ನೀಲಿಯಾಕಾಶ

ಬಣ್ಣ ಬಣ್ಣ ವರ್ಣ ವಿವರ್ಣಗಳ
ಬಿಳಿ ಕರಿ ಮೋಡಗಳಾಚೆ
ತಿಳಿ ನೀಲಿಯಾಕಾಶವೂಂದಿದೆ

ಮುಖಗಳು ಒಂದೋ ಮೂರೋ ಹತ್ತೋ
ಕೈಗಳು ಎರಡೋ ನಾಲ್ಕೋ ಇನ್ನೆಷ್ಟೋ
ವಾಹನ ಆನೆ ಎತ್ತೋ ಇಲಿಯೋ ಹುಲಿಯೋ
ಹಾರ ಕಿರೀಟ ವಸ್ತ್ರಾಭರಣಗಳು
ಝಗಝಗಿಸುವ ಮೂರ್ತಿ ರೂಪಗಳು
ಭವ್ಯದೇಗುಲಗಳು ದೇವರುಗಳು
ದೀಪಧೂಪ ನೈವೇದ್ಯಾದಿಗಳು
ಪೂಜೆ ಪುನಸ್ಕಾರ ಮೆರವಣಿಗೆಗಳ ಹಿಂದೆ
ನಿರಾಕಾರ ನಿರಂಜನ ನಿರ್ಗುಣ ನಿರಲಂಕಾರ
ದೇವನೊಬ್ಬನೇ

ಕೋಪ ತಾಪ ತಲ್ಲಣಗಳ
ಆಶೆ ಪಾಶ ಮೋಹದಾಹಗಳ
ಕುತಂತ್ರ ಕುಚೋದ್ಯಗಳ
ಕ್ರೂರ ಹಿಂಸೆಗಳ ಕೊಲೆ ನರಳುಗಳ
ಮಾನುಷ ಜೀವ ಭಾವಗಳ ಹಿಂದೆ
ತಿಳಿ ಮನವೊಂದಿದೆ

ಅಸಂಖ್ಯ ಅಲೆಗಳ ನೂರೆ ಬುರುಗು
ಏಳು ಬೀಳು ಅಬ್ಬರ ಉಬ್ಬರಗಳ ಕೆಳಗೆ
ಅನಂತ ಅಪಾರ ಸಾಗರವೊಂದಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಗುಬ್ಬಚ್ಚಿ ಗೂಡು

ಸಣ್ಣ ಕತೆ

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…