ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಲೋ. ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ ಇಂಥಿಂಥವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿಯನ್ನು ಅನುಕರಿಸಲಿಲ್ಲ; ಶ್ರೀ ಶಿವಾಜಿಮಹಾರಾಜರು ಸ್ವರಾಜ್ಯಸ್ಥಾಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ ‘ಗನೀನೊಕಾವಾ’ ಯುದ್ಧವು ಅಪೂರ್ವವಾಗಿತ್ತು. ಕೇಸರನು ಮೊದಲಿನ ಯುದ್ಧದ ಎಲ್ಲ ಪದ್ಧತಿ-ರೂಢಿಗಳನ್ನು ತಿರಸ್ಕರಿಸಿ ಹೊಸ ಪದ್ಧತಿಯನ್ನೇ ಗೊತ್ತುಮಾಡಿಕೊಂಡನಲ್ಲವೆ! ಪ್ರಗತಿಗಾಮೇಚ್ಛುವು ರೂಢಿಗಳನ್ನು ವಿಶೇಷವಾಗಿ ದುಷ್ಟರೂಢಿಗಳನು ಅನುಕರಣಮಾಡುವ ಗೊಡವಿಗೆ ಸರ್ವಥಾ ಹೋಗಬಾರದು.

ಹಿಂದೆ ಆಗಿಹೋದ ಎಲ್ಲ ಮುಂದಾಳುಗಳು ರೂಢಿವಿನಾಶಕರೇ ಆಗಿದ್ದರೆನ್ನಬಹುದು. ಪ್ರತಿಯೊಂದು ಪ್ರಕೃತಿಯು ರೂಪ, ಲಾವಣ್ಯ, ಸ್ವಭಾವ ಮೊದಲಾದವುಗಳಲ್ಲಿ ಭಿನ್ನವಾಗಿರಲು, ಆ ಪ್ರಕೃತಿಯು ಭಿನ್ನ ಪ್ರಕೃತಿಯವರ ರೂಢಿಯನ್ನು ಅನುಕರಿಸುವದಾದರೂ ಹ್ಯಾಗೆ ಯೋಗ್ಯವೆನಿಸುವದು?ಪ್ರಸಿದ್ಧಿಗೆ ಬಾರದ ಮುಂದಾಳುವಾಗದ ಮನುಷ್ಯನು ಎಂಥ ಸಾಮರ್‍ಥ್ಯವಂತನಿದ್ದರೂ, ಬಹು ದೊಡ್ಡ ಶ್ರೀಮಂತನಿದ್ದರೂ ಕೇವಲ ಬುದ್ಧಿವಂತನಿದ್ದರೂ ಪ್ರಯೋಜನವಿಲ್ಲ. ಯಾಕಂದರೆ ಅವನು ರೂಢಿಗಳ ನಾಶಕ್ಕೆ ಬಹಳ ಹೆದರುತ್ತಿದ್ದದರಿಂದ ಅವನ ಸಾಮರ್ಥ್ಯವೂ ದುಡ್ಡೂ, ಬುದ್ಧಿಯೂ ಪ್ರಯೋಜನವಾಗುವದಿಲ್ಲ. ಆಪೂರ್ವತೆಯೂ, ನಿರ್ಭಯತನವೂ ಯಶಸ್ವಿಪ್ರರುಷನ ಮುಖ್ಯಲಕ್ಷಣಗಳಾಗಿವೆ. ಹಳ್ಳೇ ದುಷ್ಟರೂಢಿಗಳು ಅವು ಎಷ್ಟೇ ಪ್ರಾಚೀನಗಳಾಗಿರಲಿ, ಅವುಗಳ ಬಗ್ಗೆ ಪ್ರಗತಿಗಾಮಿಯಲ್ಲಿ ಆದರವಿರಲಾರದು. ಹಳೇದನ್ನು ತೀಡುತ್ತ ಕೂಡ್ರದೆ, ಅವನು ಅದರಲ್ಲಿಯ ಯೋಗ್ಯ ಗುಣವನ್ನಷ್ಟು ಸ್ಟೀಕರಿಸುವನು. ಪ್ರಗತಿಗಾಮಿಗಳು ಆತ್ಮವಿಶ್ವಾಸದಿಂದ ಪ್ರೇರಿತರಾಗಿ ಯೋಗ್ಯ ವಿಚಾರಿಗಳಾಗಿ ಧೈರ್ಯದಿಂದ ಯುಕ್ತರಾಗಿ ಶೋಧಕಬುದ್ಧಿಯವರಾಗಿ ಸಮಾಜಿರೂಢಿಗಳನ್ನು ಮುರಿಯುವರು; ಹಾಗು ಹಿಂದೆ ಯಾರೂ ಎಂದೂ ತುಳಿಯದ ಮಾರ್ಗವನ್ನು ತುಳಿದು ಪ್ರಗತಿಹೊಂದುವರು.

ಒಂದು ಸಂಗತಿಯು ಕೇವಲ ಹೊಸದೆಂದು ಅದನ್ನು ಮಾಡಲು ಹೆದರಬಾರದು. ಹಾಗು ನಮ್ಮ ತಂದೆಯ, ಅಜ್ಜ-ಮುತ್ತಜ್ಜರ, ಆಪ್ತೇಷ್ಟರ, ಮಿತ್ರರ ಇಲ್ಲವೆ ಸಮಾಜದ ದುಷ್ಟ ರೂಢಿಗಳನ್ನು ತಿಳಿದೂತಿಳಿದು ಅನುಕರಣೆ ಮಾಡಬಾರದು. ಇಂಥ ರೂಢಿಗಳ ಅನುಕರಣೆ ಮಾದೋಣವು ಕೇವಲ ಹಾಸ್ಯಾಸ್ಪದವಾಗಿರುವದು. ಪ್ರತಿಯೊಬ್ಬ ಮನುಷ್ಯನು ಒಂದು ವಿಶಿಷ್ಟಕಾರ್ಯಕ್ಕಾಗಿ ಅವತರಿಸಿರುತ್ತಾನೆ. ಆದರೆ ಅವನು ರೂಢಿವಿನಾಶಕನಾಗದ್ದರಿಂದ ಇಷ್ಟಾರ್‍ಥವನ್ನು ಸಾಧಿಸಿಕೊಳ್ಳದೆ ಮರಣಹೊಂದುವನು. ಪ್ರಸಿದ್ಧಿಗೆ ಬರುವ ಮನುಷ್ಯನು ಅನುಕರಣತಪ್ರಿಯನಾಗಿರದೆ, ಸ್ವತಂತ್ರವಿಚಾರ ಆಚಾರದವನಾಗಿರುತ್ತಾನೆ. ಅವನು ಮಾಡುವ ಪ್ರತಿಯೊಂದು ಕೃತಿಯು, ಉದ್ಯೋಗವು ಉಪದೇಶವು, ಯುಕ್ತಿಗಳು ಕೇವಲ ಅವರ ಸ್ವಂತದ ವಿಚಾರದವಾಗಿರುತ್ತವೆ.

ಹೆರೆವರ ಸಹಾಯದ ಹೊರತು ಪ್ರಗತಿ ಹೊಂದಲಿಕ್ಕೆ ಯಾರು ಹೆದರುವರೋ ರೂಢಿಗಳನ್ನು ಒದೆದು ಮುಂದಕ್ಕೆ ಬರಲು ಯಾರಿಗೆ ಧೈರ್ಯ ಸಾಲದೋ ಇಂಥವರು ಪ್ರಖ್ಯಾತರಾಗುವದಂತೂ ಒತ್ತಟ್ಟಿಗಿರಲಿ. ಇವರು ಜಗತ್ತಿನಲ್ಲಿ ಇರುವರೆಂಬದು ಕೂಡ ಮಂದಿಗೆ ಗೊತ್ತಾಗುವ ಸಂಭವವಿಲ್ಲ. ಅನುಕರಣೆದಂಥ ನಾಶಕಾರಕವಾದ ಪ್ರಗತಿಗೆ ಬಾಧೆತರುವಂಥ ಬೇರೊಂದು ಸಂಗತಿಯು ಸಿಗಲಾರದು. ಅನುಕರಣದಿಂದ ಸ್ವಂತದ ವಿಶಿಷ್ಟತ್ವವು ಇಲ್ಲದಂತಾಗುವದು; ಉತ್ಪಾದಕ ಶಕ್ತಿಯು ನಾಶವಾಗುವದು. ಕಲ್ಪಶಕ್ತಿಯು ಕುಂಠಿತವಾಗುವದು. ಯಶಃಪ್ರಾಪ್ತಿಯು ಅನುಕರಣದಿಂದ ಸರ್ವಧಾ ಪ್ರಾಪ್ತವಾಗುವದಿಲ್ಲ;

ಎಷ್ಟೋಜನರು ಲೋ. ಟಿಳಕರಂತೆ ಪೋಕ್ತವಾದ ಭಾಷಣಮಾಡೆಲೆಳೆಸಿಯೂ, ಮ. ರಾ. ರಾ. ಹರಿ ನಾರಾಯಣ ಅಪಟೆ ಇವರಂತೆ ಕಾದಂಬರಿಗಳನ್ನು ಬರೆಯೆಲೆಳಿಸಿಯೂ, ಪ್ರೋ. ರಾಮಮೂರ್ತಿ ಇಲ್ಲವೆಸ್ಯಾಂಡೋ ಅವರಂತೆ ಅಂಗಸಾಧನ ಮಾಡಬೆಳೆಸಿಯೂ, ಮಿ. ಅಬ್ದುಲ್‌ಕರಿಮಖಾನ ಅಲ್ಲವೆ ಬಾಲಗಂಧರ್ವ ಇವರಂತೆ ಗಾನಾಲಾಪಮಾಡಲೆಳೆಸಿಯೂ, ಪ್ರಸಿದ್ಧಹರಿದಾಸರ ಇಲ್ಲವೆ ಪೌರಣಿಕರ ಅದರಂತೆ ಸಾಧು ಸಜ್ಣನರ ಇಲ್ಲವೆ ಸನ್ಯಾಸಿಗಳ ಅನುಕರಣಮಾಡಲೆಳಿಸಿಯೂ ಪ್ರಖ್ಯಾತರಾಗಬೇಕೆನ್ನುವರು.. ಆದರೆ ಮಂದಿಯ ಅನುಕರಣವು (ನಕಲು) ಚೆನ್ನಾಗಿ ಸಾಧಿಸದ್ದರಿಂದ ಆ ಹತಭಾಗಿಗಳು “ಹಿಂದಿನ ಮನೆ ಭಿಕ್ಷವೂ ಹೋಯಿತು, ಮುಂದಿನ ಮನೆಯ ಕೋರಾನ್ನೆವೂ ತಪ್ಪಿತು.” ಎಂಬಂತೆ ನಿರಾಶರಾಗುವರು; ಅಲ್ಲದೆ ಅನುಕರಣಮಾಡುವವನು ತನ್ನ ನೈಸರ್ಗಿಕ ವಿಶಿಷ್ಟಗುಣವನ್ನು ಕೂಡ ಶಾಶ್ವತವಾಗಿ ಕಳಕೊಳ್ಳಬೇಕಾಗುತ್ತದೆ. ಅನುಕರಣವು (ನಕಲು) ನೈಸರ್ಗಿಕ ವೃತ್ತಿಗಿಂತ ಭಿನ್ನವಾಗುವದು. ಹ್ಯಾಗೆಂದರೆ, ಅನ್ನವನ್ನು ಪುನಃ ಬೇಯಿಸಿದರೆ, ಅದರ ರುಚಿಯು ಅಕ್ಕಿ ಅನ್ನಗಳಿಗಿಂತ ತೀರಭಿನ್ನವಾಗುವದಲ್ಲದೆ, ಪಚನಶಕ್ತಿಗೆ ಕೂಡ ಅದು ಹೆಚ್ಚು ಜಡವಾಗುವದು. ಇದರಂತೆ ನೈಸರ್ಗಿಕ ವೃತ್ತಿಯವನ ಆಚಾರ ವಿಚಾರಗಳು ಜನರಿಗೆ ರುಚಿಸುವಂತೆ, ಅನುಕರಣ ಮಾಡುವವನ ಆಚಾರ ವಿಚಾರಗಳು ರುಚಿಸುವದಿಲ್ಲ. ಇಷ್ಟೇ ಅಲ್ಲ ಜನರು ಆ ಅನುಕರಣೆಯನ್ನು ಹೆಚ್ಚಾಗಿ ದ್ವೇಷಿಸಹತ್ತುವರು.

ಸ್ವಾತಂತ್ರ್ಯ ಪ್ರೀತಿಯನ್ನು ಜಾಗ್ರತಗೊಳಿಸದ್ದರಿಂದಲೂ, ಸ್ವಂತದಲ್ಲಿ ದೃಢನಿಶ್ಚಯವಿರದ್ದರಿಂದಲೂ ಅನುಕರಣದಂಥ ಹೇಯವೃತ್ತಿಯನ್ನು ಮನುಷ್ಯ ಸ್ವೀಕರಿಸಬೇಕಾಗುತ್ತದೆ. ಅನುಕರಣಮಾಡುವವರ ಸಂಖ್ಯೆಯು ಹೆಚ್ಚು ಇದ್ದಂತೆ, ಅನುಕರಣೀಯ ಪ್ರರುಷರ ಸಂಖ್ಯೆಯು ಹೆಚ್ಚು ಇರುವದಿಲ್ಲ. ಆ ಜನರು ಬಹುಸ್ವಲ್ಪಮಂದಿಗಳಿರುವರು, ಖರೇ ಅನುಕರಣೀಯ ಮನುಷ್ಯನು ವಿಶಿಷ್ಟಕೃತಿಯನ್ನು ಮಾಡಿ, ಪ್ರಗತಿಹೊಂದುವನು. ಇವನೇ ದಾಸ್ಯದ ಶೃಂಖಲೆಯನ್ನು ಚೂರುಮಾಡಲಿಕ್ಕೆ ಕಾರಣನಾಗುವನು. ಪ್ರಗತಿಹೊಂದುವ ಇಚ್ಛೆಯುಳ್ಳವನು ಇಂಥ ಮನುಷ್ಯನ ಪ್ರತಿಯೊಂದು ಕೃತಿಯನ್ನು ಅನುಕರಣ ಮಾಡದೆ, ಅವನಲ್ಲಿಯ ಎಶಿಷ್ಟಗುಣಗಳಲ್ಲಿ ಯಾವವು ತಮ್ಮ ವಿಶಿಷ್ಟೆಗುಣಗಳ ಪೋಷಣೆಗೆ ಅವಶ್ಯವಾಗಿರುವವೋ ಅವುಗಳನ್ನು ಮಾತ್ರ, ಹುಲಿಯು ಇಡಿ ಪ್ರಾಣಿಯನ್ನು ತಿನ್ನದೆ ಬರೇ ರಕ್ತವನ್ನು ಹೀರಿಕೊಳ್ಳುವಂತೆ, ಶೋಷಿಸಿಕೊಳ್ಳತಕ್ಕದ್ದು.

ದೃಢನಿಶ್ಚಯದ ಹಾಗು ಅಲೌಕಿಕ ಮನುಷ್ಯನಿಗೆ ಯೋಗ್ಯ ಮಾರ್ಗ ತೋರಿಸಲಿಕ್ಕೆ ಸೃಷ್ಟಿಯು ಸದಾತತ್ಸರವಾಗಿರುತ್ತದೆ! ಪರಾವಲಂಬಿಯೂ, ಹೇಡಿಯೂ ಆದವನಿಗೆ ಅದು ಕೊಂಚವೂ ಸಹಾಯ ಮಾಡಲಾರದು. ಲೋಕದಲ್ಲಿ ಅಪೂರ್ವತೆಯುಳ್ಳವರ ಅವಶ್ಯಕತೆಯು ಹೆಚ್ಚಾಗಿರುವದು. ಕೇವಲ ಹೊಸ ಪದ್ಧತಿಯಿಂದ ಔಷಧ ಕೊಡುವ ವೈದ್ಯರೂ, ಹೊಸ ಹೊಸ ತರದ ಯಂತ್ರಗಳನ್ನು ತಯಾರಿಸುವ ಯಂತ್ರಕಲಾನಿಪುಣರೂ, ವಿಶಿಷ್ಟಪದ್ಧತಿಯಿಂದ ಖಟ್ಲೆ ನಡಿಸುವ ವಕೀಲರೂ, ಹಿಂದೆ ಯಾರೂ ಬೋಧಿಸದೆ ಇದ್ದರೀತಿಯಿಂದ ಬೋಧಿಸುವ ಉಪದೇಶಕರೂ, ಹೊಸ ಪದ್ಧತಿಯಿಂದ ಕಲಿಸುವ ಶಿಕ್ಷಕರೂ, ವಿಶೇಷವಾಗಿ ಬೇಕಾಗಿರುವರು. ಈಗಿನ ಮನ್ವಂತರದಲ್ಲಿ ಇಂಥ ಜನರ ಮೇಲಾಟವು ನಡದೇ ಇರುವದು. ಆದರೂ ಎಂಥ ಹೊಸ ವಸ್ತುವಾದರೂ ಅದನ್ನು ಒಮ್ಮೆ ಉಪಯೋಗಿಸಿದ ಮಾತ್ರದಿಂದ ಆದು ‘ಸೆಕಂಡಹ್ಯಾಂಡ’ ಎಂದು ಕರೆಯಲ್ಪಟ್ಟು ಬೆಲೆಯಲ್ಲಿ ಅದು ಹ್ಯಾಗೆ ಕಡಿಮೆತರದ್ದುಗುವದೋ ಹಾಗೆ ಇಂದಿನ ವಿಶಿಷ್ಟತ್ವವು ನಾಳೆಗೆ ಹಳೆಯದಾಗುವದರಿಂದ, ಪ್ರಗತಿಗಾಮಿಗಳು ತಮ್ಮ ವಿಶಿಷ್ಟತ್ವವನ್ನು ಸ್ಥಾಪಿಸಲು ಹಿಂದೆಗೆಯಬಾರೆದು.

ನಾವು ಪ್ರಗತಿಹೊಂದಲಿಕ್ಕೆ ಬೇಕಾಗುವ ಶಕ್ತಿಯು ನಮ್ಮಲ್ಲೇ ಇರುತ್ತದೆ. ಅದು ನಮ್ಮ ವಿಶಿಷ್ಟ ಈರ್ಷೆಯೆಲ್ಲಿಯೂ, ದೃಢನಿಶ್ಚಯದಲ್ಲಿಯೂ, ನಡಾವಳಿಯಲ್ಲಿಯೂ, ಅಪೂರ್ವತೆಯಲ್ಲಿಯೂ ತುಂಬಿ ತುಳುಕುತ್ತಿರುತ್ತದೆ. ಹೊರಗಿನ ಶಕ್ತಿಯ ಅಪೇಕ್ಷೆಮಾಡದೆ ಎಷ್ಟು ಬೇಗನೆ ಸ್ವಾವಲಂಬಿಗಳಾಗಿ ನಡೆಯಹತ್ತುವೆವೋ ಅಷ್ಟು ಬೇಗನೆ ನಾವು ನಿಶ್ಚಯದಿಂದ ಪ್ರಗತಿಯನ್ನು ಹೊಂದಿ ದಾಸ್ಯ ವಿಮೋಚಿತರಾಗುವೆವು.

ನಮ್ಮಲ್ಲಿಯ ಆಪೂರ್ವತೆಯನ್ನು ತೋರಿಸಲು ನಮಗೆ ಧೈರ್ಯ ಸಾಲದ್ದರಿಂದ ನಾವು ಪರರಿಗೆ ದಾಸರಾಗಿರಬೇಕಾಗಿದೆ. ಯಾರು ಅಪೂರ್ವತೆಯೆನ್ನು ತೋರುವರೋ ಅವರು ಒಂದಿಲ್ಲೊಂದು ರೀತಿಯಿಂದ ಪ್ರಸಿದ್ಧಿಗೆ ಬಂದೇಬರುವರು. ಯಶಸ್ವಿ ಉದ್ಯೋಗಸ್ತನಿಗೆ ಜಗತ್ತು ಅಪೂರ್ವವಾಗಿ ತೋರುವದು: ಅವನು ಸಾಧ್ಯವಿದ್ದಮಟ್ಟಿಗೆ ಅಪೂರ್ವತೆಯನ್ನು ತನ್ನ ಉದ್ಯೋಗದಲ್ಲಿ ಉಪಯೋಗಿಸುವನು. ಯಾವ ರೂಢಿಗಳನ್ನೂ ಅನುಕರಣಮಾಡುವ ಗೊಡವಿಗೆ ಅವನು ಹೋಗುವದಿಲ್ಲ. ಜಗತ್ತು ಅಂದರೆ ಹಲವು ದುಷ್ಟರೂಢಿಗಳ ಹಾಗು ಅಂಧಪರಂಪರೆಗಳ ದ್ಯೋತಕವಾಗಿರುವದೆಂದು ಭಾವಿಸಿ ಅದಕ್ಕೆ ಎದೆಗೊಡಲು ಅವನು ಯಾವಾಗಲೂ ಸಿದ್ದನಾಗಿರುತ್ತಾನೆ.

ಪ್ರಸ್ತುತದ ಮಹಾಯುದ್ಧದಲ್ಲಿ ನಿನ್ನೆ ಉಪಯೋಗಿಸಿದ ಪ್ರಚಂಡ ತೋಪುಗಳು ಈ ದಿನ ನಿರುಪಯೋಗಿಗಳಾಗಿ ತೋರುವವು; ಅವಕ್ಕಿಂತ ಗತಿಯಲ್ಲಿ ಹೆಚ್ಚಾಗಿಯೂ ಭಾರದಲ್ಲಿ ಕಡಿಮೆಯಾಗಿಯೂ ಬೇರೆ ವಿಶಿಷ್ಟತ್ವವುಳ್ಳವುಗಳಾಗಿಯೂ ಆಗಿರುವ ಇಂದಿನ ತೋಫುಗಳು ಅವನ್ನು ತುಚ್ಚೀಕರಿಸಿಬಿಡುವವು. ಅದರಂತೆ ಈ ವರೆಗೆ ಪ್ರಚಾರದಲ್ಲಿದ್ದ ಉಗಿಬಂಡಿಗಳನ್ನು ವಿಮಾನಗಳು, ತಂತಿಟಪಾಲನ್ನು ತಂತಿಯಿಲ್ಲದೆ ಈಧರದ ದ್ವಾರಾ ಬರುವ ಟಪಾಲುಗಳು ಆಕ್ರಮಿಸಿ ತಮ್ಮ ತಮ್ಮ ವಿಶಿಷ್ಟಗುಣಗಳಿಂದ ಮೆರೆಯ ಹತ್ತಿರುವ, ಹಿಂದಕ್ಕೆ ಪ್ರಚಾರದಲ್ಲಿದ್ದ ಶಿಲಾ ಪ್ರೆಸ್ಸುಗಳು ಮೂಲಿಗೆ ಬಿದ್ದು ಮೊಳೆಗಳ ಛಾಪಖಾನೆಗಳು ಈಗಿನ ಸುಧಾರಣೆಯಲ್ಲಿ ಕಂಗೊಳಿಸುತ್ತಿರುವವು. ಕೆಲವು ವರ್ಷಗಳ ಮುಂಚೆ ಇದ್ದ ಹತ್ತೀರಾಟಿಗಳು ಜಂಗುಹಿಡಿಯಹತ್ತಿ ಜಿನ್ನುಗಳೂ, ಪ್ರೆಸ್ಸುಗಳೂ ಮುಂದುವರೆಯೆಹತ್ತಿರುವವು; ಹೀಗೆ ಲೋಕದಲ್ಲಿ ವಿಶಿಷ್ಟತ್ವಕ್ಕೆ ಮಹತ್ವವುಂಟಾಗಿರುವದರಿಂದ ಪ್ರತಿಯೊಬ್ಬನೂ ಯೋಗ್ಯವಾದ ಮಾರ್ಗವನ್ನವಲಂಬಿಸಿ ಪ್ರಗತಿಯನ್ನು ಹೊಂದ ಹತ್ತಬೇಕು.

ಯಾರು ಹೊಸದನ್ನು ತಿರಸ್ಕರಿಸುವರೋ, ಹಳೇದನ್ನು ಅನುಕರಿಸುವದರಲ್ಲಿಯೂ, ಅದರ ವಿಷಯಕ್ಕೆ ಅಭಿಮಾನವಹಿಸುವದರಲ್ಲಿಯೂ ಭೂಷಣವೆಂದು ತಿಳಕೊಳ್ಳುವರೋ, ಅಪೂರ್ವತೆಯನ್ನು ವ್ಯಕ್ತಗೊಳಿಸುವದು ಯಾರಿಗೆ ಶಕ್ಯವಾಗಿ ತೋರುವದಿಲ್ಲವೋ, ಇಂಥವರ ಪ್ರಗತಿಯು ಬಹುಶಃ ಆಗುವದಿಲ್ಲ. ಕಠಿಣಸಂಗತಿಗಳನ್ನು ಅಶಕ್ಯವೆಂದು ತಿಳಿಯುವದೇ ಪ್ರಗತಿರಹಿತನ-ಆಪೂರ್ವತೆಯು ಇಲ್ಲದವನ ಮುಖ್ಯ ಲಕ್ಷಣವಾಗಿದೆ. ಇದಕ್ಕೆ ಮಹಾಭಾರತದೊಳಗಿನ ಒಂದು ಚಿಕ್ಕಸಂಗತಿಯ ಉದಾಹರಣೆಯೆನ್ನು ಕೊಡುವಾ!

ದುರ್ಯೋಧನನು ಸಭೆಯಲ್ಲಿ ಕುಳಿತಾಗ ಆಕಸ್ಮಿಕವಾಗಿ ನಾರದರು ಬಂದರು. ಆಗ ರಾಜನು ನಾರದರನ್ನು ಯಧಾಯೋಗ್ಯ ಉಪಚರಿಸಿ,-ಸ್ವಾಮಿ, ನೀವು ತ್ರಿಲೋಕಸಂಚಾರಿಗಳು, ಯಾವದಾದರೂ ಹೊಸ ಸಂಗತಿಯನ್ನು ಕಂಡಿದ್ದರೆ ತಿಳಿಸುವದಾಗಬೇಕು ಎಂದು ಕೇಳಿಕೊಂಡನು. ಅದಕ್ಕೆ ನಾರದರು-ವಿಶ್ವಾಸದಿಂದ ಕೇಳುತ್ತಿದ್ದರೆ ಹೇಳುವೆನು, ಎಂದು ಹೇಳಲು, ದುರ್ಯೋಧನನು ಒಪ್ಪಿಕೊಂಡನು ಆಗ ನಾರದರು-ವಿಶ್ವಾಸದಿಂದ ಕೇಳಬೇಕು ಮಹಾರಾಜಾ, ವಿಷ್ಣು ಲೋಕದಿಂದ ಭೂಲೋಕಕ್ಕೆ ಬರುವಾಗ ಮಾರ್ಗದಲ್ಲಿ ವಿಶ್ವಾಸದಿಂದ ಕೇಳಬೇಕು ಮೆಹಾರಾಜಾ ಒಂದು ಸೂಜಿಯಹೆಜ್ಜದಲ್ಲಿ ಅಕ್ಷೋಹಿಣ ಗಟ್ಟಲೆ ಸೈನ್ಯವು ಹಾಯ್ದುಹೋಯಿತು ಎಂದು ಹೇಳಿದನು. ಅದನ್ನ ದುರ್ಯೋಧನನು ಆಶಕ್ಯವೆಂದು ಭಾವಿಸಿ ನಕ್ಕನು. ಮರ್ಮವನ್ನು ತಿಳಿದ ನಾರದರು ಕೂಡಲೆ ಅಲ್ಲಿಂದ ಹೊರಟರು ಧರ್ಮರಾಜನಿದ್ದಲ್ಲಿಗೆ ಹೋಗಿ ಅವನಿಗೂ ಈ ಸಂಗತಿಯನ್ನು ಮೇಲಿನಂತೆಯೇ ನಿವೇದಿಸಿದರು, ಆದರೆ ಸ್ವತ ಅಪೂರ್ವ ಸ್ವಭಾವವುಳ್ಳ ಧರ್ಮರಾಜನಿಗೆ ನಾರದರ ವಾಕ್ಯವು ಸತ್ಯವಾಗಿ ತೋರಿತು. ಧರ್ಮರಾಜನು ತನ್ನ ಅಪೂರ್ವತೆಯನ್ನು ವ್ಯಕ್ತಗೊಳಿಸಿ ಸುಯೋಧನನಂಥ ಮಹಾಬಲಿಷ್ಟನನ್ನು ಸಹ ಹೇಳಹೆಸರಿಲ್ಲದಂತೆ ಮಾಡಿದನು.

ಆದ್ದರಿಂದ ಪ್ರಗತಿಗಾಮಿಯುಳ್ಳ ಮನುಷ್ಯನಿಗೆ ಯೊವ ಸಂಗತಿಯೂ ಅಶಕ್ಯವಾಗಿ ತೋರುವದಿಲ್ಲ. ಸಂಕಟಿಗಳಿಗೂ, ದ್ವೇಷ ಅಸೂಯೆಗಳಿಗೂ, ಉಪಹಾಸ-ಅಪಮಾನಗಳಿಗೂ ಹೆದರದೆ, ಹಳೆ ರೂಢಿ-(ದುಷ್ಟರೂಢಿಗಳನ್ನು) ಕಿತ್ತು ಒಗೆಯುವ, ಹಾಗು ಪ್ರತಿನಿತ್ಯ ಅಪೂರ್ವತೆಯನ್ನು ತೋರುವ ಮನುಷ್ಯರಿಂದರೇ ಈ ಇಪ್ಪತ್ತನೆಯ ಶತಮಾನದ ಎಲ್ಲ ಸುಖ ಸಂಪತ್ತುಗಳು ಸಿದ್ಧವಾಗಿರುವವು.

ಪ್ರತಿಧ್ವನಿ, ಅನುಕರಣ, ನಕಲು ಈ ತ್ರಯಿಗಳ ಸಂಗತಿಯಿಂದ ಯಾವನ ಮಹತ್ವಾಕಾಂಕ್ಷೆಯೂ ಈಡೇರಲಾರದು. ಸ್ವಾತಂತ್ರ್ಯ ಪ್ರೀತಿಯುಳ್ಳ, ದೃಢನಿಶ್ಚಯವುಳ್ಳ ಹಾಗು ರೂಢಿಗಳ ಬಗ್ಗೆ ನಿರ್ಭಯವುಳ್ಳ ಮನುಷ್ಯನಿಂದಲೇ ಯಾವದಾದರೂ ಹೊಸ ಕಾರ್ಯೆವಾದರೂ ಆಗಬೇಕು. ಇಂಥ ಸ್ವಭಾವವುಳ್ಳವರು ನಿಶ್ಚಿತಕಾರ್ಯವನ್ನು ಒಮ್ಮೆಲೆ ಆರಂಭಿಸಬೇಕು. ಮೀನ-ಮೇಷ ಮಾಡುತ್ತ ಕೂಡ್ರಬಾರದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯೆ ನನ್ನ ಅರಿಯೆ
Next post ಮುಡಿದ ಹೂ ಮಲ್ಲಿಗೆ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys