ಒಲವಿನರಸಿಗೆ ಮುತ್ತ- ನಿಡೆ ಪ್ರಿಯನು ಬರಲು ತಪ್ಪಿಸಲು ನಾಣವಳ ತನು ಬಳುಕಿಸಿರಲು, ಪ್ರಿಯನ ತುಟಿಗಾಸರೆಯ- ನೀಯದೊಲು ಚೆನ್ನೆ ತಲೆದೂಗುತಿರೆ ಕುರುಳು ಹಾರುತಿಹುದೆನ್ನೆ, ಮೃದು ಸಮೀರನು ಮುತ್ತ- ನೊತ್ತಲ್ಕೆ ಬರಲು ಕಬ್ಬು ಬಳುಕುವುದಹಹ ಗರಿಯೊಲೆಯುತಿರಲು! *****...

ಒಂದೆರಡು ದಿನಗಳಲ್ಲಿ ಅರಮನೆಯ ದೊಡ್ಡಮುದ್ರೆ ಒತ್ತಿರುವ ಪರವಾ ನೆಯು ಜ್ಞಾನಸಾಗರತೀರ್ಧರಿಗೆ ತಲ್ಪಿತು. ಅವರು ಅದನ್ನು ಓದಿಸಿಕೇಳಿದಾಗ ವೇದವ್ಯಾಸ ಉಪಾಧ್ಯನ ಮನವಿಯ ಮೇಲೆ ನೃಪತಿಯು ಕೊಟ್ಟ ಅಪ್ಪ ಣೆಯ ಅಂದವು ತಿಳಿಯಿತು. “ಅಹಾ! ಈ ಹಾರುವನು ಚಾಣಿಕ್ಯನ...

ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ ಪಾದರಸ ಮಧ್ಯೆ ಬಂದರೆ ವಿರಸ ವಿಚ್ಛೇದನವಾ...

ನಗು, ನಗುತ್ತ ಬಂದರು ನರರೂಪ ರಾಕ್ಷಸರು ಕೇಡಾಡಿ ಸುಟ್ಟು ಹಾಕಿದರು. ಹೈನದ ಹಸು ಮಾಡಿ ಹಲ್ಲಲ್ಲಿ ಹೀಜುತ್ತ ಹೋದರು ಕಡೆಗೊಮ್ಮೆ, ಕೆಚ್ಚಲು ಖಾಲಿಯಾಗೆ, ಕೆಟ್ಟ ಕೃಷೆಯಲ್ಲಿ ಕುರುಡಾದರು- ನಿರಾಶಯನು ಹಿಂಸೆಯಲಿ ತಣಿಸಿಕೊಳ್ಳತೊಡಗಿದರು. ಹೆಣ್ಣು- ಧರಿತ್...

ಒಳಿತಾಗಲಿ ಗುರು ಎಲ್ಲರಿಗೆ ಒಳಿತಾಗಲಿ ಪ್ರಭು ಎಲ್ಲರಿಗೆ //ಪ// ತಿಥಿಯೂಟಕೆ ಹಾತೊರೆಯುವ ಮಂದಿಗೆ ಚಿತೆಯಲಿ ಬೀಡಿ ಹಚ್ಚುವ ಮಂದಿಗೆ ಕಂಡವರ ಮನೆ ಜಂತೆಯ ಕಿತ್ತು ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ ಏರುವವರ ಕಾಲೆಳೆಯುವ ಮಂದಿಗೆ ನಡೆವವರಿಗೆ ತೊಡರ್‍ಗಾ...

ಮೂಲ: ಆರ್ ಕೆ ನಾರಾಯಣ್ ಡೂಡುವಿಗೆ ಎಂಟುವರ್ಷ. ಅವನಿಗೆ ಹಣ ಬೇಕಾಗಿತ್ತು. ಅವನಿಗೆ ಇನ್ನೂ ಎಂಟುವರ್ಷವಾದುದರಿಂದ ಯಾರೂ ಅವನ ಆರ್ಥಿಕ ಸಮಸ್ಯೆಗೆ ಇನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. (ಅವನಿಗೆ ನೂರಾರು ಕಾರಣಗಳಿಗಾಗಿ ಹಣ ಬೇಕಾಗಿತ್ತು : ಬರ...

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ, ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು, ಬುಡಮೇಲು ಮಾಡುವುವು ಭವ್ಯ ಕಟ್ಟಡಗ...

ಅಸೂಯೆಯ ಬಿರುಗಾಳಿ ಆನಂದನಿಗೆ ತಂದೆಯ ಈ ರೀತಿಯ ನಡೆವಳಿಕೆಯಿಂದಲೇ ವಿಪರೀತ ಸಿಟ್ಟು ಬರುತ್ತಿದ್ದುದು. ಮನೆಯ ಹಿರಿಯ ಮಗ ತಾನಾದರೂ ಅನುರಾಧಳ ಮಾತಿಗಿದ್ದ ಮಾನ್ಯತೆ ತನ್ನ ಮಾತಿಗಿದೆಯೇ ಎಂದು ಅವನು ಹಲವಾರು ಬಾರಿ ತೂಗಿ ನೋಡುವುದಿತ್ತು. ಆದರೆ ಯಾವಾಗಲೂ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...