Home / Kannada

Browsing Tag: Kannada

ಕರಗುವ ಇರುಳಿನ ಹಣೆಯಲ್ಲಿ ಮೂಡಲ ಗಿರಿಯ ಮಣೆಯಲ್ಲಿ ಹೂಳೆಯುವ ರತ್ನದ ಹಣತೆಯನು ಹಚ್ಚುವರಾರು ಮರೆಯಲ್ಲಿ? ಬೆಟ್ಟವು ಬಾನಿನ ಕಡೆಗೇಕೆ ತೊರೆಗಳು ತಗ್ಗಿನ ಕಡೆಗೇಕೆ? ನಭದಲಿ ತೇಲುವ ನೀಲಿ ಹಂಡೆಗಳು ಮಣ್ಣಿಗೆ ಉರುಳುವುದೇತಕ್ಕೆ? ಹೂವನು ಚಿಮ್ಮುವ ಮುದವೇನ...

ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. ಮುಂದೆ ಓದಲು ಅಮ್ಮನನ್ನು ಹೇಗೆ ಒಪ್ಪಿಸುವುದು- ಎಂಬುದೇ ದೊಡ್ಡ ಚಿಂತೆಯಾಗಿತ್ತು. ಆದರೆ...

ಓ, ಮಹಾತ್ಮನೆ, ನಿನ್ನ ಬಂದಿಸಿಟ್ಟಿಹರೆಂದು ಹಲರು ತಿಳಿದಿಹರು, ದಿಟ; ಆದರದು ತಪ್ಪೆಣಿಕೆ: ಬಂಧನವ ಬಯಸಿ ಬರಮಾಡಿಕೊಂಡಿಹೆ; ಜನಕೆ ಬಂಧನವೆ ಬಿಡುಗಡೆಗೆ ಹೆದ್ದಾರಿಯೊಂದೆಂದು ತೋರಿಸಲು. ಜಗ ಜನಾಂಗಗಳೆಲ್ಲ ತಾವಿಂದು ತಮ್ಮ ನಾಯಕರಿತ್ತ ಕುರುಡಾಣತಿಯ ಪಿಡ...

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! ಏನಿದು ಮಚ್ಚೆ! ಜಾಗ್ರತೆ ಸ್ವಲ್ಪ! ಗುಂಡಿಲಿ ಬಿದ್ದೀ! ಆಮೇಲ...

ಬಳ್ಳಾರಿ ನೀರಿನ ಜಾತ್ರೆ ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ ಕೊಡಗಳ ಪರ್ವತಶ್ರೇಣಿಯ ನೋಡಮ್ಮ ಒಡಕು ಡಬ್ಬಗಳೇನು ಹಂಡೆಗಳೇನು! ನೂಕು ನುಗ್ಗುಗಳೇನು, ಹಟದ ಪಂಥಗಳೇನು ಓಕುಳೀಯಾಡುವ ಸಂರಂಭವೇನು! ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ ಅಬ್ಬಬ್ಬ ಇವರ...

ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು… ಹುಲ್ಲು, ದವನದಾ ಕೃಷಿಗೇ… ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದ...

ಬೆಂಗಳೂರಿನ ನಮ್ಮ ಬಾಡಿಗೆ ಮನೆಯಲ್ಲಿ ಗುಬ್ಬಚ್ಚಿ ಬಂದು ಗೂಡು ಕಟ್ಟಿದ್ದು ನೋಡಿ ಸಂತಸಗೊಂಡೆವು ನಾನು ನನ್ನವಳು ಗುಬ್ಬಚ್ಚಿಗಳು ಗೂಡುಕಟ್ಟುತ್ತಲೇ ಹೋದವು ಈಗ ನಮಗೆ ನಾಲ್ಕು ಜನ ಮಕ್ಕಳು. *****...

ಬಣ್ಣ ಬಣ್ಣ ವರ್ಣ ವಿವರ್ಣಗಳ ಬಿಳಿ ಕರಿ ಮೋಡಗಳಾಚೆ ತಿಳಿ ನೀಲಿಯಾಕಾಶವೂಂದಿದೆ ಮುಖಗಳು ಒಂದೋ ಮೂರೋ ಹತ್ತೋ ಕೈಗಳು ಎರಡೋ ನಾಲ್ಕೋ ಇನ್ನೆಷ್ಟೋ ವಾಹನ ಆನೆ ಎತ್ತೋ ಇಲಿಯೋ ಹುಲಿಯೋ ಹಾರ ಕಿರೀಟ ವಸ್ತ್ರಾಭರಣಗಳು ಝಗಝಗಿಸುವ ಮೂರ್ತಿ ರೂಪಗಳು ಭವ್ಯದೇಗುಲಗ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...