ಒಮ್ಮೆ ಒಂದು ನಾಯಿ ಯೋಚಿಸಿತು. ಇದೇನು? ನಾನು ಸರ್ವ ವಿಧದಲ್ಲಿ ನನ್ನ ಒಡೆಯನನ್ನು ಪ್ರೀತಿಸುವೆ, ಆದರೆ ನನ್ನ ಬಾಲ ನನ್ನ ದೇಹಕ್ಕೆ ತೊಟ್ಟಿನಂತೆ ಅಂಟಿಕೊಂಡು ನನ್ನ ಹೃದಯದ ಪ್ರೀತಿಗಿಂತ ತಾನು ಅಳ್ಳಾಡಿಸುವ ಬಾಲದ ಪ್ರೀತಿಯೇ ಹೆಚ್ಚು ಎಂದು ತಿಳಿಯುತ್ತಿದೆ. ಪುಟಗೋಸಿ ಬಾಲಕ್ಕೆ ಅದೆಷ್ಟು ಜಂಭ! ಸೊಟ್ಟಗಿದ್ದರು ತನ್...

ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ...

(ಒಂದು ರೂಪಕ ಕಥನ) ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು, ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು. ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ! ಹುರುಳಿ ಹೆ...

ಗುರುವೇ ನಿನ್ನ ಪಾದ ಧೂಳಿನ ಕಣದ ಕಣ ನಾನು| ಕರುಣೆ ತೋರುತಿರು ನೀನು ಪರಿಪೂರ್ಣನಾಗುವವರೆಗೂ ನಾನು|| ದೀನ ನಾನು ನಿನ್ನ ಅಧೀನನು ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು | ನಿನ್ನನೇ ನಂಬಿಹೆನು ನಾನು ಮಹಾ ಸಾಗರನು ನೀನು ಆ ಸಾಗರದಲೊಂದು ಹನಿಯಾಗಿಸಿ ಎನ್...

ನೆತ್ತರ ಕಡಲಲಿ ಉತ್ತರ ಹುಡುಕುವ ಚಿತ್ತದ ಮದರಸ ಸುರಿಯುತಿದೆ ಸುಂದರ ವನದಲ್ಲಿ ಚಂದಿರ ಸೊರಗಿ ಕತ್ತಿ ಕಠಾರಿಯ ಬೆಳೆಯುತ್ತಿದೆ. ನೆತ್ತರ ಮಳೆಯಲಿ ಕತ್ತಲ ಬೆಳೆಗಳು ತೂಗುವ ತೆನೆಗಳು ಕೆನೆಯುತ್ತಿವೆ ಮಂದಿರ ಸಿಡಿಲು ಮಸೀದಿ ಗುಡುಗು ಬೆಳಕಿನ ಕಣ್ಣು ಕರಗ...

ಸಮಕಾಲೀನ ಸಂದರ್ಭದ ಭಾರತದಲ್ಲಿ ಸಾಮಾನ್ಯ ಶಿಕ್ಷಣವು ಡೋಲಾಯಮಾನವಾಗುತ್ತಿದೆ. ಇಂತಹ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ಮೀರಿದ ಮತ್ತು ಇದರೊಂದಿಗೆ ಅಂತರ್ ಸಂಬಂಧವನ್ನು ಇರಿಸಿಕೊಂಡ ಒಟ್ಟು ನಮ್ಮ ವ್ಯವಸ್ಥೆಯೇ ಕಾರಣವಾಗುತ್ತಿದೆ. ಇದರಲ್ಲಿ ವರ್ತಮಾನವ...

ಅಮ್ಮನೊಂದು ಮುದ್ದಿನ ಪಂಚ ಕಲ್ಯಾಣಿ ಬೆಕ್ಕಿನ ಮರಿಯನೊಂದು ಸಾಕಿದಳು ತಟ್ಟೆ ಹಾಲು ಹಾಕಿದಳು ಕಣ್ಣನು ಮುಚ್ಚುತ ಕುಡಿವದು ಹಾಲನು ಬಂದು ಸೇರುವುದು ಬೆಚ್ಚನೆ ಮಡಿಲನು ಇಲಿಗಳ ಹಿಡಿವುದು ಜಿರಲೆಯ ತಿನುವುದು ಮಿಯಾಂವ್ ಎನುತಲೆ ಮೆಚ್ಚುಗೆ ಕೇಳುವುದು ಅಮ್...

ಮುದ್ದು ಮರಿ ನಾಯಿ ಮರಿ ಬೇಗ ಬೇಗ ಹಾಲು ಕುಡಿ ಅಪ್ಪ ಬಂದ್ರೆ ಪೇಟೆಯಿಂದ ಕ್ಯುಂ ಕ್ಯುಂ ರಾಗ ತೆಗಿ ನಿನಗೆ ನೋಡು ಬಿಸ್ಕೇಟು ನನಗೆ ಮಾತ್ರ ಚಾಕ್ಲೇಟು ಅಮ್ಮ ಬಂದ್ಲು ನೋಡು ಸುಮ್ಮನವಳ ಕಾಡು ಕೊಡುವಳು ನಿಂಗೆ ತಿಂಡಿ ಜೋರಾಗಿ ಕಿವಿಯನು ಹಿಂಡಿ. *****...

ಬಾನಂಗಳದಲಿ ಹಾರುವ ಹಕ್ಕಿಗೆ ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ ನಿರ್ಭಂಧಗಳಾಚೆ ತಂಬೆಲರ ತಾಣ. ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ ಹಗುರವಾಗುತ್ತಿದ್ದಾಳೆ ಅವಳು ಇಷ್...

ಹುಲ್ಲು ಕಡ್ಡಿ ಗೂಡು ಕಟ್ಟಿ ಹಕ್ಕಿ ಕಾಯುವುದು ನಾಳೆಗೆ ಕಾಳುಗಳನು ಹೆಕ್ಕಿ ತಂದು ಅಳಿಲು ಕಾಯುವುದು ನಾಳೆಗೆ ಎಲೆಯುದುರಿಸಿ ಚಳಿಯಲ್ಲಿ ಮರ ಕಾಯುವುದು ನಾಳೆಗೆ ನೆಲ ಉತ್ತು ಬೀಜ ಬಿತ್ತಿ ರೈತ ಕಾಯುವುದು ನಾಳೆಗೆ ಬಾವಿ ಕಟ್ಟೆ ಸುತ್ತ ನಿಂತು ಏನು ಗುಸ...

ಕ್ರೀಡೆಯ ಅತ್ಯುನ್ನತ ವಿಶಿಷ್ಟ ಸಾಧನೆಗೆ ನೀಡಲಾಗುವ ಭವ್ಯ ಭಾರತದ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿಯಾದ ರಾಜೀವ್‌ಗಾಂಧಿ ಖೇಲಾ ರತ್ನ ಪ್ರಶಸ್ತಿಗೆ ಹೈದ್ರಾಬಾದಿನ ಟೆನಿಸ್ ಆಟಗಾರ್‍ತಿ ಸಾನಿಯಾ ಮಿರ್‍ಜಾ ಭಾಜನರಾಗಿರುವುದು ಇಡೀ ದೇಶಕ್ಕೆ ಸಂದ ಗೌರವವಾಗ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...