೆಯ ಸುಳಿವಿಲ್ಲ
ಮುನ್ನಡೆಯಲು ಒಂಟಿಗ
ನನ್ನಳವಲ್ಲ.
ನಿನ್ನ ಜತೆ, ವ್ಯಥೆ
ಬೇಕು ಸಾಗಲು ಕಥೆ.
*****


















